ಸ್ವಾತಂತ್ರ್ಯೋತ್ಸವ ದಿನದಂದೇ ಈ ಕಲಾವಿದರ ಜೀವನದಲ್ಲಿ ಇನ್ನೊಂದು ಖುಷಿ

By Bharath Kumar

ಸಮಸ್ತ ಭಾರತೀಯರು ದೇಶದೆಲ್ಲೆಡೆ ಇಂದು ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ದೇಶದ ಪ್ರಮುಖ ನಗರ, ರಾಜ್ಯದ ಪ್ರಮುಖ ಸ್ಥಳಗಳು ಹಾಗೂ ಮನೆ ಮನೆಗಳಲ್ಲೂ ತ್ರಿವರ್ಣಧ್ವಜವನ್ನ ಹಾರಿಸಿ ಕೊಂಡಾಡುತ್ತಿದ್ದಾರೆ.

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಿನಿಮಾ ತಾರೆಯರು ಕೂಡ ಎಲ್ಲರಿಗೂ ಶುಭಕೋರಿದ್ದಾರೆ. ಅದರಲ್ಲೂ ಕೆಲವು ಸ್ಯಾಂಡಲ್ ವುಡ್ ಸ್ಟಾರ್ಸ್ ಗಳಿಗೆ ಆಗಸ್ಟ್ 15 ತುಂಬಾ ವಿಶೇಷ. ಯಾಕಂದ್ರೆ, ಇವರಿಗೆ ಸ್ವಾತಂತ್ರ್ಯ ದಿನಾಚರಣೆಯ ಜೊತೆ ತಮ್ಮ ಜೀವನದಲ್ಲಿ ಇನ್ನೊಂದು ಖುಷಿ ಹೊಂದಿದ್ದಾರೆ.

ಹೌದು, ಕನ್ನಡದ ಖ್ಯಾತ ನಟ-ನಟಿ ಹಾಗೂ ನಿರ್ದೇಶಕರು ಸೇರಿದಂತೆ 6 ಪ್ರಮುಖ ವ್ಯಕ್ತಿಗಳು ಇಂದು ಬರ್ತಡೇ ಆಚರಿಸಿಕೊಳ್ಳುತ್ತಿದ್ದಾರೆ. ಹಾಗಿದ್ರೆ, ಸ್ವಾತಂತ್ರ್ಯೋತ್ಸವದ ದಿನದಂದು ಹುಟ್ಟುಹಬ್ಬ ಆಚರಿಸುತ್ತಿರುವ ನಟ-ನಟಿ ಹಾಗೂ ನಿರ್ದೇಶಕರು ಯಾರು ಎಂದು ಮುಂದೆ ನೋಡಿ....

ರಾಘಣ್ಣ ಹುಟ್ಟುಹಬ್ಬ

ರಾಘಣ್ಣ ಹುಟ್ಟುಹಬ್ಬ

ಡಾ ರಾಜ್ ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರಿಗಿಂದು ಡಬಲ್ ಧಮಾಕ. ಒಂದೆಡೆ ಸ್ವಾತಂತ್ಯ ದಿನ. ಮತ್ತೊಂದೆಡೆ ಜನುಮದಿನ. ಆಗಸ್ಟ್ 15, 1965ರಲ್ಲಿ, ಚೆನ್ನೈನಲ್ಲಿ ಜನಿಸಿದ ನಟ ರಾಘಣ್ಣ ಅವರು 'ಚಿರಂಜೀವಿ ಸುಧಾಕರ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ತದನಂತರ 'ನಂಜುಡಿ ಕಲ್ಯಾಣ' ಚಿತ್ರದ ಮೂಲಕ ಖ್ಯಾತಿ ಗಳಿಸಿದರು. ಸುಮಾರು 14 ವರ್ಷ ತೆರೆಮೇಲೆ ಕಾಣಿಸಿಕೊಳ್ಳದ ಕಲಾವಿದ ಈಗ 'ಅಮ್ಮನ ಮನೆ' ಚಿತ್ರದ ಮೂಲಕ ಮತ್ತೆ ಕಂಬ್ಯಾಕ್ ಆಗ್ತಿದ್ದಾರೆ.

ಭಾರತಿ ವಿಷ್ಣುವರ್ಧನ್ ಸಂಭ್ರಮ

ಭಾರತಿ ವಿಷ್ಣುವರ್ಧನ್ ಸಂಭ್ರಮ

ಡಾ.ವಿಷ್ಣುವರ್ಧನ್ ಅವರ ಧರ್ಮಪತ್ನಿ, ನಟಿ ಭಾರತಿ ವಿಷ್ಣುವರ್ಧನ್ ಅವರಿಗೂ ಇಂದು ಹುಟ್ಟುಹಬ್ಬದ ಸಂಭ್ರಮ. ಆಗಸ್ಟ್ 15, 1948ರಲ್ಲಿ ಹುಟ್ಟಿದ ಇವರು ಕನ್ನಡ, ಹಿಂದಿ ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಅಭಿನಯಿಸಿರುವ ಪಂಚಭಾಷಾ ತಾರೆ. 'ಲವ್ ಇನ್ ಬೆಂಗಳೂರು' ಭಾರತಿ ಅವರು ಅಭಿನಯಿಸಿದ ಮೊದಲ ಸಿನಿಮಾ. ಸುಮಾರು 150ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಆಕ್ಷನ್ ಕಿಂಗ್ ಬರ್ತಡೇ

ಆಕ್ಷನ್ ಕಿಂಗ್ ಬರ್ತಡೇ

ದಕ್ಷಿಣ ಭಾರತದಲ್ಲಿ ಖ್ಯಾತಿಗಳಿಸಿಕೊಂಡಿರುವ ಕನ್ನಡದ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರಿಗೆ ಇಂದು ಸ್ವಾತಂತ್ರ್ಯೋತ್ಸವದ ಸಂಭ್ರಮದ ಜೊತೆಗೆ ಹುಟ್ಟುಹಬ್ಬದ ಸಂಭ್ರಮ. ಆಗಸ್ಟ್ 15, 1962ರಲ್ಲಿ, ಮಧುಗಿರಿಯಲ್ಲಿ ಜನಿಸಿದ ಅರ್ಜುನ್ ಸರ್ಜಾ ಕನ್ನಡ, ತಮಿಳು, ತೆಲುಗು ಸೇರಿದಂತೆ ಮಲಯಾಳಂ ಚಿತ್ರದಲ್ಲೂ ನಟಿಸಿದ್ದಾರೆ. 'ಸಿಂಹದ ಮರಿ ಸೈನ್ಯ' ಅರ್ಜುನ್ ಸರ್ಜಾ ಅವರ ಮೊದಲ ಸಿನಿಮಾ.

ಸುಹಾಸಿನಿ ಜನುಮದಿನ

ಸುಹಾಸಿನಿ ಜನುಮದಿನ

ನಟಿ ಸುಹಾಸಿನಿ ಮಣಿರತ್ನಂ ಅವರು ತಮಿಳುನಾಡಿನಲ್ಲಿ ಹುಟ್ಟಿದರೂ ಕೂಡ ಕನ್ನಡದವರೇ ಎನ್ನುವಷ್ಟು ಹತ್ತಿರದವರು. ತಮಿಳು ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದರು ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಬಂಧನ, ಮುತ್ತಿನ ಹಾರ, ಅಮೃತವರ್ಷಿಣಿ, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಚಿತ್ರಗಳಲ್ಲಿ ಮೋಡಿ ಮಾಡಿದ್ದಾರೆ.

ರಾಜಕುಮಾರ ನಿರ್ದೇಶಕ

ರಾಜಕುಮಾರ ನಿರ್ದೇಶಕ

ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹಾಗೂ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಮೂಲಕ ಕನ್ನಡದಲ್ಲಿ ಹೊಸ ಭರವಸೆ ಮೂಡಿಸಿರುವ ಸಂತೋಷ್ ಆನಂದ್ ರಾಮ್ ಅವರಿಗೂ ಇಂದು ಜನುಮದಿನ. ಈಗ ಪುನೀತ್ ಜೊತೆಯಲ್ಲೇ ಮೂರನೇ ಸಿನಿಮಾ ಮಾಡ್ತಿದ್ದಾರೆ.

ನಾಗತಿಹಳ್ಳಿ ಹುಟ್ಟುಹಬ್ಬವೂ ಇಂದೇ

ನಾಗತಿಹಳ್ಳಿ ಹುಟ್ಟುಹಬ್ಬವೂ ಇಂದೇ

ಕನ್ನಡ ಚಿತ್ರರಂಗದ ಪಾಲಿಗೆ ಮೇಷ್ಟ್ರು ಅಂತಾನೇ ಗುರುತಿಸಿಕೊಂಡಿರುವ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೂ ಇಂದು ಹುಟ್ಟುಹಬ್ಬದ ಸಂಭ್ರಮ. 'ಅಮೆರಿಕ ಅಮೆರಿಕ', 'ಅಮೃತಧಾರೆ', ಕೊಟ್ರೆಶಿ ಕನಸು, ಬಾ ನಲ್ಲೆ ಮಧುಚಂದ್ರಕೆ, ಸೂಪರ್ ಸ್ಟಾರ್, ಮಾತಡ್ ಮಾತಡ್ ಮಲ್ಲಿಗೆ ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಮಾಡಿದ್ದಾರೆ.

More from Filmibeat

English summary
Kannada actress Bharathi Vishnuvardhan, Actor Arjun Sarja, Raghavendra Rajkumar, Director Nagathihalli Chandrashekhar, Santhosh Ananddram and actress suhasini are celebrating their birthdays with Independence Day on august 15th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X