ಅಂಬಿ ಪುತ್ರನ 'ಅಮರ್' ನೋಡಲು ಪ್ರಮುಖ 5 ಕಾರಣಗಳು
Recommended Video
ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಸಿನಿಮಾ ರಿಲೀಸ್ ಗೆ ಕೌಂಟ್ ಡೌನ್ ಶುರುವಾಗಿದೆ. ಅಂಬಿ ಪುತ್ರನ ಚೊಚ್ಚಲ ಸಿನಿಮಾಗೆ ಸೌತ್ ಸಿನಿ ಇಂಡಸ್ಟ್ರಿಯ ಸ್ಟಾರ್ ನಟರು ಶುಭ ಕೋರಿದ್ದಾರೆ. ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿರುವ ಅಭಿಷೇಕ್ ಗೆ ಸ್ಟಾರ್ ನಟರ ಅದ್ಧೂರಿ ಸ್ವಾಗತ ಸಿಕ್ಕಿದೆ.
'ಅಮರ್' ಸಿನಿಮಾ ಈಗಾಗಲೆ ಟ್ರೈಲರ್ ಮತ್ತು ಹಾಡುಗಳ ಮೂಲಕ ಕನ್ನಡ ಚಿತ್ರಾಭಿಮಾನಿಗಳ ಮನಗೆದ್ದಿದೆ. ವಿಶೇಷ ಅಂದ್ರೆ ಹಾಡುಗಳ ಮೂಲಕವೆ ಚಿತ್ರದ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿರುವ 'ಅಮರ್' ನಾಳೆ ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ.
ಅಂಬಿ ಪುತ್ರನ ಮೊದಲ ಸಿನಿಮಾ ನೋಡಲು ಈಗಾಗಲೆ ಕನ್ನಡ ಚಿತ್ರಾಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಭಾರಿ ಕುತೂಹಲ ಮೂಡಿಸಿರುವ 'ಅಮರ್' ಸಿನಿಮಾವನ್ನು ನೋಡಲು ಪ್ರಮುಖ ಐದು ಕಾರಣಗಳು ಏನು ಗೊತ್ತಾ? ಮುಂದೆ ಓದಿ..

ಅಭಿಷೇಕ್ ಮೊದಲ ಸಿನಿಮಾ
ಅಭಿಷೇಕ್ ಅಂಬರೀಶ್ ಅಭಿನಯದ ಮೊದಲ ಸಿನಿಮಾ. ಅಂಬರೀಶ್ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಆಗಿ ಮೆರೆದರೂ, ಮಗ ಅಭಿಷೇಕ್ ಒಂದೇ ಒಂದು ಚಿಕ್ಕ ದೃಶ್ಯದ ಮೂಲಕವು ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದ ಅಭಿಷೇಕ್ ಮೊದಲ ಬಾರಿಗೆ ಬಣ್ಣಹಚ್ಚಿದ್ದಾರೆ. ಹಾಗಾಗಿ ಅಂಬಿ ಪುತ್ರ ಚಿತ್ರದಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ. ಹೇಗೆ ಅಭಿನಯಿಸಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ.

ಅಂಬರೀಶ್ ಇಲ್ಲದೇ ಅಭಿ
ಅಭಿಷೇಕ್ ಮೊದಲ ಸಿನಿಮಾವನ್ನು ತೆರೆಮೇಲೆ ನೋಡಬೇಕು ಎನ್ನುವ ದೊಡ್ಡ ಆಸೆ ಅಂಬರೀಶ್ ಅವರಿಗಿತ್ತು. ಆದ್ರೆ ಆ ಕನಸು ನನಸಾಗುವ ಮೊದಲೆ ಅಂಬಿ ಮಗನ ಸಿನಿಮಾವನ್ನು ಅರ್ಧದಲ್ಲೆ ಬಿಟ್ಟು ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಒಂದು ವೇಳೆ ಅಂಬರೀಶ್ ಇದ್ದಿದ್ರೆ ಮಗನ ಮೊದಲ ಸಿನಿಮಾ ರಿಲೀಸ್ ಆಗುತ್ತಿದ್ದ ಸಂತಸವೆ ಬೇರೆ ಯಾಗಿರುತ್ತಿತ್ತೇನೊ. ಆದ್ರೆ ಅಂಬಿ ಇಲ್ಲದೆ ಅವರ ನೆನಪಿನಲ್ಲೆ ಮಗನ ಸಿನಿಮಾ ರಿಲೀಸ್ ಆಗುತ್ತಿದೆ.

ದರ್ಶನ್-ಅಭಿಷೇಕ್ ಕಾಂಬಿನೇಷನ್
ಅಮರ್ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿರುವ ದಚ್ಚು ಚಿತ್ರದ ಮತ್ತೊಂದು ಆಕರ್ಷಣೆ. ಮೊದಲ ಬಾರಿಗೆ ಸಹೋದರ ಅಭಿಷೇಕ್ ಸಿನಿಮಾದಲ್ಲಿ ಡಿ ಬಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಇಬ್ಬರ ಕಾಂಬಿನೇಶನ್ ಭಾರಿ ಕುತೂಹಲ ಮೂಡಿಸಿದೆ.

ಹಾಡುಗಳು ರೋಮ್ಯಾಂಟಿಕ್ ಹಿಟ್
ಚಿತ್ರದ ಪ್ರಮುಖ ಹೈಲೆಟ್ಸ್ ಅಂದ್ರೆ ಹಾಡುಗಳು. ಈಗಾಗಲೆ ರಿಲೀಸ್ ಆಗಿರುವ ಐದು ಹಾಡುಗಳು ಸೂಪರ್ ಹಿಟ್ ಆಗಿವೆ. ಮ್ಯೂಸಿಕಲಿ ಸಿನಿಮಾ ಈಗಾಗಲೆ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಚಿತ್ರದ ರೋಮ್ಯಾಂಟಿಕ್ ಹಾಡುಗಳು ಗಾನಪ್ರಿಯರ ಮನಗೆದ್ದಿವೆ. ಹಾಡುಗಳನ್ನು ಕೇಳಿದವರು ಕಂಡಿತ ಸಿನಿಮಾ ನೋಡದೆ ಇರಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಎಲ್ಲರಲ್ಲೂ ಗುಂಗು ಹಿಡಿಸಿವೆ 'ಅಮರ್' ಹಾಡುಗಳು.

ನಾಗಶೇಖರ್ ಸಿನಿಮಾ
ನಿರ್ದೇಶಕ ನಾಗಶೇಖರ್ ಸಿನಿಮಾ ಎನ್ನುವ ಕುತೂಹಲ ಚಿತ್ರಪ್ರಿಯರಲ್ಲಿದೆ. ಯಾಕೆಂದ್ರೆ ಈಗಾಗಲೆ ನಾಗಶೇಖರ್ ಎರಡು ರೋಮ್ಯಾಂಟಿಕ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. 'ಮೈನಾ' ಮತ್ತು 'ಸಂಜು ವೆಡ್ಸ್ ಗೀತಾ' ಚಿತ್ರಗಳಂತಹ ಹಿಟ್ ಸಿನಿಮಾಗಳನ್ನು ನೀಡಿರುವ ನಾಗಶೇಖರ್ ಅವರ 'ಅವರ್' ಸಿನಿಮಾ ಕೂಡ ಕುತೂಹಲ ಮೂಡಿಸಿದೆ. 'ಅಮರ್' ಸಿನಿಮಾದ ಟ್ರೈಲರ್ ನೋಡಿದ್ರೆ ಇದು ಪಕ್ಕ ನಾಗಶೇಖರ್ ಫ್ಲೇವರ್ ನ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಹಾಗಾಗಿ 'ಅಮರ್' ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.


Click it and Unblock the Notifications











