twitter
    For Quick Alerts
    ALLOW NOTIFICATIONS  
    For Daily Alerts

    ಬಾಮಾ ಹರೀಶ್ ರಿಂದ ದರ್ಶನ್, ಸತ್ಯಾಗೆ ಸನ್ಮಾನ

    By * ಶ್ರೀರಾಮ್ ಭಟ್
    |
    <ul id="pagination-digg"><li class="next"><a href="/news/5-producer-bama-harish-honour-vijayalakshmi-darshan-aid0172.html">Next »</a></li></ul>

    Satya Vijayalakshmi
    "ದಶಕದ ದರ್ಶನ ಸತ್ಯ ಉಲ್ಲಾಸ, 2002-2012, ಎಂಬ ಬ್ಯಾನರ್ ಮೊನ್ನೆ ಮಾರ್ಚ್ 3, 2012ರಂದು ಮಲ್ಲೇಶ್ವರಂ ನ ಜಿಎಮ್ ರಿಜಾಯ್ಸ್ ಸಭಾಂಗಣದ ಗೊಡೆಯನ್ನು ಅಲಂಕರಿಸಿತ್ತು. ಅದು ಅಲ್ಲಿರುವುದಕ್ಕೆ ಕಾರಣ ನಿರ್ಮಾಪಕ ಬಾಮಾ ಹರೀಶ್ ಅದನ್ನು ಅಲ್ಲಿ ಇಡಿಸಿದ್ದರು. ಇದೀಗ್ ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡಿರುವ ದರ್ಶನ್ ಅವರ ಮೊದಲ ಸಿನಿಮಾ 'ಮೆಜೆಸ್ಟಿಕ್' ಹಾಗೂ ಇದೀಗ ಬಿಡುಗಡೆಗೆ ಸಿದ್ಧವಾಗಿರುವ 'ಮಾಗಡಿ' ಚಿತ್ರಗಳ ನಿರ್ಮಾಪಕರಲ್ಲೊಬ್ಬರು ಈ ಭಾಮಾ ಹರೀಶ್.

    ಮೆಜೆಸ್ಟಿಕ್ ಚಿತ್ರದ ಮೂಲಕ 2002ರಲ್ಲಿ ನಾಯಕನಟ, ಸ್ಟಾರ್ ಆದ ದರ್ಶನ್, ಇದೀಗ ಬರೋಬ್ಬರಿ ಹತ್ತು ವರ್ಷಗಳನ್ನು ಪೂರೈಸಿದ್ದಾರೆ. ದರ್ಶನ್ ನಾಯಕತ್ವದ ಮೊಟ್ಟಮೊದಲ ಸಿನಿಮಾ ನಿರ್ಮಿಸಿ, ನಿರ್ದೆಶಕ ಪಿ ಎನ್ ಸತ್ಯಾ ಹಾಗೂ ದರ್ಶನ್ ಅವರನ್ನು ಕನ್ನಡಚಿತ್ರರಂಗಕ್ಕೆ ಪರಿಚಯಸಿ ಅವರು ಇಂದು ನಿಂತಿರುವ ಜಾಗಕ್ಕೆ ಕಾರಣಕರ್ತರು ನಿರ್ಮಾಪಕ ಬಾಮಾ ಹರೀಶ್. ಆದರೆ ಅವರೇ ಮುಂದೆ ನಿಂತು ತಾವು ನೆಟ್ಟುಬೆಳೆಸಿದ ಕುಡಿಗೆ ಸನ್ಮಾನ ಸಮಾರಂಭ ಇಟ್ಟುಕೊಂಡಿದ್ದು ವಿಶೇಷವಾಗಿತ್ತು.

    ಆದರೆ ಅದು, ಇತ್ತೀಚಿಗೆ ಅವರು ನಿರ್ಮಿಸಿ ಬಿಡುಗಡೆಗೆ ಸಜ್ಜಾಗಿರುವ ಮಾಗಡಿ ಚಿತ್ರದ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಕೂಡ ಎಂಬುದು ಸ್ಪಷ್ಟವಾಗಿಯೇ ಕಂಡುಬಂತು. ಅದು ತಪ್ಪೇನಲ್ಲ, ಏಕೆಂದರೆ ತಮ್ಮ ಚಿತ್ರದ ಪ್ರಚಾರಕ್ಕೆ ಏನೋನೋ ಗಿಮಿಕ್ ಗಳನ್ನು ಮಾಡುವ ನಿರ್ಮಾಪಕ ಮಧ್ಯೆ, ಹರೀಶ್ ಅವರು ಹತ್ತು ವರ್ಷ ಪೂರೈಸಿದ ನಟ ದರ್ಶನ್ ಹಾಗೂ ನಿರ್ದೇಶಕ ಸತ್ಯಾರಿಗೆ ಸನ್ಮಾನವನ್ನೂ ಇಟ್ಟುಕೊಂಡಿದ್ದು ವಿಭಿನ್ನ ಹಾಗೂ ವಿಶೇಷ ಎನಿಸುವುದಲ್ಲವೇ?

    ಆದರೆ, ಸನ್ಮಾನ ಕಾರ್ಯಕ್ರಮಕ್ಕೆ ದರ್ಶನ್ ಬಂದಿರಲಿಲ್ಲ, ಬದಲಿಗೆ ವಿಜಯಲಕ್ಷ್ಮಿ ಬಂದಿದ್ದರು. ದರ್ಶನ್ ಗೈರುಹಾಜರಿಯಲ್ಲಿ ದರ್ಶನ್ ಪರವಾಗಿ ವಿಜಯಲಕ್ಷ್ಮಿಗೆ ಹಾಗೂ ನಿರ್ದೇಶಕ ಸತ್ಯಾರಿಗೆ ಸನ್ಮಾನ ಸಮಾರಂಭ ನಡೆಯಿತು. "ಮೆಜೆಸ್ಟಿಕ್ ಚಿತ್ರದ ಮೂಲಕ ದರ್ಶನ್ ಅವರನ್ನು ನಾಯಕರನ್ನಾಗಿ ಮಾಡಿ ಇಂದು ದರ್ಶನ್ ತಲುಪಿರುವ ಈ ಮಟ್ಟಕ್ಕೆ ಭಾಮಾ ಹರೀಶ್ ಅವರೇ ಕಾರಣ. ಅವರ ಕುಟುಂಬ ಯಾವತ್ತೂ ಚೆನ್ನಾಗಿರಲಿ" ಎಂದರು ಸನ್ಮಾನ ಸ್ವೀಕರಿಸಿದ ವಿಜಯಲಕ್ಷ್ಮಿ. ಮುಂದಿನ ಪುಟ ನೋಡಿ...

    <ul id="pagination-digg"><li class="next"><a href="/news/5-producer-bama-harish-honour-vijayalakshmi-darshan-aid0172.html">Next »</a></li></ul>

    English summary
    Producer BaMa Harish Honored Challenging Star Darshan and Director PN Satya for their successful journey in the Kannada Movieland. &#13; &#13;
    Monday, March 5, 2012, 11:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X