twitter
    For Quick Alerts
    ALLOW NOTIFICATIONS  
    For Daily Alerts

    ವರ್ಷಾರಂಭದಲ್ಲಿಯೇ 5 ಸುಂದರ ಸಿನಿಮಾಗಳ ಆಗಮನ

    |

    2020 ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ರೀತಿಯಲ್ಲಿ ಶುರುವಾಗಿದೆ. ಒಂದರ ನಂತರ ಒಂದು ಒಳ್ಳೆಯ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುತ್ತಿದೆ.

    ಡಾರ್ಲಿಂಗ್ ಕೃಷ್ಣ ನಿರ್ದೇಶನ ಹಾಗೂ ನಟನೆಯ 'ಲವ್ ಮಾಕ್ ಟೈಲ್' ಪ್ರಜ್ವಲ್ ದೇವರಾಜ್ ನಟನೆಯ 'ಜಂಟಲ್ ಮ್ಯಾನ್', ಶಿವರಾಜ್ ಕೆ ಆರ್ ಪೇಟೆ ನಟನೆಯ 'ನಾನು ಮತ್ತು ಗುಂಡ', 'ಕಾಣದಂತೆ ಮಾಯವಾದನು' ಹಾಗೂ 'ದಿಯಾ' ಎಲ್ಲ ಸಿನಿಮಾಗಳು ಒಂದಕ್ಕಿಂತ ಒಂದು ಚೆನ್ನಾಗಿವೆ.

    Love Mocktail Review: ಬಹಳ ದಿನಗಳ ನಂತರ ಬಂದ ಒಂದೊಳ್ಳೆ ಪ್ರೇಮಕಥೆLove Mocktail Review: ಬಹಳ ದಿನಗಳ ನಂತರ ಬಂದ ಒಂದೊಳ್ಳೆ ಪ್ರೇಮಕಥೆ

    'ಲವ್ ಮಾಕ್ ಟೈಲ್' ಒಂದೊಳ್ಳೆ ಪ್ರೇಮಕಥೆಯಾಗಿದೆ. ಡಾರ್ಲಿಂಗ್ ಕೃಷ್ಣ ಈ ಸಿನಿಮಾದ ಮೂಲಕ ನಿರ್ದೇಶಕರಾಗಿದ್ದಾರೆ. ಇಡೀ ಸಿನಿಮಾ ಮನರಂಜನೆಯಿಂದ ಕೂಡಿದೆ. ಭಾವನಾತ್ಮಕ ಅಂಶಗಳು ಗಮನ ಸೆಳೆಯುತ್ತದೆ. ತುಂಬ ನೈಜವಾಗಿ ಚಿತ್ರೀಕರಣ ಮಾಡಿದ್ದು, ಈ ಕಥೆ ಎಲ್ಲರಿಗೂ ಹತ್ತಿರ ಆಗುತ್ತದೆ.

    5 Movies Which Got Positive Talk In The Beginning Of The Year

    'ನಾನು ಮತ್ತು ಗುಂಡ' ಸಿನಿಮಾ ಒಬ್ಬ ಆಟೋ ಡ್ರೈವರ್ ಹಾಗೂ ಶ್ವಾನದ ನಡುವಿನ ಕಥೆ ಹೇಳುತ್ತಿದೆ. ಈ ಸಿನಿಮಾ ನೋಡಿದ ಬಹುತೇಕ ತುಂಬ ಮೆಚ್ಚಿಕೊಂಡಿದ್ದಾರೆ. ಶಿವರಾಜ್ ಕೆ ಆರ್ ಪೇಟೆ ಹಾಗೂ ಗುಂಡನ ನಟನೆಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ.

    'ದಿಯಾ' ಕೂಡ ಒಂದು ಒಳ್ಳೆಯ ತ್ರಿಕೋನ ಪ್ರೇಮಕಥೆಯ ಸಿನಿಮಾ. ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕರು ಸಿನಿಮಾಗೆ ಫಿದಾ ಆಗಿದ್ದಾರೆ. ಸಿನಿಮಾ ಮೇಕಿಂಗ್, ಪ್ರಮುಖ ಪಾತ್ರಗಳ ನಟನೆ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಅಶೋಕ್ ಕೆ ಎಸ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

    Review: ಇಷ್ಟವಾಗುತ್ತೆ 'ನಾನು ಮತ್ತು ಗುಂಡ'ನ ಕಥೆReview: ಇಷ್ಟವಾಗುತ್ತೆ 'ನಾನು ಮತ್ತು ಗುಂಡ'ನ ಕಥೆ

    'ಕಾಣದಂತೆ ಮಾಯವಾದನು' ಸಿನಿಮಾ ತಮ್ಮ ವಿಭಿನ್ನ ಕಥಾ ಶೈಲಿಯ ಮೂಲಕ ಗಮನ ಸೆಳೆದಿದೆ. ರಾಜ್ ಪತಿಪತಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.

    ಈ ಐದು ಸಿನಿಮಾಗಳು ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆ ಪಡೆದಿವೆ. ವರ್ಷದ ಪ್ರಾರಂಭದಲ್ಲಿಯೇ ಇಂತಹ ಸಿನಿಮಾಗಳು ಬಂದಿದ್ದು, ಈ ವರ್ಷದ ಸಿನಿಮಾಗಳ ಮೇಲೆ ಭರವಸೆ ಹೆಚ್ಚಾಗಿದೆ.

    English summary
    5 kannada movies which got possitive talk in beginning of the year 2020.
    Sunday, February 9, 2020, 16:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X