ಈ ಶುಕ್ರವಾರ 6 ಸಿನಿಮಾಗಳು 'ಫೇಸ್ ಟು ಫೇಸ್'

ಈ ವಾರ ಆರು ಸಿನಿಮಾಗಳು ಚಿತ್ರಮಂದಿರದ ಬಾಗಿಲು ತಟ್ಟುತ್ತಿವೆ. ಕಳೆದ ವಾರ 5 ಸಿನಿಮಾಗಳು ತೆರೆಗೆ ಬಂದಿತ್ತು. ಸಿನಿಮಾಗಳ ರಿಲೀಸ್ ಸಂಖ್ಯೆ ವಾರದಿಂದ ವಾರಕ್ಕೆ ಹೆಚ್ಚಾಗುತ್ತಲೇ ಇದೆ. ದೊಡ್ಡ ನಟರ ಸಿನಿಮಾಗಳು ರಿಲೀಸ್ ಆದ ನಂತರ ಹೊಸಬರ ಹೊಸ ಸಿನಿಮಾಗಳು ರಿಲೀಸ್ ಗೆ ತುದಿಗಾಲಿನಲ್ಲಿ ನಿಂತಿವೆ. ನಾ ಮುಂದೆ.. ತಾ ಮುಂದೆ.. ಅನ್ನುವ ಹಾಗೆ ಪೈಪೋಟಿಯಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿವೆ.

ಈ ಶುಕ್ರವಾರದ ಸಿನಿಸಂತೆಯಲ್ಲಿ 6 ಸಿನಿಮಾಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿವೆ. ಈ ವಾರ ಯಾವುದೇ ದೊಡ್ಡ ನಟರ ಸಿನಿಮಾಗಳಾಗಲಿ ಅಥವಾ ಬಿಗ್ ಬಜೆಟ್ ನ ಸಿನಿಮಾಗಳಾಗಲಿ ತೆರೆಗೆ ಬರುತ್ತಿಲ್ಲ. 'ಗಿರಿಗಿಟ್ಲೆ', 'ಫೇಸ್ ಟು ಫೇಸ್', 'ರಾಜಣ್ಣನ ಮಗ', 'ನಾನು ನನ್ನ ಹುಡುಗಿ ಕರ್ಚಿಗೊಂದು ಮಾಫಿಯಾ', 'ಡಿ ಕೆ ಬೋಸ್', 'ಅರಬ್ಬಿ ಕಡಲ ತೀರದಲ್ಲಿ' ಹೊಸಬರ ಆರು ಸಿನಿಮಾಗಳಾಗಿವೆ.

ಅಂದಹಾಗೆ, ಈ ಶುಕ್ರವಾರ ಬಿಡುಗಡೆಯಾಗುತ್ತಿರುವ ಆರು ಸಿನಿಮಾಗಳ ವಿವರ ಇಲ್ಲಿದೆ. ಮುಂದೆ ಓದಿ...

ಚಿತ್ರಮಂದಿರಕ್ಕೆ ಬರುತ್ತಿದೆ 'ಗಿರಿಗಿಟ್ಲೆ'

ಚಿತ್ರಮಂದಿರಕ್ಕೆ ಬರುತ್ತಿದೆ 'ಗಿರಿಗಿಟ್ಲೆ'

'ಗಿರಿಗಿಟ್ಲೆ' ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆದಿರುವ ಸಿನಿಮಾ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಪ್ರೇಕ್ಷಕರ ಮನದಲ್ಲಿ 'ಗಿರಿಗಿಟ್ಲೆ' ಹೊಡೆಯುತ್ತಿದೆ. ಇನ್ನು ವಿಶೇಷ ಅಂದರೆ 'ಗಿರಿಗಿಟ್ಲೆ' ಉಪೇಂದ್ರ ಅಪ್ಪಟ ಅಭಿಮಾನಿ ರವಿಕಿರಣ್ ನಿರ್ದೇಶನದ ಸಿನಿಮಾ. ಅಂದು ಕ್ಯೂನಲ್ಲಿ ನಿಂತು ಉಪೇಂದ್ರ ಸಿನಿಮಾ ನೋಡುತ್ತಿದ್ದ ರವಿಕಿರಣ್ ಇಂದು ತಾವೇ ಒಂದು ಸಿನಿಮಾ ನಿರ್ದೇಶನ ಮಾಡಿದ ಸಂತಸದಲ್ಲಿದ್ದಾರೆ. ಇನ್ನು, 'ಗಿರಿಗಿಟ್ಲೆ' ಪಾತಕಲೋಕಕ್ಕೆ ಇಳಿದ ಮೂವರ ಯುವಕರ ಕತೆ. ಪಕ್ಕಾ ಲೋಕಲ್ ಆಕ್ಷನ್ ಎಲಿಮೆಂಟ್ಸ್ ಇರುವ 'ಗಿರಿಗಿಟ್ಲೆ'ಯಲ್ಲಿ ಪ್ರದೀಪ್, ಗುರು ಮತ್ತು ಚಂದ್ರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಕಿರುತೆರೆಯ ನಟಿ ವೈಷ್ಣವಿ ಬಣ್ಣ ಹಚ್ಚಿದ್ದಾರೆ.

ಈ ವಾರ ಚಿತ್ರಮಂದಿರದಲ್ಲಿ 'ಫೇಸ್ ಟು ಫೇಸ್'

ಈ ವಾರ ಚಿತ್ರಮಂದಿರದಲ್ಲಿ 'ಫೇಸ್ ಟು ಫೇಸ್'

'ಫೇಸ್ ಟು ಫೇಸ್' ಈ ವಾರ ತೆರೆಗೆ ಬರುತ್ತಿರುವ ಸಿನಿಮಾಗಳಲ್ಲಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಸಹಾಯಕ ನಿರ್ದೇಶನಾಗಿ ಕೆಲಸ ಮಾಡುತ್ತಿದ್ದ ಸಂದೀಪ್ 'ಫೇಸ್ ಟು ಫೇಸ್' ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಸಬ್ಜೆಕ್ಟ್ ಇರುವ ಫೇಸ್ ಟು ಫೇಸ್ ಚಿತ್ರದಲ್ಲಿ ನಾಯಕನಾಗಿ 'ದೃಶ್ಯ' ಚಿತ್ರದ ಖ್ಯಾತಿಯ ರೋಹಿತ್ ಭಾನುಪ್ರಾಕಾಶ್ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಇಬ್ಬರು ನಾಯಕಿಯರು ಪೂರ್ವಿ ಜೋಷಿ ಮತ್ತು ದಿವ್ಯ ಉರುಡುಗ.

'ರಾಜಣ್ಣನ ಮಗ'ನಾಗಿ ನಟ ಹರೀಶ್ ಎಂಟ್ರಿ

'ರಾಜಣ್ಣನ ಮಗ'ನಾಗಿ ನಟ ಹರೀಶ್ ಎಂಟ್ರಿ

ವಿವಾದದಿಂದ ಸದ್ದು ಮಾಡಿದ್ದ 'ರಾಜಣ್ಣನ ಮಗ' ಈ ವಾರ ತೆರೆಗೆ ಬರುತ್ತಿದೆ. ಅಂದ್ಹಾಗೆ ಈ ಸಿನಿಮಾಗೆ ಕೋಲಾರ ಸೀನು ಆಕ್ಷನ್ ಕಟ್ ಹೇಳಿದ್ದಾರೆ. 'ರಾಜಣ್ಣನ ಮಗ' ಹೆಸರೇ ಹೇಳುವ ಹಾಗೆ ಇದು ರಾಜ್ ಕುಮಾರ್ ಅವರಿಗೆ ಸಂಬಂಧಿಸಿದ ಸಿನಿಮಾ ಅಂತ ಅನಿಸುತ್ತೆ. ಆದರೆ, ಈ ಸಿನಿಮಾಗೂ ರಾಜ್ ಕುಟುಂಬಕ್ಕೆ ಯಾವುದೇ ಸಂಬಂಧ ಇಲ್ಲ. ಇಲ್ಲಿ ರಾಜಣ್ಣನಾಗಿ ಹಿರಿಯ ನಟ ಚರಣ್ ರಾಜ್ ಕಾಣಿಸಿಕೊಂಡಿದ್ದಾರೆ. ಮಗನ ಪಾತ್ರದಲ್ಲಿ ಯುವ ಪ್ರತಿಭೆ ಹರೀಶ್ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ನಟ ಚರಣ್ ರಾಜ್ ಬಿಟ್ಟರೆ ಉಳಿದವರೆಲ್ಲ ಹೊಸ ಪರಿಚಯ. ಈ ಬಾರಿಯ ಸಿನಿಮಾ ಲಿಸ್ಟ್ ಗಳಲ್ಲಿ ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ 'ರಾಜಣ್ಣನ ಮಗ'.

'ನಾನು ನಮ್ಮುಡ್ಗಿ ಖರ್ಚ್ ಗೊಂದ್ ಮಾಫಿಯಾ'

'ನಾನು ನಮ್ಮುಡ್ಗಿ ಖರ್ಚ್ ಗೊಂದ್ ಮಾಫಿಯಾ'

ಈ ಹೆಸರು ಕೇಳಿದ್ರೆನೇ ಅಚ್ಚರಿ, ಕುತೂಹಲ ಮೂಡುತ್ತೆ. ಏನಿದು ಎಂದು ಒಂದುಕ್ಷಣ ಯೋಚಿಸುವಂತೆ ಮಾಡುತ್ತೆ. ಇದೆ ಕುತೂಹಲವನ್ನು ಕಾಯ್ದುಕೊಂಡಿರುವ 'ನಾನು ನಮ್ಮುಡ್ಗಿ ಖರ್ಚ್ ಗೊಂದ್ ಮಾಫಿಯಾ' ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ. ನಿರ್ದೇಶಕ ಅಮರ್ ಈ ಚಿತ್ರಕ್ಕೆ ಆಕ್ಷ್ ಕಟ್ ಹೇಳಿದ್ದಾರೆ. ಅಂದಹಾಗೆ, ಇದು ಪ್ರೇಮಿಗಳ ಮತ್ತು ಸೈಬರ್ ಕ್ರೈಮ್ ಬಗ್ಗೆ ಒಂದಿಷ್ಟು ಘಟನೆಗಳನ್ನು ಇಟ್ಟುಕೊಂಡು ಮಾಡಿದ ಸಿನಿಮಾ. ಯುವಕರೇ ಸೇರಿಕೊಂಡು ಮಾಡಿರುವ ಈ ಸಿನಿಮಾದಲ್ಲಿ ನಟ ಶ್ಯಾಮ್ ಸುಂದರ್, ಶ್ರದ್ದಾ ಮತ್ತು ಅಶ್ವಿನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಮಂಗಳೂರು ಮೂಲದವರ 'ಡಿ ಕೆ ಬೋಸ್'

ಮಂಗಳೂರು ಮೂಲದವರ 'ಡಿ ಕೆ ಬೋಸ್'

ಮಂಗಳೂರು ಮೂಲದ ಕತೆಯನ್ನು ಹೊತ್ತು ಕರಾವಳಿ ಭಾಗದವರೇ ಮಾಡಿರುವ ಸಿನಿಮಾ 'ಡಿಕೆ ಬೋಸ್'. ಇಲ್ಲಿ ಬಹುತೇಕ ಮಂದಿ ಕರಾವಳಿಯವರೇ. ಭೋಜರಾಜ ವಾಮಂಜೂರು, ರಘು ಪಾಂಡೇಶ್ವರ, ತಿಮ್ಮಪ್ಪ ಹೀಗೆ ತುಳು ಸಿನಿಮಾರಂಗದಲ್ಲಿ ಕೆಲಸ ಮಾಡಿದ ಅನೇಕರು 'ಡಿ ಕೆ ಬೋಸ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ಈ ಸಿನಿಮಾದಲ್ಲಿ ದಕ್ಷಿಣ ಕನ್ನಡದ ಸೊಗಡನ್ನು ಅನಾವರಣ ಗೊಳಿಸಲಾಗಿದೆ. ಈ ಚಿತ್ರವನ್ನು ಸಂದೀಪ್ ನಿರ್ದೇಶನ ಮಾಡಿದ್ದಾರೆ.

'ಅರಬ್ಬಿ ಕಡಲ ತೀರದಲ್ಲಿ' ಕೃಷ್ಣೇಗೌಡ

'ಅರಬ್ಬಿ ಕಡಲ ತೀರದಲ್ಲಿ' ಕೃಷ್ಣೇಗೌಡ

ನಿರ್ಮಾಪಕ ಮತ್ತು ಡಬ್ಬಿಂಗ್ ಪರ ಹೋರಾಟಗಾರ ಕೃಷ್ಣೇಗೌಡ ನಾಯಕ ನಟನಾಗಿ ಅಭಿನಯಿಸುವ ಮೊದಲ ಸಿನಿಮಾ 'ಅರಬ್ಬಿ ಕಡಲ ತೀರದಲ್ಲಿ'. ಈ ಚಿತ್ರದಲ್ಲಿ ಕೃಷ್ಣೇಗೌಡ ಸೈಕೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ಮೊದಲ ಬಾರಿಗೆ ನಾಯಕನಾಗಿ ಬಣ್ಣ ಹಚ್ಚಿರುವ ಕೃಷ್ಣೇಗೌಡ ಅವರಿಗೆ ಈ ಸಿನಿಮಾ ದೊಡ್ಡ ಯಶಸ್ಸು ತಂದು ಕೊಡಲಿದೆ ಎನ್ನುವ ನಿರೀಕ್ಷೆ ಯಲ್ಲಿದ್ದಾರೆ. ತಮಿಳು ನಾಡಿನಲ್ಲಿ ನಡೆದ ನೈಜ ಘಟನೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ವೈಷ್ಣವಿ ಮೆನನ್ ಮತ್ತು ರಂಜಿತಾ ರಾವ್ ಚಿತ್ರದ ನಾಯಕಿಯರು. ಚಿತ್ರಕ್ಕೆ ವಿ. ಉಮಾಕಾಂತ್ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
6 kannada movies will releasing on this week. Girigitle, Face to Face, Rajannana maga, DK Bose, Nanu nam hudgi Karchgondh mafia, Arabi Kadala Theeradalli movies are ready to release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X