twitter
    For Quick Alerts
    ALLOW NOTIFICATIONS  
    For Daily Alerts

    ಈ ವಾರ 5 ಕನ್ನಡ ಚಿತ್ರಗಳ ಜೊತೆ ಒಂದು ಡಬ್ಬಿಂಗ್ ಸಿನಿಮಾ ಬಿಡುಗಡೆ

    |

    ಪ್ರತಿ ವಾರ ಕೂಡ ಕನ್ನಡದಲ್ಲಿ ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ಶುಕ್ರವಾರ 5 ಕನ್ನಡ ಚಿತ್ರಗಳು ಹಾಗೂ ಒಂದು ತಮಿಳಿನ ಡಬ್ಬಿಂಗ್ ಸಿನಿಮಾ ಚಿತ್ರಮಂದಿರಕ್ಕೆ ಬರುತ್ತಿದೆ.

    ಕಳೆದ ವಾರ 'ಯಜಮಾನ' ಸಿನಿಮಾ ಬಿಡುಗಡೆಯಾಗಿದ್ದು, ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅದರ ನಂತರ 5 ಹೊಸ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಇದರಲ್ಲಿ ರಾಘವೇಂದ್ರ ರಾಜ್ ಕುಮಾರ್ ನಟನೆಯ 'ಅಮ್ಮನ ಮನೆ' ಕೂಡ ಒಂದಾಗಿದೆ.

    'ಅಮ್ಮನ ಮನೆ', 'ಒಂದ್ ಕಥೆ ಹೇಳ್ಲಾ', 'ಗೋಸಿ ಗ್ಯಾಂಗ್', 'ಮದ್ವೆ', 'ಇಬ್ಬರು ಬಿ-ಟೆಕ್ ಸ್ಟೂಡೆಂಟ್ಸ್ ಜರ್ನಿ' ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳಾಗಿವೆ. ಇವುಗಳ ಜೊತೆಗೆ ತಮಿಳಿನ 'ವಿಶ್ವಾಸಂ' ಡಬ್ ಆಗಿ 'ಜಗಮಲ್ಲ' ಹೆಸರಿನಲ್ಲಿ ಕನ್ನಡಕ್ಕೆ ಬರುತ್ತಿದೆ.

    'ಒಂದ್ ಕಥೆ ಹೇಳ್ಲಾ' : ಹೊಸ ಹುಡುಗರು, ಹೊಸದೊಂದು ಪ್ರಯತ್ನ 'ಒಂದ್ ಕಥೆ ಹೇಳ್ಲಾ' : ಹೊಸ ಹುಡುಗರು, ಹೊಸದೊಂದು ಪ್ರಯತ್ನ

    ಅಂದಹಾಗೆ, ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳ ವಿವರ ಮುಂದಿದೆ ಓದಿ...

    ಅಮ್ಮನ ಮನೆ

    ಅಮ್ಮನ ಮನೆ

    'ಅಮ್ಮನ ಮನೆ' ನಟ ರಾಘವೇಂದ್ರ ರಾಜ್ ಕುಮಾರ್ ಅವರ ಕಮ್ ಬ್ಯಾಕ್ ಸಿನಿಮಾ. ಅನಾರೋಗ್ಯದ ಕಾರಣದಿಂದ ನಟನೆಯಿಂದ ದೂರವಿದ್ದ ರಾಘಣ್ಣ ಮತ್ತೆ ಕ್ಯಾಮರಾ ಮುಂದೆ ಬಂದಿದ್ದಾರೆ. ವಿಶೇಷ ಅಂದರೆ, 14 ವರ್ಷಗಳ ಬಳಿಕ ಅವರ ಸಿನಿಮಾ ಬಿಡುಗಡೆಯಾಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ನಿಕಿಲ್ ಮಂಜು ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಒಂದೊಳ್ಳೆ ಕೌಟುಂಬಿಕ ಕಥೆ ಸಿನಿಮಾದಲ್ಲಿದೆ.

    ಕನ್ನಡದಲ್ಲಿ 'ಜಗಮಲ್ಲ'ನಾಗಿ ಸದ್ದು ಮಾಡ್ತಿದೆ ಅಜಿತ್ 'ವಿಶ್ವಾಸಂ' ಕನ್ನಡದಲ್ಲಿ 'ಜಗಮಲ್ಲ'ನಾಗಿ ಸದ್ದು ಮಾಡ್ತಿದೆ ಅಜಿತ್ 'ವಿಶ್ವಾಸಂ'

    ಒಂದ್ ಕಥೆ ಹೇಳ್ಲಾ

    ಒಂದ್ ಕಥೆ ಹೇಳ್ಲಾ

    ಹೊಸ ರೀತಿಯ ಕಥೆ ಹೊಂದಿರುವ 'ಒಂದ್ ಕಥೆ ಹೇಳ್ಲಾ' ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಚಿತ್ರದ ಮೇಕಿಂಗ್ ಅದ್ಬುತವಾಗಿದೆ. 'ಒಂದ್ ಕಥೆ ಹೇಳ್ಲಾ' ಹಾರರ್ ಐತಾಲಾಜಿ ಸಿನಿಮಾ. ಚಿತ್ರದಲ್ಲಿ ಐದು ಕಥೆಗಳು ಇದ್ದು, ಐದೂ ಪಾತ್ರಗಳು ಒಂದೊಂದು ಕಥೆಯನ್ನು ಹೇಳುತ್ತದೆ. ಅದರಲ್ಲಿ ಬರುವ ಭಕ್ತ ಪ್ರಹ್ಲಾದ ಕಥೆಯಲ್ಲಿ ನಿರ್ದೇಶಕ ಗಿರೀಶ್ ಅವರೇ ನಟಿಸಿದ್ದಾರೆ. 'ಜೋಡಿ ಹಕ್ಕಿ' ಧಾರಾವಾಹಿ ಖ್ಯಾತಿಯ ತಾಂಡವ್ ರಾಮ್ ಸೇರಿದಂತೆ ಐದು ಪಾತ್ರಗಳು ಮುಖ್ಯವಾಗಿರುತ್ತದೆ. ಈ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.

    14 ವರ್ಷಗಳ ಬಳಿಕ ರಾಘಣ್ಣ ಒಪ್ಪಿಕೊಂಡ ಈ ಚಿತ್ರ ಯಾವುದು?14 ವರ್ಷಗಳ ಬಳಿಕ ರಾಘಣ್ಣ ಒಪ್ಪಿಕೊಂಡ ಈ ಚಿತ್ರ ಯಾವುದು?

    ಮದ್ವೆ

    ಮದ್ವೆ

    'ತಿಥಿ' ಸಿನಿಮಾವನ್ನು ನೆನಪು ಮಾಡುವ 'ಮದ್ವೆ' ಚಿತ್ರವೂ ಟ್ರೇಲರ್ ಮೂಲಕ ಒಂದಷ್ಟು ಹೆಸರು ಮಾಡಿದೆ. ಮಂಡ್ಯ ಸುತ್ತ ಮುತ್ತಲಿನ ಜನರೇ ಸಿನಿಮಾದ ಕಲಾವಿದರಾಗಿದ್ದಾರೆ. ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಹಿಂದು ಕೃಷ್ಣ ಈ ಚಿತ್ರದ ಡೈರೆಕ್ಟರ್ ಆಗಿದ್ದಾರೆ. 'ಮದ್ವೆ' ಟ್ರೇಲರ್ ಸಖತ್ ಮಜಾ ನೀಡುತ್ತಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಇದೆ.

    ಗೋಸಿ ಗ್ಯಾಂಗ್

    ಗೋಸಿ ಗ್ಯಾಂಗ್

    'ಗೋಸಿ ಗ್ಯಾಂಗ್' ಚಿತ್ರವೂ ಇದೇ ವಾರ ತೆರೆಗೆ ಬರುತ್ತಿದೆ. ಅಜಯ್ ಈ ಚಿತ್ರದ ನಾಯಕನಾಗಿದ್ದಾರೆ. ಜಗ್ಗೇಶ್ ಎರಡನೇ ಪುತ್ರ ಯತಿರಾಜ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ, ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್, ಮೋನಿಕಾ, ಅನುಷಾ ಚಿತ್ರದ ನಟಿಯರು. ಡ್ರಗ್ ಮಾಫಿಯಾದ ಮೇಲೆ ಸಿನಿಮಾದ ಕಥೆ ಹೆಣೆಯಲಾಗಿದೆ.

    ಇಬ್ಬರು ಬಿ-ಟೆಕ್ ಸ್ಟೂಡೆಂಟ್ಸ್ ಜರ್ನಿ

    ಇಬ್ಬರು ಬಿ-ಟೆಕ್ ಸ್ಟೂಡೆಂಟ್ಸ್ ಜರ್ನಿ

    ಈ ವಾರ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳಲ್ಲಿ 'ಇಬ್ಬರು ಬಿ-ಟೆಕ್ ಸ್ಟೂಡೆಂಟ್ಸ್ ಜರ್ನಿ' ಎಂಬ ಚಿತ್ರವೂ ಒಂದಾಗಿದೆ. ಹೆಸರೇ ಹೇಳುವ ಹಾಗೆ ಇದೊಂದು ಕಾಲೇಜ್ ಲವ್ ಸ್ಟೋರಿಯಾಗಿದೆ. ವೇಮುಗಂಟಿ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಗೌತಮ್ ರಾಜ್ ಮತ್ತು ಕಿರಣ್ ಚಿಟ್ಟಾಣಿ ಚಿತ್ರದಲ್ಲಿ ನಟಿಸಿದ್ದಾರೆ. ನಟ ಸಾಯಿ ಕುಮಾರ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಜಗಮಲ್ಲ

    ಜಗಮಲ್ಲ

    ಈ ಎಲ್ಲ ಸಿನಿಮಾಗಳ ಜೊತೆಗೆ ಕಾಲಿವುಡ್ ಸೂಪರ್ ಹಿಟ್ ಸಿನಿಮಾ 'ವಿಶ್ವಾಸಂ' ಕನ್ನಡಕ್ಕೆ 'ಜಗಮಲ್ಲ' ಎಂಬ ಹೆಸರಿನಲ್ಲಿ ಬರುತ್ತಿದೆ. ಚಿತ್ರ ಸಾಹಿತಿ, ನಿರ್ದೇಶಕ ಹೃದಯ ಶಿವ 'ಜಗಮಲ್ಲ' ಚಿತ್ರಕ್ಕೆ ಸಂಭಾಷಣೆ ಹಾಗೂ ಗೀತೆ ರಚನೆ ಮಾಡಿದ್ದಾರೆ. ಹಾರಿಜನ್ ಪ್ರೊಡಕ್ಷನ್ಸ್ ವಿತರಣೆ ಮಾಡ್ತಿದೆ. 'ಜಗಮಲ್ಲ' ಚಿತ್ರದಲ್ಲಿ ಅಜಿತ್ ಕುಮಾರ್ ಡಬಲ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು, ಜಗಮಪತಿ ಬಾಬು ವಿಲನ್ ಪಾತ್ರ ಮಾಡಿದ್ದಾರೆ. ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ.

    English summary
    5 kannada movies will be releasing this week. Among that Raghavendra Rajkumar's come back movie 'Ammana Mane', Ondu Kathe Hella' and 'Jagamalla' are important move.
    Wednesday, March 6, 2019, 8:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X