ಈ ವಾರ ಸ್ಯಾಂಡಲ್ ವುಡ್ ನಲ್ಲಿ 6 ಕನ್ನಡ ಸಿನಿಮಾಗಳು ಬಿಡುಗಡೆ
ಸ್ಯಾಂಡಲ್ ವುಡ್ ನಲ್ಲಿ ಈ ವಾರ ವಿಭಿನ್ನ, ವಿಶೇಷವಾದ 6 ಸಿನಿಮಾಗಳು ಚಿತ್ರಮಂದಿರಕ್ಕೆ ಕಾಲಿಡುತ್ತಿದೆ. ಲವ್, ಆಕ್ಷನ್, ಹಾರರ್, ಸಸ್ಪೆನ್ಸ್ ಥ್ರಿಲ್ಲರ್, ಹೀಗೆ ಎಲ್ಲ ರೀತಿಯ ಚಿತ್ರಗಳು ತೆರೆಗೆ ಬರುತ್ತಿದೆ.
ಈ ಚಿತ್ರಗಳ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಚಿತ್ರವೊಂದು ರಿ-ರಿಲೀಸ್ ಆಗ್ತಿದೆ.
ಹಾಗಿದ್ರೆ, ಈ ವಾರ ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿರುವ 6 ಚಿತ್ರಗಳು ಯಾವುದು? ಆ ಚಿತ್ರಗಳ ವಿಶೇಷತೆ ಏನು ಎಂಬುದು ಮುಂದೆ ನೀಡಲಾಗಿದೆ. ಮುಂದೆ ಓದಿ.....

ಚಿತ್ರ: 'ಟೈಗರ್ ಗಲ್ಲಿ'
ನಿರ್ದೇಶಕ: ರವಿ ಶ್ರೀವತ್ಸ
ಕಲಾವಿದರು: ಸತೀಶ್ ನೀನಸಾಂ, ಭಾವನ ರಾವ್, ರೋಷಣಿ ಪ್ರಕಾಶ್, ಯಮುನ ಶ್ರೀನಿಧಿ, ಶಿವಮಣಿ ಮತ್ತು ಇತರರು.
ತಾಂತ್ರಿಕ ತಂಡ: ಶ್ರೀಧರ್ ಸಂಭ್ರಮ್ ಅವರ ಸಂಗೀತ, ಮ್ಯಾಥಿವ್ ಛಾಯಾಗ್ರಹಣ
ಚಿತ್ರದ ವಿಶೇಷ: ಇದೊಂದು ನೈಜ ಕಥೆ. ನಾಯಕ ಸತೀಶ್ ಅವರ ವಿಭಿನ್ನ ಸಿನಿಮಾ. ಕನ್ನಡ ಖ್ಯಾತ ನಿರ್ದೇಶಕರು ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದಾರುವುದು ವಿಶೇಷ.

ಚಿತ್ರ: ಸರ್ವಸ್ವ
ನಿರ್ದೇಶಕ: ಶ್ರೇಯಸ್ ಕಬಾಡಿ
ಕಲಾವಿದರು: ತಿಲಕ್ (ಉಗ್ರಂ), ಚೇತನ್, ರೇಣುಶಾ, ಸಾತ್ವಿಕಾ
ತಾಂತ್ರಿಕ ತಂಡ: ಸಂಗೀತ ನಿರ್ದೇಶಕ ವಿ. ಶ್ರೀಧರ್ ಸಂಭ್ರಮ್, ಭೂಪಿಂದರ್ ಪಾಲ್‌ಸಿಂಗ್ ರೈನಾ ಛಾಯಾಗ್ರಹಣ,
ಚಿತ್ರದ ವಿಶೇಷ: 'ಸರ್ವಸ್ವ' ಒಂದು ಕೌಟುಂಬಿಕ ಸಿನಿಮಾ. ಲವ್, ಆಕ್ಷನ್, ಥ್ರಿಲ್ಲರ್ ಎಲ್ಲ ರೀತಿಯ ಅಂಶಗಳನ್ನ ಒಳಗೊಂಡಿದೆ.

ಚಿತ್ರ: ಮುತ್ತಣ್ಣ
ನಿರ್ದೇಶಕ: ಎಂ.ಎಸ್ ರಾಜಶೇಖರ್
ಕಲಾವಿದರು: ಶಿವರಾಜ್ ಕುಮಾರ್, ಶಶಿಕುಮಾರ್, ಸುಪ್ರಿಯಾ, ಸ್ನೇಹ ಮತ್ತು ಇತರರು
ತಾಂತ್ರಿಕ ತಂಡ: ಹಂಸಲೇಖ ಸಂಗೀತ, ಮಧುಸೂದನ್ ಛಾಯಾಗ್ರಹಣ
ಚಿತ್ರದ ವಿಶೇಷ: 1994ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ಸಿನಿಮಾ. ಡಿಜಿಟಲ್ ಸೌಂಡ್ ಮತ್ತು ವಿಶ್ಯೂಲ್ ಎಫೆಕ್ಟ್ ಬಳಸಿ ಮತ್ತೆ ರಿ-ರಿಲೀಸ್ ಆಗುತ್ತಿದೆ.

ಚಿತ್ರ: ಮೋಜೋ
ನಿರ್ದೇಶಕ: ಶ್ರೀಷಾ ಬೆಳಕವಾಡಿ
ಕಲಾವಿದರು: ಮನು (ನಾಯಕ), ಅನುಷಾ (ನಾಯಕಿ), ಸಂದೀಪ್ ಶ್ರೀಧರ್, ನಂದನ್ ಜಾಂಟಿ, ಸ್ಮಿತಾ ಕುಲಕರ್ಣಿ, ಆನ್ಯಾ ಶೆಟ್ಟಿ
ತಾಂತ್ರಿಕ ತಂಡ: ಎಸ್.ಡಿ. ಅರವಿಂದ್ ಸಂಗೀತ, ಅಜನೀಶ್ ಲೋಕನಾಥ್ ಚಿತ್ರಕ್ಕೆ ಹಿನ್ನೆಲೆ ಸಂಗೀತ, ಅನಂತ ಅರಸ್ ಛಾಯಾಗ್ರಾಹಕ
ಚಿತ್ರದ ವಿಶೇಷ: ಇದೊಂದು ಕ್ರೈಂ ಕಮ್ ಹಾರರ್ ಥ್ರಿಲ್ಲರ್ ಸಿನಿಮಾ. ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದೆ.

ಚಿತ್ರ: ಬ್ರ್ಯಾಂಡ್
ನಿರ್ದೇಶಕ: ಪ್ರಶಾಂತ ಕೆ.ಶೆಟ್ಟಿ ('ಮನಸಿನ ಪುಟದಲಿ' ಮೊದಲ ಚಿತ್ರ)
ಕಲಾವಿದರು: ಪ್ರಶಾಂತ ಕೆ.ಶೆಟ್ಟಿ (ನಾಯಕ), ರಚಿತ ಹಾಗೂ ಸೌಮ್ಯ ನಾಯಕಿ, ಸಂಚಾರಿ ವಿಜಯ್, ಶೋಭ್ ರಾಜ್ ಮತ್ತು ಇತರರು
ತಾಂತ್ರಿಕ ತಂಡ: ವಿನು ಮನಸು ಅವರ ಸಂಗೀತ, ದೀಪು ಹೊನ್ನಳ್ಳಿ, ರಾಜಕುಮಾರ್ ಛಾಯಾಗ್ರಹಣ
ಚಿತ್ರದ ವಿಶೇಷ: ಕಾರ್ ಡೀಲರ್ ಒಬ್ಬನ ಆಸೆ, ಆಕಾಂಕ್ಷೆ, ಜೀವನದ ಕಥೆ ಈ ಚಿತ್ರದಲ್ಲಿದೆ. ಬ್ರಾಂಡ್ ಹಿಂದೆ ಬೀಳಬೇಡಿ ಎಂಬ ಸಂದೇಶ ಈ ಚಿತ್ರದಲ್ಲಿದೆ.

ಚಿತ್ರ: ಡಮ್ಕಿ ಡಮಾರ್
ನಿರ್ದೇಶಕ: ಪ್ರದೀಪ್ ವರ್ಮಾ
ಕಲಾವಿದರು: ಪ್ರದೀಪ್ ವರ್ಮಾ (ನಾಯಕ), ಚೈತ್ರಶೆಟ್ಟಿ, ಜಗದೀಶ್, ವೆಂಕಿ, ಅನುಷ್ಕಶೆಟ್ಟಿ, ರಾಜೇಶ್, ಶಿವಾನಂದ್ ಮತ್ತು ಇತರರು
ತಾಂತ್ರಿಕ ತಂಡ: ಪ್ರದೀಪ್ ವರ್ಮಾ ಸಂಗೀತ (ನಾಯಕ, ನಿರ್ದೇಶಕನೂ ಇವರೇ), ವೇಲ್ಸ್ ಛಯಾಗ್ರಹಣ,


Click it and Unblock the Notifications











