For Quick Alerts
  ALLOW NOTIFICATIONS  
  For Daily Alerts

  ನಾಳೆ (ಶುಕ್ರವಾರ) ಆರು ಕನ್ನಡ ಚಿತ್ರಗಳ ಬಿಡುಗಡೆ

  |

  ಶುಕ್ರವಾರ ಅಂದ್ರೆ ಸಿನಿ ಹಬ್ಬ. ಈ ವಾರ ಆರು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿದೆ. ವಿಶೇಷ ಅಂದರೆ, ಈ ಎಲ್ಲವೂ ಹೊಸ ನಿರ್ದೇಶಕರ ಸಿನಿಮಾಗಳಾಗಿವೆ.

  'ಉಂಡುಬಾ', 'ನನ್ನ ಪ್ರಕಾರ', 'ರಾಂಧವ', 'ಫ್ಯಾನ್', 'ಕಲ್ಪನಾ ವಿಲಾಸಿ', 'ವಿಜಯಯಾತ್ರ' ಈ ವಾರ ಆಗಸ್ಟ್‌ 23 ರಂದು ರಿಲೀಸ್ ಆಗುತ್ತಿರುವ ಸಿನಿಮಾಗಳಾಗಿವೆ.

  'ಗೀತಾ' ಸಿನಿಮಾಗೆ ಪುನೀತ್ ರಾಜ್ ಕುಮಾರ್ ಗಾಯಕ 'ಗೀತಾ' ಸಿನಿಮಾಗೆ ಪುನೀತ್ ರಾಜ್ ಕುಮಾರ್ ಗಾಯಕ

  'ಉಂಡುಬಾ' ಪಕ್ಕಾ ಆಕ್ಷನ್ ಕಮ್ ಲವ್ ಸ್ಟೋರಿ ಹೊಂದಿದ್ದು, ಕಡಲ ತೀರದ ಕಥೆ ಹೊಂದಿದೆ. ಈಗಾಗಲೇ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ನಟ ಪವನ್ ಉದ್ದದ ಡೈಲಾಗ್ ಹೇಳಿ ದಾಖಲೆ ಮಾಡಿದ್ದಾರೆ. ನಾಯಕಿಯಾಗಿ ಚಿರಶ್ರೀ ಕಾಣಿಸಿಕೊಂಡಿದ್ದಾರೆ. ಶಿವರಾಜ್ ಚಿತ್ರದ ನಿರ್ದೇಶನ ಮಾಡಿದ್ದು, ಹೇಮಂತ್ ರಾವ್ ಹಾಗೂ ವೆಂಕಟ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ.

  'ನನ್ನ ಪ್ರಕಾರ' ಪ್ರಿಯಾ ಮಣಿ, ಕಿಶೋರ್ ಹಾಗೂ ಮಯೂರಿ ನಟನೆಯ ಸಿನಿಮಾವಾಗಿದೆ. ವಿನಯ್ ಬಾಲಾಜಿ ಚಿತ್ರದ ನಿರ್ದೇಶನ ಮಾಡಿದ್ದಾರೆ.

  'ರಾಂಧವ' ಭುವನ್ ಪೊನ್ನಣ್ಣ ನಟನೆಯ ಸಿನಿಮಾವಾಗಿದೆ. ಸುನೀಲ್ ಆಚಾರ್ಯ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದೆ.

  'ಬಡವ ರಾಸ್ಕಲ್' ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಸಾಥ್ 'ಬಡವ ರಾಸ್ಕಲ್' ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಸಾಥ್

  ಈ ಸಿನಿಮಾಗಳ ಜೊತೆಗೆ 'ಫ್ಯಾನ್', 'ಕಲ್ಪನಾ ವಿಲಾಸಿ', ಹಾಗೂ 'ವಿಜಯಯಾತ್ರ' ಚಿತ್ರಗಳು ಸಹ ಇದೇ ಶುಕ್ರವಾರ ಚಿತ್ರಮಂದಿರಕ್ಕೆ ಆಗಮಿಸುತ್ತಿದೆ.

  English summary
  6 kannada movies will be releasing on August 23rd. Randava, Udumba, Fan, Nanna Prakara, Vijaya Yathra movies will release on tommorow.
  Thursday, August 22, 2019, 9:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X