ರಶ್ಮಿಕಾ ಮಂದಣ್ಣ- ರಕ್ಷಿತ್ ಶೆಟ್ಟಿ ಮೊದಲ ಯಶಸ್ಸಿಗೆ 5 ವರ್ಷ!

ಕನ್ನಡ ಚಿತ್ರರಂಗದಲ್ಲಿ ಬಂದ ಒಂದಷ್ಟು ಸಿನಿಮಾಗಳು ಎವರ್ ಗ್ರೀನ್‌. ಅಂದರೆ ಅವು ಎಂದಿಗೂ ಜನ ಮಾನಸದಲ್ಲಿ ಅಜರಾಮರ. ಅಂತಹ ಚಿತ್ರಗಳ ಸಾಲಿಗೆ ಸೇರಿದೆ ಕನ್ನಡದ 'ಕಿರಿಕ್‌ ಪಾರ್ಟಿ' ಚಿತ್ರ. ಕಿರಿಕ್‌ ಪಾರ್ಟಿ ಚಿತ್ರದ ದೊಡ್ಡ ಮಟ್ಟಿನ ಯಶಸ್ಸು ಕಂಡ ಚಿತ್ರ. ರಿಲೀಸ್ ದಿನವೇ ಚಿತ್ರರಂಗದಲ್ಲಿ ಹೊಸ ದಾಖಲೆ ಮಾಡಿದ ಚಿತ್ರ.

ಕಿರಿಕ್‌ ಪಾರ್ಟಿಯಲ್ಲಿ ನಿರೀಕ್ಷೆ ಮಾಡದ ಮಟ್ಟಿಗೆ ಹೆಸರು ಮಾಡಿರುವ ಚಿತ್ರ, ಜೊತೆಗೆ ಗಳಿಕೆಯಲ್ಲೂ ದಾಖಲೆ ಬರೆದ ಚಿತ್ರ. ಸದ್ಯ ಈ ಚಿತ್ರದ ಬಗ್ಗೆ ಹೇಳಲಿ ಕಾರಣ. ಈ ದಿನ (ಡಿಸೆಂಬರ್ 30). 2016ರಲ್ಲಿ ಡಿಸೆಂಬರ್‌ 30ಕ್ಕೆ ಕಿರಿಕ್‌ ಪಾರ್ಟಿ ರಿಲೀಸ್ ಆಗಿತ್ತು.

ಈ ದಿನವನ್ನು ಚಿತ್ರ ತಂಡ ಸಂಭ್ರಮಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಿರಿಕ್‌ ಪಾರ್ಟಿ ವಿಕ್ಟರಿ ಬಗ್ಗೆ ವಿಶೇಷವಾದ ವಿಡಿಯೋ ಹಂಚಿಕೊಂಡಿದ್ದಾರೆ ನಟ ರಕ್ಷಿತ್ ಶೆಟ್ಟಿ.

ಕಿರಿಕ್‌ ಪಾರ್ಟಿ ಚಿತ್ರಕ್ಕೆ ಅಮೋಘ 5 ವರ್ಷ!

ಕಿರಿಕ್‌ ಪಾರ್ಟಿ ಚಿತ್ರಕ್ಕೆ ಅಮೋಘ 5 ವರ್ಷ!

ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ ಅಭಿನಯದ, ರಿಷಬ್ ಶೆಟ್ಟಿ ನಿರ್ದೇಶನದಲ್ಲಿ 5 ವರ್ಷದ ಹಿಂದೆ 'ಕಿರಿಕ್‌ ಪಾರ್ಟಿ' ಚಿತ್ರದ ರಿಲೀಸ್ ಆಗಿದೆ. ಈ ಚಿತ್ರ ಸಿನಿಮಾ ಪ್ರೇಕ್ಷಕರಿಗೆ ವಿಭಿನ್ನ ರುಚಿಯನ್ನು ತೋರಿಸಿದ ಚಿತ್ರ. ಅಂದರೆ ಒಂದೇ ಸಾಲು ಸಾಲಗಿ ಒಮದೇ ರೀತಿಯ ಚಿತ್ರಗಳು ಬರುತ್ತಿದ್ದಾಗ, ಕಿರಿಕ್‌ ಪಾರ್ಟಿ ವಿಭಿನ್ನ ಕಾನ್ಸೆಪ್ಟ್‌ನಲ್ಲಿ ಬಂದು ಜನರ ಮನಗೆದ್ದ ಚಿತ್ರ. ಈ ಚಿತ್ರಕ್ಕೆ ಸಿನಿಮಾ ಪ್ರೇಕ್ಷಕರು ಮನಸೋತರು. ಹೆಚ್ಚು ಕಾಲ ಬೆಳ್ಳಿ ಪರದೆ ಮೇಲೆ ರಾರಾಜಿಸಿದ ಈ ಚಿತ್ರ, ಗಲ್ಲಾ ಪೆಟ್ಟಿಗೆಯಲ್ಲೂ ದೊಡ್ಡ ಮಟ್ಟದ ಗಳಿಕೆ ಮಾಡಿತು. ಈಗ ಅದು ಇತಿಹಾಸ, ಆ ದಿನವನ್ನು ಚಿತ್ರ ತಂಡ ನೆನಪಿಸಿಕೊಂಡಿದೆ.

ಕಿರಿಕ್ ಪಾರ್ಟಿ ರಿಲೀಸ್‌ ದಿನವನ್ನು ನೆನೆದ ರಕ್ಷಿತ್‌ ಶೆಟ್ಟಿ!

ನಟ ರಕ್ಷಿತ್‌ ಶೆಟ್ಟಿ ಕಿರಿಕ್‌ ಪಾರ್ಟಿ ಚಿತ್ರಕ್ಕೆ 5 ವರ್ಷ ತುಂಬಿದ್ದರ ಬಗ್ಗೆ ಟ್ವೀಟ್ ಮಾಡಿದ್ದಾರೆ. 5 ವರ್ಷದ ಹಿಂದಿನ ನೆನಪುಗಳನ್ನು ರಕ್ಷಿತ್‌ ಶೆಟ್ಟಿ ಹಂಚಿ ಕೊಂಡಿದ್ದಾರೆ. ಜೊತೆಗೆ ವಿಶೇಷವಾದ ವಿಡಿಯೋ ಹಂಚಿಕೊಂಡು "ಕಿರಿಕ್ ಪಾರ್ಟಿ ಬಿಡುಗಡೆ ಆಗಿ ಇಂದಿಗೆ 5 ವರ್ಷ. ಕಾಲೇಜು ಜೀವನ ಮತ್ತು ಜೀವನದ ಬೆಳವಣಿಗೆಗೆಯನ್ನು ಒಂದೆಡೆ ತಂದಿದ್ದ ಸಿನಿಮಾ. ಹಲವರ ವೃತ್ತಿ ಬದುಕಿನ ಹಾದಿಗೆ ಬೆಳಕು ಚೆಲ್ಲಿದ ಗೆಲುವದು. ಈ ವಿಶೇಷ ಅನ್ವೇಷಣೆಗೆ 5 ವರ್ಷ. ಅದುವೇ 'ಕಿರಿಕ್ ಪಾರ್ಟಿ' ಚಿತ್ರ" ಎಂದು ಬರೆದು ರಕ್ಷಿತ್‌ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಎಂದೆಂದಿಗೂ ಕಿರಿಕ್ ಪಾರ್ಟಿ ನನಗೆ ವಿಶೇಷ: ರಶ್ಮಿಕಾ ಮಂದಣ್ಣ!

ಎಂದೆಂದಿಗೂ ಕಿರಿಕ್ ಪಾರ್ಟಿ ನನಗೆ ವಿಶೇಷ: ರಶ್ಮಿಕಾ ಮಂದಣ್ಣ!

ನಟಿ ರಶ್ಮಿಕಾ ಮಂದಣ್ಣ ಕೂಡ ಕಿರಿಕ್ ಪಾರ್ಟಿ ಚಿತ್ರವನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. "ಎಲ್ಲಿ ಮತ್ತು ಯಾವಾಗ ಮತ್ತು ಹೇಗೆ ನನ್ನ ಪಯಣ ಆರಂಭ ಆಯಿತು ಇನ್ನುವುದು ಇದು. ಇದು ನನಗೆ ಸದಾ ಮತ್ತು ಎಂದೆಂದಿಗೂ ಇದು ವಿಶೇಷ. ಕಿರಿಕ್‌ ಪಾರ್ಟಿಗೆ 5 ವರ್ಷ" ಎಂದು ಬರೆದುಕೊಂಡಿದ್ದಾರೆ.

ರಕ್ಷಿತ್- ರಶ್ಮಿಕಾ ಪ್ರೀತಿಗೆ ಬುನಾದಿ ಹಾಕಿದ್ದ ಕಿರಿಕ್‌ ಪಾರ್ಟಿ!

ರಕ್ಷಿತ್- ರಶ್ಮಿಕಾ ಪ್ರೀತಿಗೆ ಬುನಾದಿ ಹಾಕಿದ್ದ ಕಿರಿಕ್‌ ಪಾರ್ಟಿ!

ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಪ್ರೀತಿ ಮುರಿದು ಕೊಂಡು ದೂರಾಗಿದ್ದಾರೆ ಎನ್ನುವುದು ಬೇರೆ ವಿಚಾರ. ಆದರೆ 'ಕಿರಿಕ್‌ ಪಾರ್ಟಿ' ಚಿತ್ರವನ್ನು ನೆನದರೆ ಮೊದಲು ನೆನಪಾಗುವುದೇ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್‌ ಶೆಟ್ಟಿಯ ಪ್ರೀತಿ, ಪ್ರೇಮದ ಕಥೆ. ಈ ಚಿತ್ರದ ಚಿತ್ರೀಕರಣದ ವೇಳೆಯೇ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿಗೆ ಲವ್‌ ಆಗಿದ್ದು. ಆ ಜೋಡಿಯನ್ನು ತೆರೆಯ ಮೇಲೆ ನೋಡಿ ಜನ ಕೂಡ ಮೆಚ್ಚಿಕೊಂಡಿದ್ದರು.

ಸ್ಟಾರ್‌ಗಳನ್ನು ಹುಟ್ಟು ಹಾಕಿದ 'ಕಿರಿಕ್‌ ಪಾರ್ಟಿ'!

ಸ್ಟಾರ್‌ಗಳನ್ನು ಹುಟ್ಟು ಹಾಕಿದ 'ಕಿರಿಕ್‌ ಪಾರ್ಟಿ'!

ಇನ್ನು ಕಿರಿಕ್‌ ಪಾರ್ಟಿ ಚಿತ್ರ ಕೇವಲ ಹೆಸರು ಮಾಡಿದ ಚಿತ್ರ ಆಗಿ ಮಾತ್ರ ಉಳಿಯಲಿಲ್ಲ. ಚಿತ್ರರಂಗಕ್ಕೆ ಕಿರಿಕ್‌ ಪಾರ್ಟಿ ಸ್ಟಾರ್‌ಗಳನ್ನು ಕೊಟ್ಟಿದೆ. ಈ ಚಿತ್ರದ ಮೂಲಕ ನಟ ರಕ್ಷಿತ್‌ ಶೆಟ್ಟಿ ಸ್ಟಾರ್ ಬದಲಾಯಿತು. ಮೊದಲ ಬಾರಿಗೆ ನಾಯಕಿ ಆಗಿ ಬಣ್ಣ ಹಚ್ಚಿದ ನಟಿ ರಶ್ಮಿಕಾ ಮಂದಣ್ಣ ಸ್ಟಾರ್‌ ನಟಿ ಆಗಿ ಬೆಳೆದು ನಿಂತಿದ್ದಾರೆ. ಅಂತೆಯೇ ರಿಷಬ್ ಶೆಟ್ಟಿ ಸ್ಟಾರ್‌ ಡೈರೆಕ್ಟರ್‌ ಪಟ್ಟಕ್ಕೇರಿದ್ದಾರೆ. ಮತ್ತೊಬ್ಬ ನಟಿ ಸಂಯುಕ್ತ ಹೆಗ್ಡೆ ಕೂಡ ದಕ್ಷಿಣ ಭಾರತದಲ್ಲಿ ಬೇಡಿಕೆಯ ನಟಿ ಆಗಿದ್ದಾರೆ. ಹಾಗಾಗಿ ಕಿರಿಕ್‌ ಪಾರ್ಟಿ ಚಿತ್ರವನ್ನು ಕೇಲವ ಒಂದು ಸಕ್ಸಸ್‌ ಚಿತ್ರ ಎನ್ನುವುದಕ್ಕಿಂದ ಹೆಚ್ಚಾಗಿ, ಚಿತ್ರ ರಂಗಕ್ಕೆ ಕೊಡುಗೆ ನೀಡಿದ ಚಿತ್ರ ಎಂದೇ ಹೇಳಬಹುದು.

More from Filmibeat

English summary
5years For Rashmika Mandanna And Rakshith Shetty Starrer Kirik Party Movie, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X