For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಪಂಡಿತ್ ನಟನೆಯ ಅತ್ಯುತ್ತಮ ಆರು ಸಿನಿಮಾಗಳು

  |

  ಸ್ಯಾಂಡಲ್‌ವುಡ್‌ ಪ್ರಿನ್ಸಸ್ ರಾಧಿಕಾ ಪಂಡಿತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯಶ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟ ಮೇಲೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿರುವ ರಾಧಿಕಾ, ಕನ್ನಡ ಇಂಡಸ್ಟ್ರಿಯ ಪ್ರತಿಭಾನ್ವಿತ ಹಾಗೂ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ನಟಿಯಾಗಿದ್ದರು.

  2008ರಲ್ಲಿ ಮೊಗ್ಗಿನ ಮನಸು ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿ ಪ್ರವೇಶಿಸಿದ ರಾಧಿಕಾ ಸುಮಾರು 12 ವರ್ಷಗಳ ಕಾಲ ಜನರನ್ನು ರಂಜಿಸಿದ್ದರು. ಒಳ್ಳೊಳ್ಳೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದುವರೆಗೂ 21 ಚಿತ್ರಗಳಲ್ಲಿ ರಾಧಿಕಾ ನಟಿಸಿದ್ದಾರೆ. ಬಹುತೇಕ ಎಲ್ಲವೂ ಹಿಟ್ ಸಿನಿಮಾಗಳೇ. ಕೆಲವು ಚಿತ್ರಗಳು ಈಗಲೂ ಪ್ರೇಕ್ಷಕರನ್ನು ಕಾಡುತ್ತದೆ. ಈ ಸಿನಿಮಾಗಳಲ್ಲಿ ರಾಧಿಕಾ ಅವರನ್ನು ನೋಡಲು ಜನರು ಇಷ್ಟ ಪಡುತ್ತಾರೆ. ಅಂತಹ ಸಿನಿಮಾಗಳ ಪೈಕಿ ದಿ ಬೆಸ್ಟ್ ಎನ್ನುವ ಆರು ಸಿನಿಮಾಗಳನ್ನು ಫಿಲ್ಮಿಬೀಟ್ ಆಯ್ಕೆ ಮಾಡಿದೆ. ಇದನ್ನು ಹೊರತು ಪಡಿಸಿ ನಿಮಗೆ ಇಷ್ಟವಾದ ಚಿತ್ರಗಳನ್ನು ಕಾಮೆಂಟ್ ಮೂಲಕ ತಿಳಿಸಬಹುದು. ಮುಂದೆ ಓದಿ...

  ಮೊಗ್ಗಿನ ಮನಸು

  ಮೊಗ್ಗಿನ ಮನಸು

  2008ರಲ್ಲಿ ತೆರೆಕಂಡ ಮೊಗ್ಗಿನ ಮನಸು ಸಿನಿಮಾದ ಮೂಲಕ ರಾಧಿಕಾ ಪಂಡಿತ್ ಚಿತ್ರರಂಗ ಪ್ರವೇಶಿಸಿದರು. ಶಶಾಂಕ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ನಟ ಯಶ್-ರಾಧಿಕಾ ಜೋಡಿಯಾಗಿ ನಟಿಸಿದ್ದರು. ಮೊಗ್ಗಿನ ಮನಸು ಚಿತ್ರದ ಅಭಿನಯಕ್ಕಾಗಿ ರಾಧಿಕಾ ಪಂಡಿತ್‌ಗೆ ರಾಜ್ಯ ಪ್ರಶಸ್ತಿ ಹಾಗೂ ಫಿಲಂ ಫೇರ್ ಪ್ರಶಸ್ತಿ ಲಭಿಸಿತ್ತು. ರಾಧಿಕಾ ವೃತ್ತಿ ಜೀವನದಲ್ಲಿ ಎಂದೆಂದೂ ಮರೆಯಲಾಗದ ಚಿತ್ರ ಇದಾಗಿದೆ.

  ರಾಧಿಕಾ ಪಂಡಿತ್ ಹುಟ್ಟುಹಬ್ಬ: ಅಭಿಮಾನಿಗಳಿಗೆ ಪ್ರೀತಿಯ ಪತ್ರ ಬರೆದ ಸಿಂಡ್ರೆಲ್ಲಾರಾಧಿಕಾ ಪಂಡಿತ್ ಹುಟ್ಟುಹಬ್ಬ: ಅಭಿಮಾನಿಗಳಿಗೆ ಪ್ರೀತಿಯ ಪತ್ರ ಬರೆದ ಸಿಂಡ್ರೆಲ್ಲಾ

  ಲವ್ ಗುರು ಚಿತ್ರದ 'ಖುಷಿ'

  ಲವ್ ಗುರು ಚಿತ್ರದ 'ಖುಷಿ'

  2009ರಲ್ಲಿ ಬಿಡುಗಡೆಯಾದ ಚಿತ್ರ ಲವ್ ಗುರು. ತರುಣ್ ಚಂದ್ರ ನಾಯಕರಾಗಿದ್ದ ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಖುಷಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದರು. ಪ್ರಶಾಂತ್ ರಾಜ್ ಈ ಚಿತ್ರ ನಿರ್ದೇಶಿಸಿದ್ದರು. ಲವ್ ಗುರು ಸಿನಿಮಾ ಮ್ಯೂಸಿಕಲ್ ಆಗಿ ದೊಡ್ಡ ಹಿಟ್ ಆಗಿತ್ತು. ರಾಧಿಕಾ ಅವರಿಗೂ ಒಳ್ಳೆಯ ಹೆಸರು ತಂದು ಕೊಡ್ತು.

  ಕೃಷ್ಣನ್ ಲವ್ ಸ್ಟೋರಿ

  ಕೃಷ್ಣನ್ ಲವ್ ಸ್ಟೋರಿ

  ಮೊಗ್ಗಿನ ಮನಸು, ಒಲವೇ ಜೀವನ ಲೆಕ್ಕಾಚಾರ, ಲವ್ ಗುರು ಬಳಿಕ ರಾಧಿಕಾ ನಟಿಸಿದ ನಾಲ್ಕನೇ ಚಿತ್ರ ಕೃಷ್ಣನ್ ಲವ್ ಸ್ಟೋರಿ. ಅಜಯ್ ರಾವ್ ನಾಯಕರಾಗಿದ್ದ ಈ ಚಿತ್ರ ಶತದಿನ ಆಚರಿಸಿಕೊಂಡಿತ್ತು. ಶಶಾಂಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ರಾಧಿಕಾ ನಟನೆಗೆ ಫಿಲಂ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು.

  ಅದ್ಧೂರಿಯಲ್ಲಿ 'ಪೂರ್ಣ'

  ಅದ್ಧೂರಿಯಲ್ಲಿ 'ಪೂರ್ಣ'

  ಧ್ರುವ ಸರ್ಜಾ ಚೊಚ್ಚಲ ಸಿನಿಮಾದಲ್ಲಿ ರಾಧಿಕಾ ಪಂಡಿತ್ ನಾಯಕಿಯಾಗಿದ್ದರು. ಅಚ್ಚು-ರಚ್ಚು ಲವ್ ಸ್ಟೋರಿ ಮೆಗಾ ಹಿಟ್ ಆಯಿತು. ಎಪಿ ಅರ್ಜುನ್ ಈ ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾ ಹಿಟ್ ಆದ ಪರಿಣಾಮ ಧ್ರುವ-ರಾಧಿಕಾ ಕಾಂಬಿನೇಷನ್‌ನಲ್ಲಿ ಬಹುದ್ದೂರ್ ಎಂಬ ಮತ್ತೊಂದು ಚಿತ್ರ ಬಂತು.

  ಕಡ್ಡಿಪುಡಿಯಲ್ಲಿ ಉಮಾ

  ಕಡ್ಡಿಪುಡಿಯಲ್ಲಿ ಉಮಾ

  ಪಕ್ಕದ ಮನೆ ಹುಡುಗಿ, ಕಾಲೇಜ್ ಹುಡುಗಿ, ಜಗಳಗಂಟಿ ಹುಡುಗಿ ಪಾತ್ರಗಳಲ್ಲಿ ನಟಿಸಿದ್ದ ರಾಧಿಕಾ ಪಂಡಿತ್, ಕಡ್ಡಿಪುಡಿ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಪತ್ನಿ ಪಾತ್ರದಲ್ಲಿ ನಟಿಸಿದ್ದರು. ಈ ಹಿಂದೆ ರಾಧಿಕಾ ಅಭಿನಯಿಸಿದ್ದ ಎಲ್ಲ ಪಾತ್ರಗಳಿಗಿಂತೂ ಇದು ಬಹಳ ವಿಶೇಷವಾಗಿತ್ತು. ದುನಿಯಾ ಸೂರಿ ನಿರ್ದೇಶಿಸಿದ್ದರು.

  ರಿಲೀಸ್ ಗೂ ಮೊದಲೇ ಮೈಸೂರಿನಲ್ಲಿ ಅಬ್ಬರಿಸಲಿದ್ದಾನೆ ಯುವರತ್ನ | Yuvaratna | Puneeth Rajkumar|Filmibeat Kannada
  ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ

  ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ

  ರಾಧಿಕಾ ಪಂಡಿತ್ ಮತ್ತು ಯಶ್ ಪಾಲಿಗೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಮರೆಯಲು ಸಾಧ್ಯವಿಲ್ಲ. ಕನ್ನಡ ಇಂಡಸ್ಟ್ರಿಯಲ್ಲಿ ಚಿತ್ರ ಅನೇಕ ದಾಖಲೆ ಬರೆದಿದೆ. ರಾಧಿಕಾ ನಟನೆಯ ಸೈಮಾ ಪ್ರಶಸ್ತಿ ಲಭಿಸಿತ್ತು. ನಿಜ ಜೀವನ ಜೋಡಿಯಾಗಿರುವ ಯಶ್-ರಾಧಿಕಾ ಪಂಡಿತ್ ಈ ಸಿನಿಮಾ ಮಾಡುವ ವೇಳೆಗೆ ಪ್ರೀತಿಯಲ್ಲಿದ್ದರು.

  English summary
  Birthday Special: six Best movies of Radhika Pandit's film journey.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X