'ಆಯುಷ್ಮಾನ್ ಭವ'ದಿಂದ ಆತಂಕ: ಉಳಿದ 5 ಚಿತ್ರಗಳ ಕಥೆ ಏನು?

ಒಂದು ದೊಡ್ಡ ಸಿನಿಮಾ ಬರ್ತಿದೆ ಅಂದರೆ, ಆ ವಾರ ಸಣ್ಣ ಸಿನಿಮಾಗಳು ಬಿಡುಗಡೆ ಆಗುವುದಿಲ್ಲ. ಅನೇಕ ಬಾರಿ ಹೊಸಬರ ಸಿನಿಮಾಗಳ ಬಿಡುಗಡೆ ದಿನಾಂಕ, ಇತರ ದೊಡ್ಡ ಸಿನಿಮಾಗಳಿಗೆ ಮೇಲೆ ನಿರ್ಧಾರ ಆಗಿರುತ್ತದೆ.

ನವೆಂಬರ್ 1 ರಂದು 'ಆಯುಷ್ಮಾನ್ ಭವ' ಸಿನಿಮಾ ಬಿಡುಗಡೆ ಆಗಬೇಕಾಗಿತ್ತು. ಹೀಗಾಗಿ ಒಂದು ವಾರದ ನಂತರ ಕೆಲವು ಸಿನಿಮಾಗಳು ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದವು. ಆದರೆ, 'ಆಯುಷ್ಮಾನ್ ಭವ' ಬಿಡುಗಡೆ ದಿನಾಂಕ ಬದಲಾಯಿತು. ಈಗ ಸಿನಿಮಾ ನವೆಂಬರ್ 15 ರಂದು ರಿಲೀಸ್ ಆಗುವುದು ಪಕ್ಕಾ ಆಗಿದೆ.

ಆದರೆ, ನವೆಂಬರ್ 15 ಐದು ಬೇರೆ ಸಿನಿಮಾಗಳು ದಿನಾಂಕ ನಿಗದಿ ಮಾಡಿಕೊಂಡಿತ್ತು. 'ಕಾಳಿದಾಸ ಕನ್ನಡ ಮೇಷ್ಟ್ರು', 'ರಿಲ್ಯಾಕ್ಸ್ ಸತ್ಯ', 'ಕನ್ನಡ್ ಗೊತ್ತಿಲ್ಲ', 'ನಮ್ ಗಣಿ ಬಿ ಕಾಮ್ ಪಾಸ್', 'ಮನೆ ಮಾರಾಟಕ್ಕಿದೆ' ಸಿನಿಮಾಗಳು ನವೆಂಬರ್ 15 ರಂದು ಚಿತ್ರಮಂದಿರಕ್ಕೆ ಬರಲು ಸಿದ್ಧವಾಗಿದ್ದವು.

6 Kannada Movies Will Be Releasing On November 15th

'ನಮ್ ಗಣಿ ಬಿ ಕಾಮ್ ಪಾಸ್' ಹಾಗೂ 'ರಿಲ್ಯಾಕ್ಸ್ ಸತ್ಯ' ಹೊಸಬರ ಸಿನಿಮಾ. 'ಕನ್ನಡ್ ಗೊತ್ತಿಲ್ಲ' ಹರಿಪ್ರಿಯಾ ನಟನೆಯ ಸಿನಿಮಾ. 'ಮನೆ ಮಾರಾಟಕ್ಕಿದೆ' ಚಿತ್ರದಲ್ಲಿ ಸ್ಟಾರ್ ನಟರು ಇಲ್ಲ. ಹೀಗಾಗಿ ಈ ಸಿನಿಮಾಗಳಿಗೆ 'ಆಯುಷ್ಮಾನ್ ಭವ' ಬಿಡುಗಡೆ ಪರಿಣಾಮ ಬೀರುತ್ತದೆ.

ಸಿನಿಮಾಗೆ ಆದ ಸಮಸ್ಯೆಯಿಂದ 'ಆಯುಷ್ಮಾನ್ ಭವ' ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಆದರೆ, ಆ ಸಿನಿಮಾದ ರಿಲೀಸ್ ಡೇಟ್ ಈಗ ಉಳಿದ ಐದು ಸಿನಿಮಾಗಳಿಗೆ ತೊಂದರೆ ಆಗಿದೆ. ನವೆಂಬರ್ 15 ರಂದು ಆರು ಸಿನಿಮಾಗಳು ಪೈಪೋಟಿ ನಡೆಸಬೇಕಾಗಿದೆ.

More from Filmibeat

English summary
6 kannada movies will be releasing on November 15th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X