ಆಗಸ್ಟ್ 15ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುವ ಕನ್ನಡ ತಾರೆಯರಿವರು

ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆ ಎನ್ನುವುದೇ ಅತಿ ದೊಡ್ಡ ಹಬ್ಬ. ಅದೇ ದಿನ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಅಂದರೆ ಇದು ಜೀವನದ ಅತ್ಯಂತ ಸ್ಮರಣೀಯ ಕ್ಷಣ. ದೇಶದೆಲ್ಲೆಡೆ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಅಮೃತ ಮಹೋತ್ಸವದ ವಿಶೇಷ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂಭ್ರಮಾಚರಣೆ ಮಾಡುವ ದಿನವೇ ಸಿನಿಮಾ ಇಂಡಸ್ಟ್ರಿಯ ಕೆಲವು ಪ್ರಮುಖ ತಾರೆಯರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಪ್ರಸಿದ್ಧ ನಟ, ನಟಿ ಹಾಗೂ ನಿರ್ದೇಶಕ ಸೇರಿದಂತೆ ಆರು ಸೆಲೆಬ್ರಿಟಿಗಳು ಆಗಸ್ಟ್ 15 ರಂದು ಜನುಮದಿನ ಸೆಲೆಬ್ರೆಟ್ ಮಾಡುತ್ತಿದ್ದಾರೆ. ಯಾರು ಆ ತಾರೆಯರು? ಮುಂದೆ ಓದಿ...

ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ ನಟ

ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ ನಟ

75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿಶೇಷವಾದ ವಿಡಿಯೋ ಹಂಚಿಕೊಂಡಿರುವ ನಟ ರಾಘವೇಂದ್ರ ರಾಜ್ ಕುಮಾರ್ ದೇಶದ ಜನರಿಗೆ ಶುಭಾಶಯ ಕೋರಿದ್ದಾರೆ. ವಿಶೇಷ ಅಂದ್ರೆ ಇದೇ ದಿನ ರಾಘಣ್ಣ ಅವರ ಜನುಮ ದಿನ. ಡಾ ರಾಜ್ ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್ 1965 ಆಗಸ್ಟ್ 15 ರಂದು ಚೆನ್ನೈನಲ್ಲಿ ಜನಿಸಿದ್ದರು. ಪೊಗರು ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು. ರಾಘಣ್ಣ ನಟನೆಯ 25ನೇ ಚಿತ್ರ 'ಆಡಿಸಿದಾತ' ಸಿನಿಮಾ ಶೂಟಿಂಗ್ ಹಂತದಲ್ಲಿದೆ.

ಆಕ್ಷನ್ ಕಿಂಗ್ ಹುಟ್ಟುಹಬ್ಬ

ಆಕ್ಷನ್ ಕಿಂಗ್ ಹುಟ್ಟುಹಬ್ಬ

ಕನ್ನಡ ನಟ-ನಿರ್ದೇಶಕ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾಗೆ ಸ್ವಾತಂತ್ರ್ಯೋತ್ಸವದ ಸಂಭ್ರಮದ ಜೊತೆಗೆ ಹುಟ್ಟುಹಬ್ಬದ ಸಂಭ್ರಮ. ಸರ್ಜಾ ಬರ್ತಡೇ ಪ್ರಯುಕ್ತ ಮಲಯಾಳಂ ಸಿನಿಮಾ 'ದಿ ಫೀಸ್ಟ್' ಪೋಸ್ಟರ್ ಬಿಡುಗಡೆ ಮಾಡಿದೆ. 1962 ಆಗಸ್ಟ್ 15 ರಂದು ಮಧುಗಿರಿಯಲ್ಲಿ ಜನಿಸಿದ ಅರ್ಜುನ್ ಸರ್ಜಾ ಕನ್ನಡ, ತಮಿಳು, ತೆಲುಗು ಸೇರಿದಂತೆ ಮಲಯಾಳಂ ಚಿತ್ರದಲ್ಲೂ ನಟಿಸುತ್ತಿದ್ದಾರೆ. 2019ರಲ್ಲಿ ಶಿವಕಾರ್ತಿಕೇಯನ್ ನಟನೆಯ ಹೀರೋ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಪ್ರಸ್ತುತ, ಮೋಹನ್ ಲಾಲ್ ಅಭಿನಯದ ಮರಕ್ಕರ್, ಹರ್ಭಜನ್ ಸಿಂಗ್ ಜೊತೆ ಫ್ರೆಂಡ್‌ಷಿಪ್, ರವಿತೇಜ ಜೊತೆ ಖಿಲಾಡಿ ಸೇರಿದಂತೆ ಮತ್ತಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದ ಮೇಷ್ಟ್ರು

ಕನ್ನಡ ಚಿತ್ರರಂಗದ ಮೇಷ್ಟ್ರು

ಕನ್ನಡ ಚಿತ್ರರಂಗದ ಪಾಲಿಗೆ ಮೇಷ್ಟ್ರು ಅಂತಾನೇ ಗುರುತಿಸಿಕೊಂಡಿರುವ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರದ್ದು ಆಗಸ್ಟ್ 15 ರಂದೇ ಹುಟ್ಟುಹಬ್ಬ. 'ಅಮೆರಿಕ ಅಮೆರಿಕ', 'ಅಮೃತಧಾರೆ', ಕೊಟ್ರೆಶಿ ಕನಸು, ಬಾ ನಲ್ಲೆ ಮಧುಚಂದ್ರಕೆ, ಸೂಪರ್ ಸ್ಟಾರ್, ಮಾತಡ್ ಮಾತಡ್ ಮಲ್ಲಿಗೆ ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳು ಮೇಷ್ಟ್ರು ಜೋಳಿಗೆಯಿಂದ ಬಂದಿದೆ. 2020ರಲ್ಲಿ 'ಇಂಡಿಯಾ vs ಇಂಗ್ಲೆಂಡ್' ಸಿನಿಮಾ ತೆರೆಕಂಡಿತ್ತು.

ಸಂತೋಷ್ ಆನಂದ್ ರಾಮ್

ಸಂತೋಷ್ ಆನಂದ್ ರಾಮ್

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ರಾಜಕುಮಾರ' ಚಿತ್ರಗಳ ಮೂಲಕ ಸ್ಟಾರ್ ನಿರ್ದೇಶಕನ ಪಟ್ಟಕ್ಕೆ ಏರಿದ ಸಂತೋಷ್ ಆನಂದ್ ರಾಮ್ ಅವರಿಗೂ ಆಗಸ್ಟ್ 15 ರಂದು ಜನುಮದಿನ. ಸಂತೋಷ್ ನಿರ್ದೇಶನದಲ್ಲಿ ಬಂದ 'ಯುವರತ್ನ' ಸಿನಿಮಾ ಬಿಡುಗಡೆಯಾಗಿ ಸಕ್ಸಸ್ ಕಂಡಿದೆ. ಮುಂದಿನ ಚಿತ್ರಕ್ಕೆ ತಯಾರಿ ನಡೆಸಿದ್ದು, ಯಾವ ಸಿನಿಮಾ ಎಂದು ಪ್ರಕಟಿಸಿಲ್ಲ.

ಭಾರತಿ ವಿಷ್ಣುವರ್ಧನ್

ಭಾರತಿ ವಿಷ್ಣುವರ್ಧನ್

ಡಾ.ವಿಷ್ಣುವರ್ಧನ್ ಅವರ ಧರ್ಮಪತ್ನಿ, ನಟಿ ಭಾರತಿ ವಿಷ್ಣುವರ್ಧನ್ ಅವರು ಸಹ ಸ್ವಾತಂತ್ರ್ಯ ದಿನಾಚರಣೆಯಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಆಗಸ್ಟ್ 15, 1948ರಲ್ಲಿ ಹುಟ್ಟಿದ ಇವರು ಕನ್ನಡ, ಹಿಂದಿ ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಅಭಿನಯಿಸಿರುವ ಪಂಚಭಾಷಾ ತಾರೆ. 2019ರಲ್ಲಿ ದರ್ಶನ್ ನಟನೆಯ 'ಕುರುಕ್ಷೇತ್ರ' ಸಿನಿಮಾದಲ್ಲಿ ಕೊನೆಯದಾಗಿ ಅಭಿನಯಿಸಿದ್ದರು. ಕುಂತಿ ಪಾತ್ರ ನಿರ್ವಹಿಸಿದ್ದರು.

ಸುಹಾಸಿನಿ ಬರ್ತಡೇ

ಸುಹಾಸಿನಿ ಬರ್ತಡೇ

ನಟಿ ಸುಹಾಸಿನಿ ಮಣಿರತ್ನಂ ಅವರು ತಮಿಳುನಾಡಿನಲ್ಲಿ ಹುಟ್ಟಿದರೂ ಕೂಡ ಕನ್ನಡದವರೇ ಎನ್ನುವಷ್ಟು ಹತ್ತಿರದವರು. 15 ಆಗಸ್ಟ್ 1961 ರಲ್ಲಿ ಅಂದಿನ ಮದ್ರಾಸಿನ ಪರಮಕುಡಿಯಲ್ಲಿ ಜನಿಸಿದರು. ಸುಹಾಸಿನಿ ತಮಿಳು ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದರು ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಬಂಧನ, ಮುತ್ತಿನ ಹಾರ, ಅಮೃತವರ್ಷಿಣಿ, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಚಿತ್ರಗಳಲ್ಲಿ ಮೋಡಿ ಮಾಡಿದ್ದಾರೆ. 2019ರಲ್ಲಿ ಬಿಡುಗಡೆಯಾಗಿದ್ದ ಆಯುಷ್ಮಾನ್ ಭವ ಚಿತ್ರದಲ್ಲಿ ಕೊನೆಯದಾಗಿ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದರು.

More from Filmibeat

English summary
75th Independence Day 2021: Actor Raghavendra Rajkumar, Bharathi Vishnuvardhan, Arjun Sarja, Nagathihalli Chandrashekhar, Santhosh Ananddram, suhasini are celebrating their birthdays with Independence Day on august 15th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X