ನಾಳೆ (ಶುಕ್ರವಾರ) ಕನ್ನಡದ 6 ಸಿನಿಮಾಗಳು ಬಿಡುಗಡೆ
ಈ ಶುಕ್ರವಾರ ಕನ್ನಡದಲ್ಲಿ ಆರು ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಆ ದೃಶ್ಯ, ಗಿರ್ಮಿಟ್, ಕಪಟ ನಾಟಕ ಪಾತ್ರಧಾರಿ, ಪಾಪಿ ಚಿರಾಯು, ಈಶ ಮಹೇಶ, ರಣಭೂಮಿ ನಾಳೆ ರಿಲೀಸ್ ಆಗುತ್ತಿರುವ ಸಿನಿಮಾಗಳಾಗಿವೆ.
'ಆ ದೃಶ್ಯ' ರವಿಚಂದ್ರನ್ ನಟನೆಯ ಸಿನಿಮಾ. ಶಿವ ಗಣೇಶ್ ಚಿತ್ರದ ನಿರ್ದೇಶಕ, ಕೆ ಮಂಜು ಈ ಸಿನಿಮಾಗೆ ಹಣ ಹಾಕಿದ್ದಾರೆ. ಇದೊಂದು ಮರ್ಡರ್ ಮಿಸ್ಟರಿ ಸಿನಿಮಾವಾಗಿದೆ. ರವಿಚಂದ್ರನ್ ಲುಕ್ ಬದಲಾಗಿದೆ. ಎರಡು ವಿಭಿನ್ನ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅಚ್ಚುತ್ ಕುಮಾರ್, ರಮೇಶ್ ಭಟ್, ಯಶ್ ಶೆಟ್ಟಿ, ಅರ್ಜುನ್ ಗೌಡ, ಚೈತ್ರ ಆಚಾರ್ ಸಿನಿಮಾದ ಕಲಾವಿದರಾಗಿದ್ದಾರೆ.
'ಗಿರ್ಮಿಟ್' ಪಕ್ಕಾ ಕಮರ್ಷಿಯಲ್ ಮಕ್ಕಳ ಸಿನಿಮಾ. 'ಕೆಜಿಎಫ್' ಸಂಗೀತ ನಿರ್ದೇಶಕ ಪ್ರಶಾಂತ್ ನೀಲ್ ಅವರ ಹೊಸ ಪ್ರಯತ್ನ. ಸಿನಿಮಾದ ಟ್ರೇಲರ್ ತುಂಬ ಚೆನ್ನಾಗಿದೆ. ನಟ ಯಶ್, ರಾಧಿಕಾ ಪಂಡಿತ್ ಸಿನಿಮಾಗೆ ಡಬ್ ಮಾಡಿದ್ದಾರೆ. ಮಕ್ಕಳ ಪಾತ್ರಗಳಿಗೆ ಕನ್ನಡದ ಕಲಾವಿದರು ಧ್ವನಿ ನೀಡಿದ್ದಾರೆ. ಮಕ್ಕಳ ಸಿನಿಮಾ ಆದರು, ಅದನ್ನು ಚಿತ್ರೀಕರಣ ಮಾಡಿರುವ ರೀತಿ ತುಂಬ ಚೆನ್ನಾಗಿದೆ.

'ಕಪಟ ನಾಟಕ ಪಾತ್ರಧಾರಿ' ಆಟೋ ಡ್ರೈವರ್ ಕಥೆ. ಹುಲಿರಾಯ ಸಿನಿಮಾದ ನಂತರ ಬಾಲು ನಾಗೇಂದ್ರ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತ ಭಟ್ ನಾಯಕಿಯಾಗಿದ್ದಾರೆ. ಸಿನಿಮಾದ ಟ್ರೇಲರ್ ಹಾಡುಗಳು ಚೆನ್ನಾಗಿವೆ. ಕ್ರಿಶ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.
ಈ ಮೂರು ಸಿನಿಮಾಗಳ ಜೊತೆಗೆ 'ರಣಭೂಮಿ', 'ಪಾಪಿ ಚಿರಾಯು' ಹಾಗೂ 'ಈಶ ಮಹೇಶ' ಸಿನಿಮಾಗಳು ನಾಳೆಯೇ ಬಿಡುಗಡೆ ಆಗುತ್ತಿವೆ.


Click it and Unblock the Notifications











