ಸಿಂಪಲ್ ಸುನಿಗೆ 2ನೇ ಜನ್ಮ ನೀಡಿದ ಮಾರ್ಚ್ 8.!

ಖ್ಯಾತ ನಿರ್ದೇಶಕ ದಿನೇಶ್ ಬಾಬು ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡ್ತಿದ್ದ ಸುನಿ ಈಗ ಕನ್ನಡದ ಸ್ಟಾರ್ ಡೈರೆಕ್ಟರ್. ಹೊಸ ಹೊಸ ಕಥೆಗಳ ಮೂಲಕ ಕನ್ನಡ ಪ್ರೇಕ್ಷಕರನ್ನ ರಂಜಿಸುತ್ತಿದ್ದಾರೆ. ತನ್ನದೇ ಆದ ಸ್ಟೈಲ್ ಮೂಲಕ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಟ್ರೆಂಡ್ ಹುಟ್ಟುಹಾಕಿದ್ದಾರೆ.

ಇಂತಹ ನಿರ್ದೇಶಕ ಸಿಂಪಲ್ ಸುನಿಗೆ ಮಾರ್ಚ್ 8 ತುಂಬಾ ವಿಶೇಷ ಮತ್ತು ಎರಡನೆ ಜನ್ಮ ನೀಡಿದೆ ಅಂದ್ರೆ ನಂಬಲೇಬೇಕು. ಹೌದು, ಮಾರ್ಚ್ 8 ರಂದು ಸುನಿ ಸಿನಿ ಬದುಕಿನಲ್ಲಿ ಮಹತ್ವದ ದಿನ. ಸಹಾಯಕ ನಿರ್ದೇಶಕರಾಗಿದ್ದ ಸುನಿ, ಸಿಂಪಲ್ ಸುನಿಯಾಗಿ ಸ್ವತಂತ್ರ ನಿರ್ದೇಶಕರಾದ ದಿನ.

ಅರ್ಥಾಥ್, ಸುನಿ ನಿರ್ದೇಶನದ ಚೊಚ್ಚಲ ಸಿನಿಮಾ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಬಿಡುಗಡೆಯಾದ ದಿನ. ಕಳೆದ ಆರು ವರ್ಷದ ಹಿಂದೆ (2013 ಮಾರ್ಚ್ 8) ರಂದು ಈ ಸಿನಿಮಾ ರಿಲೀಸ್ ಆಗಿತ್ತು.

6 complets years for simple agi ondh love story

ರಕ್ಷಿತ್ ಶೆಟ್ಟಿ, ಶ್ವೇತಾ ಶ್ರೀವಾಸ್ತವ್ ಅಭಿನಯಿಸಿದ್ದ ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಡಬಲ್ ಮೀನಿಂಗ್ ಡೈಲಾಗ್ ಗಳ ಮೂಲಕ ಹೊಸ ಟ್ರೆಂಡ್ ಗೆ ಕಾರಣವಾಗಿತ್ತು. ಇಲ್ಲಿಂದ ನಂತರ ಇದೇ ಟ್ರೆಂಡ್ ಫಾಲೋ ಮಾಡಿ ಕೆಲವು ಸಿನಿಮಾಗಳು ಬಂದವು.

ಕೇವಲ 30 ದಿಂದ 40 ಲಕ್ಷ ವೆಚ್ಚದಲ್ಲಿ ತಯಾರಾಗಿದ್ದ ಈ ಸಿನಿಮಾ ದೊಡ್ಡ ಮಟ್ಟದ ಗಳಿಕೆ ಕಂಡಿತ್ತು. ಈ ಚಿತ್ರದ ಬಳಿಕ ಬಹುಪರಾಕ್, ಸಿಂಪಲ್ ಆಗಿ ಇನ್ನೊಂದು ಲವ್ ಸ್ಟೋರಿ, ಆಪರೇಷನ್ ಅಲಮೇಲಮ್ಮ, ಚಮಕ್, ಬಜಾರ್ ಅಂತಹ ಸಿನಿಮಾ ಮಾಡಿದ್ದಾರೆ. ವಿಶೇಷ ಅಂದ್ರೆ ಈ ಎಲ್ಲ ಚಿತ್ರಗಳು ಸ್ವಮೇಕ್.

ಇತ್ತೀಚಿಗಷ್ಟೆ ಬಜಾರ್ ಚಿತ್ರದ ಮಾಡಿ ಯಶಸ್ಸು ಕಂಡಿದ್ದ ಸುನಿ ಈಗ ಶರಣ್ ಜೊತೆಯಲ್ಲಿ ಅವತಾರ್ ಪುರುಷ ಎಂಬ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ಜಾನ್ ಸೀನಾ ಮತ್ತು ದಿಗಂತ್ ಜೊತೆಯಲ್ಲೂ ಒಂದು ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

More from Filmibeat

English summary
Simple suni directional first movie simple agi ondh love story has completes 6 years. the movie has released in 2013 march 8th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X