»   » ದುನಿಯಾ ವಿಜಯ್ ಆರ್ ಎಕ್ಸ್ ಸೂರಿ ಏಕೆ ನೋಡ್ಬೇಕು?

ದುನಿಯಾ ವಿಜಯ್ ಆರ್ ಎಕ್ಸ್ ಸೂರಿ ಏಕೆ ನೋಡ್ಬೇಕು?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಬ್ಲ್ಯಾಕ್ ಕೋಬ್ರಾ, ದುನಿಯಾ ವಿಜಯ್ ಅವರು ಸ್ವಲ್ಪ ಲೇಟಾಗಿ ಲೇಟೆಸ್ಟ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಜಬರ್ದಸ್ತ್ ಎಂಟ್ರಿ ಕೊಡುವ ಮೂಲಕ ಪ್ರೇಕ್ಷಕರಿಗೆ ಹಾಗು ಅಭಿಮಾನಿಗಳಿಗೆ ಮತ್ತೊಮ್ಮೆ'ದುನಿಯಾ' ತೋರಿಸಲು ಹೊರಟಿದ್ದಾರೆ.

ನಟಿ ಆಕಾಂಕ್ಷ, ದುನಿಯಾ ವಿಜಯ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ನಿರ್ಮಾಪಕ ಸುರೇಶ್ ಬಂಡವಾಳ ಹಾಕಿರುವ ಗಾಂಧಿನಗರದಲ್ಲಿ ಭಾರಿ ಕುತೂಹಲ ಮೂಡಿಸಿರುವ 'ಆರ್ ಎಕ್ಸ್ ಸೂರಿ' ನಾಳೆ (ಸೆಪ್ಟೆಂಬರ್ 4) ಕಪಾಲಿ ಚಿತ್ರಮಂದಿರದಲ್ಲಿ ಭರ್ಜರಿಯಾಗಿ ತೆರೆ ಕಾಣುತ್ತಿದೆ. [ವರಮಹಾಲಕ್ಷ್ಮಿ ಹಬ್ಬಕ್ಕಿಲ್ಲ ದುನಿಯಾ ವಿಜಿ 'RX ಸೂರಿ']


ರೌಡಿ ಶೀಟರ್ ಸೂರಿ ಎಂಬಾತನ ನಿಜಕಥೆಯನ್ನಾಧರಿಸಿದ 'ಆರ್ ಎಕ್ಸ್ ಸೂರಿ' ಈ ಮೊದಲು ಟ್ರೈಲರ್ ಹಾಗೂ ಹಾಡುಗಳ ಮೂಲಕ ಸಖತ್ ಸುದ್ದಿ ಮಾಡಿತ್ತು. ಇದೀಗ ಚಿತ್ರ ನಾಳೆ ತೆರೆ ಕಾಣುತ್ತಿದ್ದು, ಅಭಿಮಾನಿಗಳು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ.[ಅಭಿಮಾನಿಯ ಅಂತಿಮ ಇಚ್ಛೆ ಪೂರ್ಣಗೊಳಿಸಿದ ವಿಜಿ]


ನಿರ್ದೇಶಕ ಶ್ರೀಜೈ ಆಕ್ಷನ್-ಕಟ್ ಹೇಳಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಆರ್ ಎಕ್ಸ್ ಸೂರಿ' ಅಭಿಮಾನಿಗಳಲ್ಲಿ ಹುಟ್ಟಿಸಿರುವ ಕ್ರೇಜ್ ನೋಡುತ್ತಿದ್ದರೆ ದುನಿಯಾ ವಿಜಯ್ ಅವರಿಗೆ ತುಂಬಾ ದಿನಗಳ ನಂತರ ಬ್ರೇಕ್ ಕೊಡುವಲ್ಲಿ ಯಶಸ್ವಿಯಾಗಬಹುದೇ ಅನ್ನೋದನ್ನ ನಾಳೆ(ಸೆಪ್ಟೆಂಬರ್ 4) ನೋಡಬೇಕಿದೆ


ಇನ್ನು 'ಜಾಕ್ಸನ್' ಮಕಾಡೆ ಮಲಗಿದ ನಂತರ ದುನಿಯಾ ವಿಜಯ್ ಅವರು ಒಂದೊಳ್ಳೆ ಬಾಕ್ಸಾಫೀಸ್ ಸಕ್ಸಸ್ ಗಾಗಿ ಕಾಯುತ್ತಿದ್ದಾರೆ. ನೆಗೆಟಿವ್ ಶೇಡ್ ನಲ್ಲಿ ರವಿಶಂಕರ್, 'ಬಿಡ್ಡ' ಆದಿಲೋಕೇಶ್ ಮುಂತಾದವರು ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಕೂತೂಹಲಕ್ಕೆ ಕಾರಣವಾಗಿದೆ.[ಮಾನವೀಯತೆ ಮೆರೆದ ದುನಿಯಾ ವಿಜಯ್ 'RX ಸೂರಿ' ಚಿತ್ರತಂಡ]


ನಾಳೆ ಬಿಡುಗಡೆಯಾಗುತ್ತಿರುವ 'ಆರ್ ಎಕ್ಸ್ ಸೂರಿ' ನೀವು ನೋಡಲು 5 ಕಾರಣಗಳನ್ನು ನಾವು ನಿಮಗೆ ಹೇಳುತ್ತೇವೆ. ಮುಂದೆ ಓದಿ...


ತೆರೆಯ ಮೇಲೆ ದುನಿಯಾ ವಿಜಿ-ಆಕಾಂಕ್ಷ ಕೆಮಿಸ್ಟ್ರಿ

ಒಂಥರಾ ಟಿಪಿಕಲ್ ಆಕ್ಷನ್-ಎಂರ್ಟಟೈನ್ಮೆಂಟ್ ಇರುವ 'ಆರ್ ಎಕ್ಸ್ ಸೂರಿ' ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಆಕಾಂಕ್ಷ ದುನಿಯಾ ವಿಜಯ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಆನ್ ಸ್ಕ್ರೀನ್ ಕೆಮಿಸ್ಟ್ರಿ ನೋಡಲು ನೀವು ನಾಳೆ ಚಿತ್ರಮಂದಿರಕ್ಕೆ ಭೇಟಿ ಕೊಡಿ


ದುನಿಯಾ ವಿಜಯ್ ಆಕ್ಷನ್-ಸ್ಟಂಟ್ಸ್

ದುನಿಯಾ ವಿಜಯ್ ಅವರು 'ಆರ್ ಎಕ್ಸ್ ಸೂರಿ' ಚಿತ್ರದಲ್ಲಿ ರಿಯಲ್ ಸ್ಟಂಟ್ ಮಾಡಿದ್ದಾರೆ ಎಂದು ಬಲ್ಲ ಮೂಲಗಳು ವರದಿ ಮಾಡಿವೆ.


ಆಕ್ಷನ್ ಜೊತೆಗೆ ಕ್ಯೂಟ್ ಲವ್ ಸ್ಟೋರಿ

ಚಿತ್ರದ ಟ್ರೈಲರ್, ಟೀಸರ್ ಮತ್ತು ಸುಂದರವಾದ ಹಾಡುಗಳಲ್ಲಿ ಆಕಾಂಕ್ಷ, ವಿಜಿ ಅವರು ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು, ಕಂಡರೆ ಈ ಚಿತ್ರ ಆಕ್ಷನ್ ಜೊತೆಗೆ ಮುದ್ದಾದ ಕಥೆಯನ್ನು ಹೊಂದಿರಬಹುದು. ನೋಡೋಣ.


ಸಖತ್ ಆಗಿರೋ ಕಲರ್ ಪುಲ್ ಹಾಡುಗಳು

'ಆರ್ ಎಕ್ಸ್ ಸೂರಿ' ಚಿತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದು, ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ.


ಮತ್ತೆ ವಾಪಸಾದ ಬ್ಲ್ಯಾಕ್ ಕೋಬ್ರಾ

ದುನಿಯಾ ವಿಜಯ್ ಅವರ 'ಜಾಕ್ಸನ್' ಚಿತ್ರ ಮಕಾಡೆ ಮಲಗಿದ ನಂತರ ಇದೀಗ ಮತ್ತೆ ಹೊಸ ಹುಮ್ಮಸ್ಸಿನಿಂದ 'ಆರ್ ಎಕ್ಸ್' ಬೈಕ್ ಏರಿ ನಾಳೆ ದುನಿಯಾ ವಿಜಯ್ ಅವರು ತೆರೆಯ ಮೇಲೆ ರಾರಾಜಿಸಲಿದ್ದಾರೆ.


ರೌಡಿಶೀಟರ್ ಒಬ್ಬರ ನಿಜಕಥೆ- 'ಆರ್ ಎಕ್ಸ್ ಸೂರಿ'

ಆಂಧ್ರಪ್ರದೇಶ ಮೂಲದ ಗ್ಯಾಂಗ್ ಸ್ಟರ್ ಸೂರಿ ಎಂಬಾತನ ನಿಜ ಕಥೆಯನ್ನಾಧರಿಸಿದ 'ಆರ್ ಎಕ್ಸ್ ಸೂರಿ' ನಾಳೆ ತೆರೆಯ ಮೇಲೆ ಕಲರ್ ಫುಲ್ ಆಗಿ ಮೂಡಿಬರಲಿದೆ.


ಹೆಚ್ಚಿನ ಲವ್ ಸೀನ್ ಜೊತೆಗೆ ಆಕ್ಷನ್

2007ರಲ್ಲಿ ತೆರೆ ಕಂಡ 'ದುನಿಯಾ' ಚಿತ್ರದಲ್ಲೂ ಲವ್ ಜೊತೆಗೆ ಆಕ್ಷನ್ ಸೀನ್ ಗಳು ಸಮಾನವಾಗಿದ್ದವು, ಇದೀಗ ಲೇಟೆಸ್ಟ್ ಆಗಿ 'ಆರ್ ಎಕ್ಸ್ ಸೂರಿ' ಕೂಡ ಅದೇ ಥರ ಇರಬಹುದು ಅನ್ನೋದಕ್ಕೆ ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್, ಟೀಸರ್ ಗಳೇ ಸಾಕ್ಷಿ


English summary
Duniya Vijay is back with a bang. Popularly called as black cobra of KFI, Vijay is gearing up for a big release in 2015 through RX Soori. The movie is a typicall action entertainer based on the real life incident of a ganster called 'Soori'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada