Just In
Don't Miss!
- Sports
ಕೆವಿನ್ ಪೀಟರ್ಸನ್ ಸ್ಫೋಟಕ ಆಟಕ್ಕೆ ಶರಣಾದ ಬಾಂಗ್ಲಾದೇಶ್ ಲೆಜೆಂಡ್ಸ್
- News
ಬಜೆಟ್ 2021: ಪೊಲೀಸ್ ಇಲಾಖೆಗೆ ಸಿಕ್ಕಿರುವ ಕೊಡುಗೆಗಳೇನು?
- Lifestyle
ಮಹಿಳೆಯರ ದಿನ: ಡೂಡಲ್ನಲ್ಲಿ ನೀಡಿದ ಈ ಸಂದೇಶ ಗಮನಿಸಿದ್ದೀರಾ?
- Automobiles
ಕಾರಿನೊಳಗೆ ಅಲಂಕಾರಿಕ ವಸ್ತುಗಳಿಡುವುದನ್ನು ನಿಷೇಧಿಸಿದ ಸರ್ಕಾರ
- Education
NIVEDI Recruitment 2021: 7 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಕರ್ನಾಟಕ ರಾಜ್ಯ ಬಜೆಟ್: ಆದಾಯ ಮತ್ತು ವೆಚ್ಚದ ಲೆಕ್ಕಾಚಾರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'3 ಗಂಟೆ 30 ದಿನ 30 ಸೆಕೆಂಡ್' ಚಿತ್ರ ನೋಡಲು 5 ಕಾರಣ
ಟ್ರೈಲರ್ ಹಾಗೂ ಟೈಟಲ್ ನಿಂದ ಹೆಚ್ಚು ಸದ್ದು ಮಾಡುತ್ತಿರುವ ಚಿತ್ರ '3 ಗಂಟೆ 30 ದಿನ 30 ಸೆಕೆಂಡ್'. ಇದೇ ವಾರ (ಜನವರಿ 19) ರಾಜ್ಯಾದ್ಯಂತ ಈ ಸಿನಿಮಾ ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ಯೂಟ್ಯೂಬ್ ನಲ್ಲಿ ನೋಡಿ ಖುಷಿಪಟ್ಟಿದ್ದಾರೆ.
ನವೀರಾದ ಪ್ರೇಮಕಥೆಯೊಂದಿಗೆ, ವಿಭಿನ್ನ ಕಥಾವಸ್ತು ಇಟ್ಟುಕೊಂಡ ಮೂಡಿ ಬಂದಿರುವ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಜಾಹೀರಾತು ಲೋಕದಲ್ಲಿ ಕೆಲಸ ಮಾಡಿರುವ ನಿರ್ದೇಶಕರು ಮಾಡಿರುವ ಹೊಸ ಪ್ರಯೋಗ ಈ ಚಿತ್ರ. ಬರಿ ಲವ್ ಸ್ಟೋರಿ ಮಾತ್ರವಲ್ಲ, ಇಂಡಿಯಾ-ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿದ ಸೈನಿಕನ ರೋಚಕ ಕಥೆಯೂ ಈ ಚಿತ್ರದಲ್ಲಿದೆ.
ಜನವರಿ 19ರಂದು ತೆರೆಕಾಣ್ತಿದೆ '3 ಗಂಟೆ 30 ದಿನ 30 ಸೆಕೆಂಡ್'
ಹಾಗಿದ್ರೆ, '3 ಗಂಟೆ 30 ದಿನ 30 ಸೆಕೆಂಡ್' ಚಿತ್ರವನ್ನ ಯಾಕೆ ನೋಡ್ಬೇಕು. ಯಾವ ಪ್ರಮುಖ ಅಂಶಗಳಿಗಾಗಿ ಚಿತ್ರಮಂದಿರಕ್ಕೆ ಹೋಗ್ಬೇಕು ಎಂಬುದನ್ನ ತಿಳಿಯಲು ಮುಂದೆ ಓದಿ.....

ಲವ್ ಸ್ಟೋರಿ
'3 ಗಂಟೆ 30 ದಿನ 30 ಸೆಕೆಂಡ್' ಸಿನಿಮಾದ ಟೈಟಲ್ ವಿಭಿನ್ನವಾಗಿದೆ. ನಿರ್ದೇಶಕರು ಹೇಳುವಾಗೆ, ಇದೊಂದು ಲವ್ ಸ್ಟೋರಿ. ಲವ್ ಸ್ಟೋರಿ ಎಂದಾಕ್ಷಣ ಎಲ್ಲರಂತೆ ಸಾಮಾನ್ಯ ಪ್ರೇಮಕಥೆಯಲ್ಲ. ಸಮಾಜದ ಎರಡು ಪ್ರತಿಷ್ಠಿತ ವೃತ್ತಿಗಳಲ್ಲಿರುವ ಇಬ್ಬರ ಲವ್ ಕಹಾನಿ ಇದು. ಹಾಗಾಗಿ, ಕುತೂಹಲ ಸ್ವಲ್ಪ ಜಾಸ್ತಿನೇ ಇದೆ. ಟ್ರೈಲರ್ ನಲ್ಲೂ ಕೂಡ ಆ ಭರವಸೆ ಹೆಚ್ಚಿದೆ.

ಅರುಣ್ ಗೌಡ, ಕಾವ್ಯ ಶೆಟ್ಟಿ
ನಟ ಅರುಣ್ ಗೌಡ ಮತ್ತು ಕಾವ್ಯ ಶೆಟ್ಟಿ ಚಿತ್ರದ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಾವ್ಯ ಶೆಟ್ಟಿ ಟಿವಿ ಚಾನಲ್ ಮಾಲಿಕನ ಮಗಳ ಪಾತ್ರದಲ್ಲಿ ಮತ್ತು ವಕೀಲನಾಗಿ ಅರುಣ್ ಗೌಡ ನಟಿಸಿದ್ದಾರೆ. ಇಬ್ಬರ ಜೋಡಿ ತೆರೆ ಮೇಲೆ ನೋಡುವುದಕ್ಕೆ ಮುದ್ದಾಗಿ ಕಾಣುತ್ತದೆ.
ಚಾನಲ್ ಮಾಲಿಕರ ಮಗಳು ಮತ್ತು ಲಾಯಲ್ ಇಬ್ಬರ ಪ್ರೇಮಕತೆಯ ಚಿತ್ರ ಇದು

ದೊಡ್ಡ ತಾರಬಳಗ
80ರ ದಶಕದ ಮುಖ್ಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದು, 'ಎಡಕಲ್ಲು ಗುಡ್ಡದ ಮೇಲೆ' ಖ್ಯಾತಿಯ ಚಂದ್ರಶೇಖರ್, ಡೈನಾಮಿಕ್ ಹೀರೋ ದೇವರಾಜ್, ಸುಧಾರಾಣಿ, ಸುಂದರ್, ಯಮುನಾ, ಜಯಲಕ್ಷ್ಮಿ ಪಾಟೀಲ್, ಟಿ.ಎಸ್. ನಾಗಾಭರಣ, ಅನಂತ ವೇಲು, ರಮೇಶ್ ಭಟ್, ಶ್ರೀನಾಥ್ ವಸಿಷ್ಠ, ಹನುಮಂತೇ ಗೌಡ, ಯತಿರಾಜ್ ಸೇರಿದಂತೆ ಮತ್ತಿತರರು ಅಭಿನಯಿಸಿದ್ದಾರೆ.

ಹಾಡುಗಳು ಸೂಪರ್ ಹಿಟ್
ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತ ಚಿತ್ರಕ್ಕಿದ್ದು, ಒಟ್ಟು 6 ಹಾಡುಗಳಿವೆ. ಎರಡು ಹಾಡನ್ನು ಜಯಂತ್ ಕಾಯ್ಕಿಣಿ ಮತ್ತು ಮೂರು ಹಾಡನ್ನು ಮಧುಸೂದನ್ ಬರೆದಿದ್ದಾರೆ. ಜೊತೆಗೆ ವಿಜಯ್ ಪ್ರಕಾಶ್, ಚಂದನ್ ಶೆಟ್ಟಿ, ಟಿಪ್ಪು ಮತ್ತು ವಿ.ಶ್ರೀಧರ್ ಸಂಭ್ರಮ್ ಹಾಡುನ್ನು ಹಾಡಿದ್ದಾರೆ. ಎಲ್ಲ್ ಹಾಡುಗಳು ಸಹ ಒಂದಕ್ಕಿಂತ ಒಂದು ವಿಭಿನ್ನವಾಗಿದೆ.
ಕೇಳುಗರ ಮನ ಗೆದ್ದ '3 ಗಂಟೆ 30 ದಿನ 30 ಸೆಕೆಂಡ್' ಹಾಡುಗಳು

ತಾಂತ್ರಿಕ ತಂಡದ ಬಗ್ಗೆ....
ಹಲವು ವರ್ಷಗಳಿಂದ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡಿರುವ ಮಧುಸೂದನ್ ಅವರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀನಿವಾಸ್ ರಾಮಯ್ಯ ಈ ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿದ್ದು, ಚಂದ್ರಶೇಖರ್ ಆರ್. ಪದ್ಮಶಾಲಿ ನಿರ್ಮಾಣ ಮಾಡಿದ್ದಾರೆ.