»   » ಚಿಂಗಾರಿ ಹೌಸ್ ಫುಲ್: ಮೊದಲ ದಿನ ದಾಖಲೆ ಗಳಿಕೆ

ಚಿಂಗಾರಿ ಹೌಸ್ ಫುಲ್: ಮೊದಲ ದಿನ ದಾಖಲೆ ಗಳಿಕೆ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಚಿಂಗಾರಿ' ಚಿತ್ರ ಕಳೆದ  ಫೆಬ್ರವರಿ 3, 2012ರಂದು ರಾಜ್ಯದಾದ್ಯಂತ ಬಿಡುಗಡೆ ಆಗಿದ್ದು, ಒಟ್ಟೂ 178 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಎಲ್ಲಾ ಕೇಂದ್ರಗಳಲ್ಲಿ ಮೊದಲ ಮೂರು ದಿನ 100% ಕಲೆಕ್ಷನ್ ದಾಖಲಿಸಿದ್ದು, ಮೊದಲ ದಿನದ ಗಳಿಕೆ ಕನ್ನಡ ಚಿತ್ರರಂಗದ ದಾಖಲೆ ಎನಿಸಿದೆ.

ಸುದ್ದಿ ಮೂಲಗಳ ಪ್ರಕಾರ, ಮೊದಲ ದಿನ ರು. 2.45 ಕೋಟಿ ಗಳಿಸಿ ಚಿಂಗಾರಿ ಹೊಸ ಇತಿಹಾಸ ಬರೆದಿದೆ. 2 ಹಾಗೂ 3ನೇ ದಿನದ ಗಳಿಕೆ ಕೂಡ ರು. 2 ಕೋಟಿಗೆ ಸಮೀಪವಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಕಡೆಗಳಲ್ಲಿಯೂ ಚಿಂಗಾರಿ ಹೌಸ್ ಫುಲ್. ಅಲ್ಲಿಗೆ ನಿರ್ಮಾಪಕರಿಂದ ಕೊಂಡುಕೊಂಡ ವಿತರಕರೂ ಕೂಡ ಸೇಫ್ ಎನ್ನುವಂತಾಗಿದೆ. ಲಾಭ ಬರೂವುದೂ ಖಾತ್ರಿ ಎನ್ನಬಹುದೇನೋ!

ಜನರ ಕ್ರೇಜ್ ಹೀಗೆ ಇದ್ದು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದರೆ ಈ ಚಿತ್ರದ ಒಟ್ಟೂ ಗಳಿಕೆ ಕೂಡ ದಾಖಲೆ ಸ್ಥಾಪಿಸಬಹುದು. ಆದರೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಎಲ್ಲಾ ಪ್ರೇಕ್ಷಕರ ಪ್ರತಿಕ್ರಿಯೆ ಅವಲಂಬಿಸಿದೆ. ಸದ್ಯಕ್ಕಂತೂ ಚಿಂಗಾರಿ ಯಶಸ್ವಿ ಯಾತ್ರೆ ಮುಂದುವರಿದಿದೆ. ಕನ್ನಡ ಚಿತ್ರರಂಗದ ನೆಮ್ಮದಿ ಹೆಚ್ಚಿಸಿದೆ. ನಿರ್ದೇಶಕ ಹರ್ಷ ನಗೆ ಬೀರುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Challenging Star Darshan movie Chingari collected more than Rs. 2 Crore on First day. It is the all tome record in Sandalwood. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X