ಸ್ವಾತಂತ್ರ್ಯ ದಿನಾಚರಣೆಯಂದು ಈ ಆರು ಸ್ಟಾರ್ಸ್‌ಗೆ ಮತ್ತೊಂದು ಸಂಭ್ರಮ

ಆಗಸ್ಟ್ 15 ರಂದು ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಜೋರಾಗಿರುತ್ತದೆ. ದೇಶದ ಪ್ರಮುಖ ನಗರ, ರಾಜ್ಯದ ಪ್ರಮುಖ ಸ್ಥಳಗಳಲ್ಲಿ ತ್ರಿವರ್ಣಧ್ವಜವನ್ನ ಹಾರಿಸಿ ಹಬ್ಬ ಆಚರಿಸಲಾಗುತ್ತದೆ. ಆದರೆ ಆಗಸ್ಟ್ 15, ಕೆಲವು ಸ್ಯಾಂಡಲ್ ವುಡ್ ಸ್ಟಾರ್ಸ್ ಪಾಲಿಗೆ ಇನ್ನೊಂದು ಖುಷಿ ಕೊಡುತ್ತದೆ.

Recommended Video

Superstar : Upendra ಅವರಿಗೆ ಮೊದಲ ಬಾರಿಗೆ ಕಥೆ ಹೇಳಿದ ಅನುಭವ ಹೇಗಿತ್ತು | Filmibeat Kannada

ಕನ್ನಡದ ಖ್ಯಾತ ನಟ-ನಟಿ ಹಾಗೂ ನಿರ್ದೇಶಕರು ಸೇರಿದಂತೆ 6 ಪ್ರಮುಖ ವ್ಯಕ್ತಿಗಳು ಸ್ವಾತಂತ್ರ್ಯ ದಿನಾಚರಣೆಯ ದಿನದಂದೆ ತಮ್ಮ ಬರ್ತಡೇ ಆಚರಿಸಿಕೊಳ್ಳುತ್ತಿದ್ದಾರೆ. ಹಾಗಿದ್ರೆ, ಸ್ವಾತಂತ್ರ್ಯೋತ್ಸವದ ದಿನದಂದು ಹುಟ್ಟುಹಬ್ಬ ಆಚರಿಸುತ್ತಿರುವ ನಟ-ನಟಿ ಹಾಗೂ ನಿರ್ದೇಶಕರು ಯಾರು? ಮುಂದೆ ನೋಡಿ....

ಆಕ್ಷನ್ ಕಿಂಗ್ ಹುಟ್ಟುಹಬ್ಬ

ಆಕ್ಷನ್ ಕಿಂಗ್ ಹುಟ್ಟುಹಬ್ಬ

ಕನ್ನಡ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾಗೆ ಸ್ವಾತಂತ್ರ್ಯೋತ್ಸವದ ಸಂಭ್ರಮದ ಜೊತೆಗೆ ಹುಟ್ಟುಹಬ್ಬದ ಸಂಭ್ರಮವೂ ಹೌದು. ಆದರೆ, ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನೋವಿನಲ್ಲಿರುವ ಸರ್ಜಾ ಬರ್ತಡೇ ಸೆಲೆಬ್ರೆಟ್ ಮಾಡುವುದು ಅನುಮಾನ. 1962 ಆಗಸ್ಟ್ 15 ರಂದು ಮಧುಗಿರಿಯಲ್ಲಿ ಜನಿಸಿದ ಅರ್ಜುನ್ ಸರ್ಜಾ ಕನ್ನಡ, ತಮಿಳು, ತೆಲುಗು ಸೇರಿದಂತೆ ಮಲಯಾಳಂ ಚಿತ್ರದಲ್ಲೂ ನಟಿಸುತ್ತಿದ್ದಾರೆ.

ರಾಘಣ್ಣ ಬರ್ತಡೇಗೆ 'ಆಡಿಸಿದಾತ' ಟ್ರೈಲರ್

ರಾಘಣ್ಣ ಬರ್ತಡೇಗೆ 'ಆಡಿಸಿದಾತ' ಟ್ರೈಲರ್

ಡಾ ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್ 1965 ಆಗಸ್ಟ್ 15 ರಂದು ಚೆನ್ನೈನಲ್ಲಿ ಜನಿಸಿದ್ದರು. ರಾಘಣ್ಣನ ಹುಟ್ಟುಹಬ್ಬದ ವಿಶೇಷವಾಗಿ ಆಡಿಸಿದಾತ ಸಿನಿಮಾದ ಟ್ರೈಲರ್ ಬಿಡುಗಡೆಯಾಗುತ್ತಿದೆ. ಇದು ರಾಘವೇಂದ್ರ ರಾಜ್ ಕುಮಾರ್ ಅವರ 25ನೇ ಚಿತ್ರ ಎನ್ನುವುದು ವಿಶೇಷ.

ಕನ್ನಡ ಚಿತ್ರರಂಗದ ಮೇಷ್ಟ್ರು

ಕನ್ನಡ ಚಿತ್ರರಂಗದ ಮೇಷ್ಟ್ರು

ಕನ್ನಡ ಚಿತ್ರರಂಗದ ಪಾಲಿಗೆ ಮೇಷ್ಟ್ರು ಅಂತಾನೇ ಗುರುತಿಸಿಕೊಂಡಿರುವ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರದ್ದು ಆಗಸ್ಟ್ 15 ರಂದೇ ಹುಟ್ಟುಹಬ್ಬ. 'ಅಮೆರಿಕ ಅಮೆರಿಕ', 'ಅಮೃತಧಾರೆ', ಕೊಟ್ರೆಶಿ ಕನಸು, ಬಾ ನಲ್ಲೆ ಮಧುಚಂದ್ರಕೆ, ಸೂಪರ್ ಸ್ಟಾರ್, ಮಾತಡ್ ಮಾತಡ್ ಮಲ್ಲಿಗೆ ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳು ಮೇಷ್ಟ್ರು ಜೋಳಿಗೆಯಿಂದ ಬಂದಿದೆ.

ಹ್ಯಾಟ್ರಿಕ್ ನಿರ್ದೇಶಕ ಸಂತೋಷ್

ಹ್ಯಾಟ್ರಿಕ್ ನಿರ್ದೇಶಕ ಸಂತೋಷ್

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ರಾಜಕುಮಾರ' ಚಿತ್ರಗಳ ಮೂಲಕ ಸ್ಟಾರ್ ನಿರ್ದೇಶಕನ ಪಟ್ಟಕ್ಕೆ ಏರಿರುವ ಸಂತೋಷ್ ಆನಂದ್ ರಾಮ್ ಅವರೂ ಸಹ ಆಗಸ್ಟ್ 15 ರಂದು ಹುಟ್ಟಿದವರು. ಈ ವರ್ಷ ಯುವರತ್ನ ಸಿನಿಮಾ ಜೊತೆ ತಮ್ಮ ಬರ್ತಡೇ ಸೆಲೆಬ್ರೆಟ್ ಮಾಡಿಕೊಳ್ಳಲಿದ್ದಾರೆ.

ಭಾರತಿ ವಿಷ್ಣುವರ್ಧನ್

ಭಾರತಿ ವಿಷ್ಣುವರ್ಧನ್

ಡಾ.ವಿಷ್ಣುವರ್ಧನ್ ಅವರ ಧರ್ಮಪತ್ನಿ, ನಟಿ ಭಾರತಿ ವಿಷ್ಣುವರ್ಧನ್ ಅವರು ಸಹ ಸ್ವಾತಂತ್ರ್ಯ ದಿನಾಚರಣೆಯಂದೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಆಗಸ್ಟ್ 15, 1948ರಲ್ಲಿ ಹುಟ್ಟಿದ ಇವರು ಕನ್ನಡ, ಹಿಂದಿ ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಅಭಿನಯಿಸಿರುವ ಪಂಚಭಾಷಾ ತಾರೆ.

ಸುಹಾಸಿನಿ ಬರ್ತಡೇ

ಸುಹಾಸಿನಿ ಬರ್ತಡೇ

ನಟಿ ಸುಹಾಸಿನಿ ಮಣಿರತ್ನಂ ಅವರು ತಮಿಳುನಾಡಿನಲ್ಲಿ ಹುಟ್ಟಿದರೂ ಕೂಡ ಕನ್ನಡದವರೇ ಎನ್ನುವಷ್ಟು ಹತ್ತಿರದವರು. 15 ಆಗಸ್ಟ್ 1961 ರಲ್ಲಿ ಅಂದಿನ ಮದ್ರಾಸಿನ ಪರಮಕುಡಿಯಲ್ಲಿ ಜನಿಸಿದರು. ಸುಹಾಸಿನಿ ತಮಿಳು ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದರು ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಬಂಧನ, ಮುತ್ತಿನ ಹಾರ, ಅಮೃತವರ್ಷಿಣಿ, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಚಿತ್ರಗಳಲ್ಲಿ ಮೋಡಿ ಮಾಡಿದ್ದಾರೆ.

More from Filmibeat

English summary
Kannada Actor Raghavendra Rajkumar, Bharathi Vishnuvardhan, Arjun Sarja, Nagathihalli Chandrashekhar, Santhosh Ananddram, suhasini are celebrating their birthdays with Independence Day on august 15th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X