'ಉಗ್ರಂ'ಗೆ 5 ವರ್ಷ : ಮುರಳಿಗೆ ಮರು ಜೀವ ನೀಡಿದ್ದ ಸಿನಿಮಾ

'ಉಗ್ರಂ' ಸಿನಿಮಾವನ್ನು ಯಾರು ಮರೆಯಲು ಸಾಧ್ಯವಿಲ್ಲ. 'ಉಗ್ರಂ ವಿರಂ..' ಎಂಬ ಹಾಡಿನೊಂದಿಗೆ ಶ್ರೀ ಮುರಳಿ ಬರುವ ದೃಶ್ಯ ಈಗಲೂ ಅಭಿಮಾನಿಗಳ ಕಣ್ಣೀಗೆ ಕಟ್ಟಿದ ಹಾಗಿದೆ.

'ಉಗ್ರಂ' ಸಿನಿಮಾ ಕನ್ನಡದಲ್ಲಿ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿತ್ತು. ಈ ರೀತಿ ಕೂಡ ಮೇಕಿಂಗ್ ಮಾಡಬಹುದು ಎಂದು ಕೇಳಿಕೊಟ್ಟಿತ್ತು. ಇಂತಹ ಮಹಾ ಸಿನಿಮಾ ನಟ ಶ್ರೀಮುರಳಿಗೆ ಮರು ಜೀವ ನೀಡಿತ್ತು. ಸಾಕಷ್ಟು ಸೋಲುಗಳ ಬಳಿಕ ಮುರಳಿ ಮತ್ತೆ ಎದ್ದು ನಿಂತಿದ್ದು ಇದೇ ಚಿತ್ರದ ಮೂಲಕ. ಅದೇ ಕಾರಣಕ್ಕೆ ಮುರಳಿ ತಮ್ಮ ಮಗನಿಗೆ 'ಉಗ್ರಂ' ಚಿತ್ರದ ಅವರ ಪಾತ್ರದ ಹೆಸರನ್ನೇ ಅಗಸ್ಯ ಎಂದು ಇಟ್ಟಿದ್ದಾರೆ.

ಬರೀ ಮುರಳಿ ಮಾತ್ರವಲ್ಲ ಈ ಸಿನಿಮಾದಲ್ಲಿ ಕೆಲಸ ಮಾಡಿದ ಅನೇಕರಿಗೆ ಮುಂದೆ ದೊಡ್ಡ ದೊಡ್ಡ ಅವಕಾಶಗಳು ಸಿಕ್ಕಿತ್ತು. ಈ ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕರು ಈಗಲೂ ಇದರ ಮೂಲಕವೇ ಅವಕಾಶಗಳನ್ನು ಪಡೆಯುತ್ತಾರೆ.

ಅಂದಹಾಗೆ, ಐದು ವರ್ಷ ತುಂಬಿದ ವಿಶೇಷವಾಗಿ 'ಉಗ್ರಂ' ಸಿನಿಮಾದ ಕೆಲ ವಿವರ ಮುಂದಿದೆ ಓದಿ...

ಶ್ರೀ ಮುರಳಿ ಟ್ವೀಟ್

'ಉಗ್ರಂ' ಸಿನಿಮಾಗೆ ಐದು ವರ್ಷ ತುಂಬಿದ್ದು, ಈ ಬಗ್ಗೆ ಶ್ರೀಮುರಳಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ''ಹ್ಯಾಪಿ ಬರ್ತ್ ಡೇ 'ಉಗ್ರಂ'. ಇಂದಿಗೆ ಐದು ವರ್ಷ. ನಿಮ್ಮ ಪ್ರೀತಿಗೆ ಸದಾ ಚಿರಋಣಿ'' ಎಂದಿದ್ದಾರೆ. 'ಉಗ್ರಂ'ನ ಎರಡು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಶ್ರೀಮುರಳಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಪ್ರಶಾಂತ್ ನೀಲ್ ಮೊದಲ ಸಿನಿಮಾ

ಪ್ರಶಾಂತ್ ನೀಲ್ ಮೊದಲ ಸಿನಿಮಾ

ಪ್ರಶಾಂತ್ ನೀಲ್ ಎನ್ನುವ ಪ್ರತಿಭಾವಂತ ನಿರ್ದೇಶಕ ಚಿತ್ರರಂಗಕ್ಕೆ ಬಂದಿದ್ದು 'ಉಗ್ರಂ' ಸಿನಿಮಾ ಮೂಲಕ. ಈ ಒಂದೇ ಒಂದು ಅವಕಾಶದ ಮೂಲಕ ತಮ್ಮ ಸಾಮರ್ಥ್ಯವನ್ನು ಅವರು ತೋರಿಸಿದರು. ತಮ್ಮ ಸ್ಟೈಲ್ ಆಫ್ ಮೇಕಿಂಗ್ ಮೂಲಕ ಚಿತ್ರರಂಗದ ಕರ್ನಾಟಕದ ತುಂಬ ಹೆಸರು ಮಾಡಿದರು.

ಹರಿಪ್ರಿಯಾಗೆ ಬ್ರೇಕ್

ಹರಿಪ್ರಿಯಾಗೆ ಬ್ರೇಕ್

ಹರಿಪ್ರಿಯಾ 'ಉಗ್ರಂ'ಗೆ ಮುಂಚೆ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಬೇರೆ ಬೇರೆ ಭಾಷೆಯ ಸಿನಿಮಾ ಮಾಡಿದ್ದರು. ಆದರೆ, 'ಉಗ್ರಂ' ಅವರ ವೃತ್ತಿ ಜೀವನದ ದೊಡ್ಡ ಬ್ರೇಕಿಂಗ್ ಪಾಯಿಂಟ್. ಈ ಸಿನಿಮಾದಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದ ಹರಿಪ್ರಿಯಾ ಎಲ್ಲರ ಗಮನ ಸೆಳೆದರು. ಅಲ್ಲಿಂದ ಹರಿಪ್ರಿಯಾ ಡಿಮ್ಯಾಂಡ್ ಜಾಸ್ತಿಯಾಯ್ತು.

ರವಿ ಬಸ್ರೂರ್ ಹುಟ್ಟಿದ್ದು

ರವಿ ಬಸ್ರೂರ್ ಹುಟ್ಟಿದ್ದು

ರವಿ ಬಸ್ರೂರ್ ಎಂದು ಮಹಾ ಪ್ರತಿಭೆ ಹುಟ್ಟಿದ್ದು 'ಉಗ್ರಂ' ಮೂಲಕ. ಇದು ಅವರ ಮೊದಲ ಸಿನಿಮಾವಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ರವಿ ಬಿರುಗಾಳಿಯಂತೆ ಮುನ್ನುಗುತ್ತಿದ್ದಾರೆ. ಇವರ ಜೊತೆಗೆ ಎಡಿಟರ್ ಶ್ರೀಕಾಂತ್ ಹಾಗೂ ಸಿನಿಮಾಟೋಗ್ರಾಫರ್ ಭುವನ್ ಗೌಡಗೆ ಕೂಡ ಈ ಚಿತ್ರದಿಂದ ಭವಿಷ್ಯ ಸಿಕ್ಕಿತ್ತು. ನಟ ತಿಲಕ್ ಗೆ ಹೊಸ ಇಮೇಜ್ ನೀಡಿತ್ತು.

More from Filmibeat

English summary
5 years for actor Srii Murali's Ugram kannada movie. The movie is directed by prashanth neel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X