twitter
    For Quick Alerts
    ALLOW NOTIFICATIONS  
    For Daily Alerts

    ಶಿವರಾಜ್ ಕುಮಾರ್ ಡಾಕ್ಟರೇಟ್ ಪಡೆದು ಇಂದಿಗೆ 5 ವರ್ಷ

    |

    ನಟ ಶಿವರಾಜ್ ಕುಮಾರ್, ಡಾ ಶಿವರಾಜ್ ಕುಮಾರ್ ಆಗಿ ಇಂದಿಗೆ ಸರಿಯಾಗಿ 5 ವರ್ಷ ಆಗಿದೆ. ಜೂನ್ 21, 2014 ರಂದು ಶಿವರಾಜ್ ಕುಮಾರ್ ರಿಗೆ ಗೌರವ ಡಾಕ್ಟರೇಟ್ ಸಿಕ್ಕಿತ್ತು.

    ವರನಟ ಡಾ ರಾಜ್ ಕುಮಾರ್ ಅವರ ಪುತ್ರನಾಗಿ ಇಂಡಸ್ಟ್ರಿಗೆ ಬಂದ ಶಿವಣ್ಣ ನೂರು ಸಿನಿಮಾಗಳನ್ನು ಮಾಡಿ ಸೆಂಚುರಿ ಸ್ಟಾರ್ ಪಟ್ಟವನ್ನು ಪಡೆದಿದ್ದರು. ಇವರ ಸಾಧನೆಯನ್ನು ಗಮನಿಸಿ ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿತ್ತು.

    ಸ್ಯಾಂಡಲ್ ವುಡ್ ಕಿಂಗ್ ಗೆ ಗೌರವ ಡಾಕ್ಟರೇಟ್

    ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲವು ನಟರು ಡಾಕ್ಟರೇಟ್ ಪಡೆದಿದ್ದು, ಅದರಲ್ಲಿ ನಟ ಶಿವರಾಜ್ ಕುಮಾರ್ ಕೂಡ ಒಬ್ಬರಾಗಿದ್ದಾರೆ.

    ಮಾಸ್, ಕ್ಲಾಸ್ ಸಿನಿಮಾಗಳ ಜೊತೆಗೆ ಕಾದಂಬರಿ ಆಧಾರಿತ ಸಿನಿಮಾಗಳನ್ನು ಸಹ ಶಿವರಾಜ್ ಕುಮಾರ್ ಮಾಡಿದ್ದಾರೆ. ಹಿಟ್ ಮೇಲೆ ಹಿಟ್ ನೀಡಿ, ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ.

    5 years back the same day shivaraj kumar recived doctorate

    'ಆನಂದ್' 'ಜನುಮದ ಜೋಡಿ', 'ಹೃದಯ ಹೃದಯ' 'ಹಗಲು ವೇಷ' 'ಚಿಗುರಿದ ಕನಸು', 'ಓಂ', 'ಜೋಗಿ', 'ನಮ್ಮೂರ ಮಂದಾರ ಹೂವೆ', 'ತವರಿಗೆ ಬಾ ತಂಗಿ', 'ಮಫ್ತಿ', 'ಟಗರು' 'ಕವಚ' ಹೀಗೆ ಸಾಕಷ್ಟು ಸಿನಿಮಾಗಳು ಶಿವರಾಜ್ ಕುಮಾರ್ ರಿಗೆ ಒಳ್ಳೆಯ ಹೆಸರು ನೀಡಿವೆ.

    ಸದ್ಯ, ಶಿವರಾಜ್ ಕುಮಾರ್ ನಟನೆಯ 'ರುಸ್ತುಂ' ಸಿನಿಮಾ ಮುಂದಿನ ಶುಕ್ರವಾರ (ಜೂನ್ 28) ರಂದು ಬಿಡುಗಡೆಯಾಗಲಿದೆ. ಅದರ ಬಳಿಕ, 'ಆನಂದ್', 'ದ್ರೋಣ' ಸಿನಿಮಾಗಳು ತೆರೆಗೆ ಬರಲಿವೆ.

    English summary
    5 years back the same day (June 21st) Kannada actor Shivaraj Kumar recived doctorate from Krishnadevaraya university Bellary.
    Friday, June 21, 2019, 18:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X