Tagaru Palya: 'ಟಗರು ಪಲ್ಯ'ವನ್ನು ಚಪ್ಪರಿಸಿದ ಕನ್ನಡಿಗರು.. ಹೆಚ್ಚಾಯ್ತು ಶೋಗಳ ಸಂಖ್ಯೆ, ರಿಮೇಕ್‌ಗೂ ಬೇಡಿಕೆ
ಈ ವಾರ ತೆರೆಗೆ ಬಂದಿರುವ ಟಗರು ಪಲ್ಯ ಅಪ್ಪಟ ದೇಸಿ ಸೊಗಡನ್ನು ಕನ್ನಡಿಗರಿಗೆ ಉಣಬಡಿಸಿದ್ದು, ಸಿನಿ ಪ್ರೇಕ್ಷಕರು ಚಪ್ಪರಿಸಿಕೊಂಡು ಸವಿದಿದ್ದಾರೆ. ಕುಟುಂಬ ಸಮೇತ ಸಿನಿಮಾ ಮಂದಿರಗಳಲ್ಲಿ ಜನ ಸೇರುತ್ತಿದ್ದು, ಚಿತ್ರಮಂದಿರಗಳು ಫುಲ್ ಆಗುತ್ತಿವೆ. ಕನ್ನಡ ಸಿನಿಮಾಗಳಿಗೆ ಥಿಯೇಟರ್‌ಗಳಲ್ಲಿ ಜಾಗ ಇಲ್ಲ ಎನ್ನುವ ಕಾಲಘಟ್ಟದಲ್ಲಿ ಮತ್ತಷ್ಟು ಶೋಗಳನ್ನು ಹೆಚ್ಚಿಸಿಕೊಂಡಿದೆ.
ಇತ್ತೀಚೆಗೆ ರಾಜ್ಯದಲ್ಲಿ ಕರ್ಮಷಿಯಲ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ಹೆಚ್ಚಾಗಿದೆ. ಅವುಗಳ ನಡುವೆ ನಟ, ನಿರ್ಮಾಪಕ ಡಾಲಿ ಧನಂಜಯ್ ಕನ್ನಡಿಗರು ನನ್ನ ಸಿನಿಮಾ ಒಪ್ಪುತ್ತಾರೆ ಎಂಬ ವಿಶ್ವಾಸದಿಂದ ಈ ವಾರ ಹಳ್ಳಿ ಸೊಗಡಿನ ಟಗರು ಪಲ್ಯವನ್ನು ಪ್ರೇಕ್ಷಕ ಮುಂದಿರಿಸಿದ್ದರು. ಚಿತ್ರತಂಡದ ಭರವಸೆ ಸುಳ್ಳಾಗಲಿಲ್ಲ. ಚಿತ್ರ ಎಲ್ಲೆಡೆ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ದಿನದಿಂದ ದಿನಕ್ಕೆ ಶೋಗಳ ಸಂಖ್ಯೆ ಹೆಚ್ಚಾಗಿದೆ.

ಮತ್ತೆ ಐವತ್ತು ಶೋಗಳನ್ನು ಹೆಚ್ಚಿಸಿಕೊಂಡ 'ಟಗರು ಪಲ್ಯ'
ಟಗರು ಪಲ್ಯಕ್ಕೆ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಟ ಧನಂಜಯ್ ಬಂಡವಾಳ ಹೂಡಿದ್ದು, ಮೊದಲ ಬಾರಿಗೆ ಉಮೇಶ್ ಕೃಪ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಚಿತ್ರದ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರಕ್ಕೆ ನಾಗಭೂಷಣ್, ರಂಗಾಯಣ ರಘು, ತಾರಾ ಅನುರಾಧಾ, ಪೂರ್ಣಚಂದ್ರ, ವೈಜನಾಥ್ ಬಿರಾದಾರ್, ಚಿತ್ರಾ ಶೆಣೈ, ಶ್ರೀನಾಥ್ ವಸಿಷ್ಠ ಸಾಥ್ ನೀಡಿದ್ದಾರೆ.
ಇನ್ನು, ಅಕ್ಟೋಬರ್ 27 ರಂದು ಟಗರು ಪಲ್ಯ 175 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾವನ್ನು ಜನ ಮೆಚ್ಚಿದ್ದರು. ಇದಕ್ಕೆ ಸಾಕ್ಷಿಯಾಗಿ ಈಗ ಐವತ್ತು ಶೋಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದೆ. ವಾತಾಂತ್ಯದಲ್ಲಿ ಶೋಗಳ ಸಂಖ್ಯೆ ಹೆಚ್ಚಾಗಿರುವುದು ಚಿತ್ರತಂಡಕ್ಕೆ ಲಾಭವಾಗಲಿದೆ. ಇನ್ನು, ಮುಂದಿನ ವಾರ ಮತ್ತಷ್ಟು ಶೋಗಳು ಹೆಚ್ಚಾಗುವ ನಿರೀಕ್ಷೆಯಲ್ಲಿದೆ ಚಿತ್ರತಂಡ.
ಟಗರು ಪಲ್ಯ ರಿಮೇಕ್‌ಗೂ ಹೆಚ್ಚಾಯಿತು ಡಿಮ್ಯಾಂಡ್
ಸಂಬಂಧ, ಪ್ರೀತಿ, ನಗು, ಅಳು.. ಸೇರಿ ಒಂದೊಳ್ಳೆ ಫ್ಯಾಮಿಲಿ ಡ್ರಾಮಾ ಎನಿಸಿಕೊಂಡಿರುವ ಟಗರು ಪಲ್ಯ ಸಿನಿಮಾ ಬಗ್ಗೆ ಪ್ರೇಕ್ಷಕ ಮುಕ್ತ ಕಂಠದಿಂದ ಹೊಗಳುತ್ತಿದ್ದು, ವಿಮರ್ಶಕರು ಕೂಡ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೆ ಟಗರು ಪಲ್ಯ ಸಿನಿಮಾ ರಿಮೇಕ್ ಗೆ ಬೇಡಿಕೆ ಹೆಚ್ಚಿದೆ.

ಟಗರು ಪಲ್ಯ ಕನ್ನಡ ಪ್ರೇಕ್ಷಕರನ್ನು ಮಾತ್ರವಲ್ಲದೆ ಪರ ಭಾಷೆಯ ಪ್ರೇಕ್ಷಕರನ್ನು ಸೆಳೆಯುದ್ದು, ಇತರ ಭಾಷೆಗಳ ಸಿನಿಮಾ ನಿರ್ಮಾಪಕರು ಚಿತ್ರಕ್ಕೆ ಫಿದಾ ಆಗಿದ್ದಾರಂತೆ. ಹಾಗಾಗಿ ಚಿತ್ರದ ರಿಮೇಕ್ ರೈಟ್ಸ್‌ಗೆ ಭಾರಿ ಡಿಮ್ಯಾಂಡ್ ಶುರುವಾಗಿದೆ. ಈಗಾಗಲೇ ತಮಿಳು, ತೆಲುಗು ಭಾಷೆಯಿಂದ ಬೇಡಿಕೆ ಹೆಚ್ಚಾಗಿದೆಯಂತೆ. ರಿಮೇಕ್ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ ರಿಮೇಕ್ ರೈಟ್ಸ್ ಸೇಲ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ಉತ್ತಮ ಸಿನಿಮಾಗಳಿಗೆ ಬಂಡವಾಹ ಹೂಡಬೇಕು. ಹೊಸಬರನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡಿಸಬೇಕು ಎಂಬ ಉದ್ದೇಶ ಹೊಂದಿರುವ ಡಾಲಿ ಪಿಕ್ಚರ್ಸ್ ನಿರ್ಮಿಸಿರುವ ಮೂರನೇ ಚಿತ್ರ ಟಗರು ಪಲ್ಯ. ಉಮೇಶ್ ಕೆ ಕೃಪಾ ಚೊಚ್ಚಲ ಸಿನಿಮಾದಲ್ಲಿಯೇ ಗೆದ್ದಿದ್ದಾರೆ. ತಾರಾ ಅನುರಾಧಾ, ರಂಗಾಯಣ ರಘು, ಅಮೃತಾ ಪ್ರೇಮ್, ನಾಗಭೂಷಣ್ ಸೇರಿದಂತೆ ಇಡೀ ಕಲಾವಿದರು ತಮ್ಮ ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ವಾಸುಕಿ ವೈಭವ್ ಅದ್ಭುತ ಮ್ಯೂಸಿಕ್, ಧನಂಜಯ್ ಸಾಹಿತ್ಯ ಚಿತ್ರಕ್ಕಿದೆ.
ಸಿನಿಮಾ ನೋಡಲಿದ್ದಾರೆ ಮೋಹಕ ತಾರೆ, ಹೈದರಾಬಾದ್‌ನಲ್ಲಿ ಧನಂಜಯ್
ಚಂದನವನದ ಮೋಹಕ ತಾರೆ ರಮ್ಯಾ ಟಗರು ಪಲ್ಯ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬರ್ತಿದ್ದು, ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ. ಜೊತೆಗೆ ಇಂದೇ ಸಿನಿಮಾ ನೋಡುವುದಾಗಿ ತಿಳಿಸಿದ್ದಾರೆ. ಇನ್ನು ಟಗರು ಪಲ್ಯ ನಿರ್ಮಾಪಕ ಧನಂಜಯ್ ಭಾರಿ ಪ್ರಚಾರದಲ್ಲಿ ತಿಡಗಿದ್ದು, ಹೈದರಾಬಾದ್‌ನಲ್ಲಿ ಅಭಿಮಾನಿಗಳ ಜೊತೆಗೆ 'ಟಗರು ಪಲ್ಯ' ಸವಿಯಲಿದ್ದಾರೆ.


Click it and Unblock the Notifications











