ಈ ವಾರ ಬಿಡುಗಡೆಯಾಗುತ್ತಿವೆ ಆರು ಕನ್ನಡ ಚಿತ್ರಗಳು

ಶುಕ್ರವಾರಕ್ಕೆ ಇನ್ನೂ ನಾಲ್ಕು ದಿನ ಬಾಕಿ ಇದೆ. ಈಗಲೇ ಈ ವಾರ ಯಾವ ಸಿನಿಮಾಗಳನ್ನು ನೋಡುವುದು ಎಂದು ಜನರು ಪ್ಲಾನ್ ಮಾಡಿರುತ್ತಾರೋ ಇಲ್ವೋ ಆದರೆ ಸಿನಿಮಾಗಳು ಮಾತ್ರ ಚಿತ್ರಮಂದಿರಕ್ಕೆ ಬರಲು ಸಿದ್ಧವಾಗಿವೆ

ಈ ವಾರ ಆರು ಹೊಸ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆರೂ ಸಿನಿಮಾಗಳು ಬೇರೆ ಬೇರೆ ಕಥಾ ವಸ್ತುವಿನ ಜೊತೆಗೆ ಪ್ರೇಕ್ಷಕರ ಮುಂದೆ ಬರುತ್ತಿವೆ.

ರಘು ರಾಮ್ ನಿರ್ದೇಶನ ಹಾಗೂ ಗುರುನಂದನ್ ನಟನೆಯ 'ಮಿಸ್ಸಿಂಗ್ ಬಾಯ್', 'ಉದ್ಘರ್ಷ', 'ಬದ್ರಿ ವರ್ಸಸ್ ಮಧುಮತಿ, 'ಚಾಣಾಕ್ಷ', 'ಅಡಚಣೆಗಾಗಿ ಕ್ಷಮಿಸಿ' ಹಾಗೂ 'ಪ್ರತ್ಯಂಗಿರ ಅಥರ್ವಣ' ಈ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳಾಗಿವೆ.

ಈ ಶುಭ ಶುಕ್ರವಾರ ಚಿತ್ರಮಂದಿರಕ್ಕೆ ಬರುತ್ತಿರುವ ಆರು ಸಿನಿಮಾ ಒಂದಷ್ಟು ವಿವರ ಮುಂದಿದೆ ಓದಿ...

'ಮಿಸ್ಸಿಂಗ್ ಬಾಯ್' ಚಿತ್ರಮಂದಿರದಲ್ಲಿ ಪ್ರತ್ಯಕ್ಷ

'ಮಿಸ್ಸಿಂಗ್ ಬಾಯ್' ಚಿತ್ರಮಂದಿರದಲ್ಲಿ ಪ್ರತ್ಯಕ್ಷ

ನಿರ್ದೇಶಕ ರಘುರಾಮ್ 'ಮಿಸ್ಸಿಂಗ್ ಬಾಯ್' ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಕರ್ನಾಟಕದಲ್ಲಿ ನಡೆದ ನೈಜ ಫಟನೆಯೊಂದನ್ನು ಆಧಾರಾವಾಗಿ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಗುರುನಂದನ್ ಚಿತ್ರದ ನಾಯಕನಾಗಿದ್ದಾರೆ. 1973-74 ರಲ್ಲಿ ನಡೆದ ರೋಚಕ ಕಥೆಯು ಪರದೆ ಮೇಲೆ ಪ್ರಜ್ವಲಿಸಲು ಕೆಲವೇ ದಿನಗಳ ಬಾಕಿ ಇದೆ.

'ಉದ್ಘರ್ಷ' ಮೂಲಕ ಬಂದ ದೇಸಾಯಿ

'ಉದ್ಘರ್ಷ' ಮೂಲಕ ಬಂದ ದೇಸಾಯಿ

ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾಗಳ ಮಾಸ್ಟರ್ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಕಮ್ ಬ್ಯಾಕ್ ಮಾಡಿದ್ದಾರೆ. 'ಉದ್ಘರ್ಷ' ಸಿನಿಮಾ ಮೂಲಕ ಪ್ರೇಕ್ಷಕರಿಗೆ ಥ್ರಿಲ್ ನೀಡಲು ಬರುತ್ತಿದ್ದಾರೆ. ಚಿತ್ರದಲ್ಲಿ ನಟ ಅನೂಪ್ ಠಾಕೂರ್ ಸಿಂಗ್, ಶ್ರದ್ಧಾ ದಾಸ್, ತಾನ್ಯ ಹೋಪ್, ಕಿಶೋರ್, ಸಾಯಿ ಧನ್ಸಿಕಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್ ಪ್ರೇಕ್ಷಕರ ಮನ ಗೆದ್ದಿದೆ.

'ಚಾಣಾಕ್ಷ'ನ ಅದೃಷ್ಟ ಪರೀಕ್ಷೆ

'ಚಾಣಾಕ್ಷ'ನ ಅದೃಷ್ಟ ಪರೀಕ್ಷೆ

ನಟ ಧರ್ಮ ಕೀರ್ತಿರಾಜ್ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರ 'ಚಾಣಾಕ್ಷ' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಅರ್ಚನಾ ಹಾಗೂ ಸುರ್ಷಿತಾ ಸಿನಿಮಾದ ನಾಯಕಿಯರಾಗಿದ್ದಾರೆ. ಲವ್ ಹಾಗೂ ಆಕ್ಷನ್ ಹೊಂದಿರುವ ಕಮರ್ಷಿಯಲ್ ಸಿನಿಮಾ ಇದಾಗಿದೆ. ಮಹೇಶ್ ಚಿನ್ಮಯ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

ಉಳಿದ ಸಿನಿಮಾಗಳು

ಉಳಿದ ಸಿನಿಮಾಗಳು

'ಅಡಚಣೆಗಾಗಿ ಕ್ಷಮಿಸಿ', 'ಬದ್ರಿ ವರ್ಸಸ್ ಮಧುಮತಿ' ಹಾಗೂ 'ಪ್ರತ್ಯಂಗಿರ ಅಥರ್ವಣ' ಈ ಮೂರು ಸಿನಿಮಾಗಳು ಸಹ ಇದೇ ವಾರವೇ ಬಿಡುಗಡೆಯಾಗುತ್ತಿದೆ. 'ಅಡಚಣೆಗಾಗಿ ಕ್ಷಮಿಸಿ' ಸೈಕಾಲಜಿಕಲ್​​​, ಹಾರರ್​​​, ಸಸ್ಪೆನ್ಸ್ ಚಿತ್ರವಾಗಿದೆ. 'ಬದ್ರಿ ವರ್ಸಸ್ ಮಧುಮತಿ' ಆಕಾಂಕ್ಷ ನಟನೆಯ ಸಿನಿಮಾವಾಗಿದೆ.

More from Filmibeat

English summary
Including 'Udgharsha', 'Missing Boy' 6 kannada movies will be releasing on this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X