'ಅಂಜನಿಪುತ್ರ' ಸಿನಿಮಾವನ್ನ ನೋಡಲು ಈ 5 ಅಂಶಗಳು ಸಾಕು

By Bharath Kumar

ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಚಿತ್ರ ಬಿಡುಗಡೆಯಾಗಲು ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಈಗಾಗಲೇ ಚಿತ್ರಮಂದಿರಗಳ ಬಳಿ ಅಪ್ಪು ಕಟೌಟ್ ಗಳನ್ನ ಹಾಕಿ ಸಿನಿಮಾವನ್ನ ಸ್ವಾಗತ ಮಾಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಅಷ್ಟಕ್ಕೂ, ಅಂಜನಿಪುತ್ರ ಸಿನಿಮಾ ಯಾಕೆ ಇಷ್ಟೊಂದು ಕುತೂಹಲ ಮೂಡಿಸಿದೆ. ಪುನೀತ್ ಅವರ ಈ ಸಿನಿಮಾ ನೋಡಲು ಅಭಿಮಾನಿಗಳು ಯಾಕೆ ಇಷ್ಟೊಂದು ಕಾಯ್ತಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಕೆಲವು ಕಾರಣಗಳಿವೆ. ಟೈಟಲ್, ಪೋಸ್ಟರ್, ಟ್ರೈಲರ್, ಹಾಡುಗಳು ಹೀಗೆ ಪ್ರತಿಯೊಂದು ಅಂಶಗಳಿಂದಲೂ ಗಮನ ಸೆಳೆದಿರುವ ಚಿತ್ರವನ್ನ ನೋಡಲು ಈ ಐದು ಅಂಶಗಳು ಸಾಕು.

ಹಾಗಿದ್ರೆ, ಅಂಜನಿಪುತ್ರನನ್ನ ನೋಡಲು ಕಾರಣವಾಗಿರುವ ಆ ಐದು ಅಂಶಗಳು ಯಾವುದು ಎಂದು ಮುಂದೆ ಓದಿ.....

ಮತ್ತೆ ಆಕ್ಷನ್ ನಲ್ಲಿ ಅಪ್ಪು

ಮತ್ತೆ ಆಕ್ಷನ್ ನಲ್ಲಿ ಅಪ್ಪು

'ರಾಜಕುಮಾರ' ಚಿತ್ರದಲ್ಲಿ ಕಂಪ್ಲೀಟ್ ಕ್ಲಾಸ್ ಆಗಿ ನೋಡಿದ್ದ ಪುನೀತ್ ಅವರನ್ನ ಮತ್ತೆ ಮಾಸ್ ಲುಕ್ ನಲ್ಲಿ ನೋಡುವ ಕಾತುರ. 'ಅಂಜನಿಪುತ್ರ' ಫ್ಯಾಮಿಲಿ ಕಮ್ ಆಕ್ಷನ್ ಪ್ಯಾಕೇಜ್ ಆಗಿದ್ದು, ಜಬರ್ ದಸ್ತ್ ಫೈಟ್ಸ್, ಡೈಲಾಗ್ಸ್ ಈ ಚಿತ್ರದಲ್ಲಿ ನಿರೀಕ್ಷಿಸಬಹುದು.

ಪುನೀತ್ ಮತ್ತು ರಶ್ಮಿಕಾ

ಪುನೀತ್ ಮತ್ತು ರಶ್ಮಿಕಾ

'ಅಂಜನಿಪುತ್ರ' ಚಿತ್ರದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಪುನೀತ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ. ಪವರ್ ಸ್ಟಾರ್ ಜೊತೆಯಲ್ಲಿ ರಶ್ಮಿಕಾ ಹೇಗೆ ಕಾಣಿಸಿಕೊಳ್ಳುತ್ತಾರೆ ಮತ್ತು ಇವರಿಬ್ಬರ ಜೋಡಿ ತೆರೆಮೇಲೆ ಹೇಗಿರುತ್ತೆ ಎಂಬ ಕುತೂಹಲ ಕನ್ನಡ ಪ್ರೇಕ್ಷಕರದ್ದು.

ಆಂಜನೇಯನ ಭಕ್ತ ಹರ್ಷ

ಆಂಜನೇಯನ ಭಕ್ತ ಹರ್ಷ

ಆಂಜನೇಯನ ಹೆಸರಿನಲ್ಲಿ ಸಿನಿಮಾ ಮಾಡುವುದರಲ್ಲಿ ಗಮನ ಸೆಳೆದಿರುವ ನಿರ್ದೇಶಕ ಹರ್ಷ ಅವರ ಮೇಲೆ ಭರವಸೆ. ಯಾಕಂದ್ರೆ. ಈ ಹಿಂದೆ 'ವಜ್ರಕಾಯ', 'ಭಜರಂಗಿ' ಅಂತಹ ಟೈಟಲ್ ಇಟ್ಟು ಸೂಪರ್ ಸಿನಿಮಾ ನೀಡಿದ್ದರು. ಈಗ ಈ ಚಿತ್ರಕ್ಕೂ ಆಂಜನೇಯನ ಹೆಸರು ಇಟ್ಟು ಸಿನಿಮಾ ಮಾಡಿರುವುದು ನಂಬಿಕೆ ಮೂಡಿಸಿದೆ.

'ಶಿವಗಾಮಿ' ರಮ್ಯಾಕೃಷ್ಣ

'ಶಿವಗಾಮಿ' ರಮ್ಯಾಕೃಷ್ಣ

'ಬಾಹುಬಲಿ' ಚಿತ್ರದ ಶಿವಗಾಮಿ ಪಾತ್ರದ ಮೂಲಕ ಎಲ್ಲರ ಆಶ್ಚರ್ಯ ಉಂಟು ಮಾಡುವಂತಹ ಅಭಿನಯ ನೀಡಿದ್ದ ರಮ್ಯಾಕೃಷ್ಣ, 'ಅಂಜನಿಪುತ್ರ' ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಹೀಗಾಗಿ, ರಮ್ಯಾಕೃಷ್ಣ ಅವರ ಅಭಿನಯ ಕೂಡ ಪ್ರಮುಖ ಆಕರ್ಷಣೆಯಾಗಲಿದೆ. ಚಿತ್ರದಲ್ಲಿ ರಮ್ಯಾಕೃಷ್ಣ, ಪುನೀತ್ ಅವರ ಅಮ್ಮನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ರೀಮೇಕ್ ಹೇಗಿರಬಹುದು?

ರೀಮೇಕ್ ಹೇಗಿರಬಹುದು?

ಎಲ್ಲರಿಗೂ ಗೊತ್ತಿರುವಾಗೆ, ಅಂಜನಿಪುತ್ರ ತಮಿಳಿನ 'ಪೂಜೈ' ಚಿತ್ರದ ರೀಮೇಕ್. ಹೀಗಾಗಿ, ತಮಿಳಿಗಿಂತ ಕನ್ನಡದಲ್ಲಿ ಹೇಗಿರುತ್ತೆ ಎಂಬ ನಿರೀಕ್ಷೆ ಕೂಡ ಒಂದಾಗಿದೆ. ತಮಿಳಿನಲ್ಲಿ ಸಿನಿಮಾ ನೋಡಿರುವವರು ಕೂಡ ಅಂಜನಿಪುತ್ರನನ್ನ ನೋಡಲು ಕಾಯುತ್ತಿರುತ್ತಾರೆ.

More from Filmibeat

English summary
Powerstar Puneeth Rajkumar starrer 'Anjaniputra' is releasing on thurshday (December 21st) all Over Karnataka. The Movie also features Rashmika mandanna, Ramyakrishnan, chikkanna, mukesh tiwari. Here Are 5 Reasons As to why you should watch 'Anjaniputra'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X