ನಟಿ ಶ್ರಿಯಾಳ ಕಾರಿನ ಗಾಜು ಪುಡಿ ಮಾಡಿದ್ದು ಯಾರು?

ಘಟನೆ ಬಗ್ಗೆ ನಟಿ ಶ್ರಿಯಾ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದು, ತೆಲಂಗಾಣ ಪರ ಪ್ರತಿಭಟನಕಾರರು ತನ್ನ ಕಾರನ್ನು ಅಡ್ಡಗಟ್ಟಿ ಕಾರಿನ ಗಾಜು ಒಡೆದು ಕಲ್ಲು ತೂರಿದ್ದಾರೆ. ಆದರೆ ಅದೃಷ್ಟವಶಾತ್ ಕಲ್ಲು ನನಗೆ ತಾಗಿಲ್ಲ. ಸ್ಥಳದಲ್ಲಿ ಪೊಲೀಸರಿದ್ದರೂ ಮೂಕಪ್ರೇಕ್ಷಕರಂತೆ ವರ್ತಿಸಿದರು ಎಂದು ದೂರಿದ್ದಾರೆ.
ಅಲ್ಲದೇ ಕ್ಯಾಮರಾ ಮುಂದೆ 'ಜೈ ತೆಲಂಗಾಣ' ಎಂದು ಹೇಳುವಂತೆ ಅವರು ಒತ್ತಾಯಿಸಿದರು ಎಂದೂ ಶ್ರಿಯಾ ದೂರಿದ್ದಾರೆ. ತೆಲಂಗಾಣ ಪರ ಪ್ರತಿಭಟನಕಾರರಿಂದ ತಪ್ಪಿಸಿಕೊಂಡು ಬರಬೇಕಾದರೆ ಶ್ರಿಯಾಗೆ ಸಖತ್ ಕಷ್ಟವಾಯಿತಂತೆ. ಅಲ್ಲದೇ ಭಾರತದಲ್ಲಿ ಹೀಗೆಲ್ಲಾ ಆಗುತ್ತಿರುವುದು ಬೇಸರ ತಂದಿದೆ ಎಂದೂ ಅವರು ಹೇಳಿದ್ದಾರೆ.
ಶ್ರಿಯಾ ಪುಡಿಪುಡಿಯಾದ ತಮ್ಮ ಕಾರಿನ ಚಿತ್ರಗಳನ್ನೂ ಟ್ವಿಟ್ಟರಿನಲ್ಲಿ ಛಾಪಿಸಿದ್ದಾರೆ. ಉತ್ತರ ಭಾರತದಲ್ಲಿ ಹುಟ್ಟಿಬೆಳೆದ ೀ ಸುರಸುಂದರಿ 2001ರಲ್ಲಿ ತೆಲುಗು ಭಾಷೆಯ 'ಇಷ್ಟಂ' ಸಿನಿಮಾ ಮೂಲಕ ದಕ್ಷಿಣಕ್ಕೆ ಲಗ್ಗೆ ಹಾಕಿದರು.
More from Filmibeat
English summary
South Indian actress Shriya Saran claims that her shoot was stopped in Hyderabad by Telangana supporters. Saran states that the Telangana supporters threatened her to say Jai Telangana on camera and when she refused they threw stones at her car and stopped her shoot. Shriya Saran used micro blogging site Twitter to disclose the incident.
ಶ್ರಿಯಾ ಸರನ್ ಕಾಲಿವುಡ್ ಟಾಲಿವುಡ್ ಹೈದರಾಬಾದ್ ಟ್ವಿಟ್ಟರ್ shriya saran kollywood tollywood twitter hyderabad


Click it and Unblock the Notifications











