Just In
Don't Miss!
- Automobiles
ಬಹುಬೇಡಿಕೆಯ ಟಿ-ರಾಕ್ ಎಸ್ಯುವಿ ಖರೀದಿಗೆ ಬುಕ್ಕಿಂಗ್ ಪುನಾರಂಭಿಸಿದ ಫೋಕ್ಸ್ವ್ಯಾಗನ್
- News
50 ಲಕ್ಷ ಉದ್ಯೋಗ ಸೃಷ್ಟಿ, ಮಹಿಳೆಯರಿಗೆ ಶೇ. 50 ಮೀಸಲಾತಿ; ಕಮಲ್ ಹಾಸನ್ ಭರವಸೆ
- Sports
ಗ್ಲೆನ್ ಮ್ಯಾಕ್ಸ್ವೆಲ್ ಸಿಕ್ಸ್ ಏಟಿನಿಂದ ಮುರಿದ ಕುರ್ಚಿ ಹರಾಜಿಗೆ
- Education
Karnataka SSLC Exam 2021 Time Table: ಎಸ್ಎಸ್ಎಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
- Lifestyle
ಮಾರ್ಚ್ ನಲ್ಲಿದೆ ಕಷ್ಟ ನಿವಾರಿಸುವ ಫಾಲ್ಗುಣ ಅಮವಾಸ್ಯೆ, ಯಾಕಿಷ್ಟು ಮಹತ್ವ ಗೊತ್ತಾ?
- Finance
ಡಿಜಿಟಲ್ ದುಡ್ಡು ಬಿಟ್ ಕಾಯಿನ್ ಮೌಲ್ಯ ಮತ್ತೆ $50,000ಕ್ಕೆ ಏರಿಕೆ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದರ್ಶನ್ ಜರ್ನಿಯಲ್ಲಿ ಮರೆಯಲಾಗದ ಆರು ಚಿತ್ರಗಳು, ಏಕೆ ಎಂಬ ಕಾರಣ ಇಲ್ಲಿದೆ?
ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಡಿ ಬಾಸ್. ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ಗೆ ಸುಲ್ತಾನ್. ಕನ್ನಡ ಇಂಡಸ್ಟ್ರಿಯಲ್ಲಿ ಪ್ರಸ್ತುತ ಯಜಮಾನ ಎಂದು ಕರೆಸಿಕೊಳ್ಳುವ ನಟ ದರ್ಶನ್ ವೃತ್ತಿ ಜೀವನಕ್ಕೆ ಎರಡು ದಶಕದ ಸಂಭ್ರಮ. ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಟನಾಗಿ ನಟಿಸಿರುವ ದಾಸ, ಆರಂಭದಲ್ಲಿ ಕೆಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.
'ಮೆಜೆಸ್ಟಿಕ್' ಚಿತ್ರದ ಮೂಲಕ ಗಾಂಧಿನಗರದಲ್ಲಿ ಸವಾರಿ ಹೊರಟ ದರ್ಶನ್ ನೋಡು ನೋಡುತ್ತಿದ್ದಂತೆ ಐರಾವತ ಆಗಿ ಬೆಳೆದು ನಿಂತಿದ್ದಾರೆ. ಮಾಸ್ ಕಿಂಗ್ ಎನಿಸಿಕೊಂಡಿರುವ ದರ್ಶನ್ ಒಬ್ಬ ಪರಿಪೂರ್ಣ ನಟ. ಎಲ್ಲ ರೀತಿಯ ಪಾತ್ರಗಳನ್ನು ನಿಭಾಯಿಸಬಲ್ಲ ಕಲಾವಿದ. ದರ್ಶನ್ ಅವರು ನಡೆದು ಬಂದ ಹಾದಿಯನ್ನೊಮ್ಮೆ ತಿರುಗಿ ನೋಡಿದ್ರೆ ಈ ಆರು ಚಿತ್ರಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಯಾವುದು ಆರು ಸಿನಿಮಾ? ಮುಂದೆ ಓದಿ...

ಸ್ಟಾರ್ ಮಾಡಿದ 'ಮೆಜೆಸ್ಟಿಕ್'
ಖ್ಯಾತ ಖಳನಟನ ಪುತ್ರ ಆಗಿದ್ದರೂ ಅವಕಾಶಕ್ಕಾಗಿ ಪರದಾಡುವ ಸಮಯ. ಅದೃಷ್ಟವಶಾತ್ ಮೆಜೆಸ್ಟಿಕ್ (2002) ಚಿತ್ರದಲ್ಲಿ ನಾಯಕನಾಗಿ ನಟಿಸುವ ಚಾನ್ಸ್ ಸಿಕ್ತು. ಅದಕ್ಕೂ ಮುಂಚೆ ಲೈಟ್‌ಬಾಯ್, ವಿಲನ್, ಫೈಟರ್ ಆಗಿ ದರ್ಶನ್ ಕೆಲಸ ಮಾಡ್ತಿದ್ರು. ಇಂದು ದರ್ಶನ್ ಏನೇ ಸಾಧಿಸಿದ್ದರೂ ಮೊದಲ ಚಿತ್ರವನ್ನು ಎಂದೆಂದೂ ಮರೆಯಲು ಸಾಧ್ಯವಿಲ್ಲ.
''ನೀನು ಮಾಸ್ ಅಂದ್ರೆ, ನಾನು......'': ರಾಬರ್ಟ್ ಡೈಲಾಗ್ ಹಿಂದಿನ ಕಥೆ

ಲಾಲಿಹಾಡು ಚಿತ್ರದ ಆನಂದ್
ಮೆಜೆಸ್ಟಿಕ್ ಸಿನಿಮಾ ಸಕ್ಸಸ್ ಆದ್ಮೇಲೆ ಚಿತ್ರರಂಗಕ್ಕೊಬ್ಬ ಮಾಸ್ ಹೀರೋ ಸಿಕ್ಕ ಎಂಬ ಸುದ್ದಿ ಹರಿಡಿತು. ಅದರ ಪರಿಣಾಮ ಧ್ರುವ, ಕಿಟ್ಟಿ, ಕರಿಯ ಅಂತಹ ಆಕ್ಷನ್ ಚಿತ್ರಗಳು ದರ್ಶನ್ ಪಾಲಿಗೆ ಬಂತು. ಇಂತಹ ಸಂದರ್ಭದಲ್ಲಿ ಕ್ಲಾಸ್ ನಟನೆಗೂ ನಾನು ಸೈ ಎಂದು ತೋರಿಸಿದ ಚಿತ್ರ ಲಾಲಿಹಾಡು (2003). ಹಳ್ಳಿಹುಡುಗನಾಗಿ, ಗಾಯಕನಾಗಿ ಮೋಡಿ ಮಾಡಿದ್ದರು. ಮಾಸ್ ಇಮೇಜ್ ಜೊತೆಗೆ ಕ್ಲಾಸ್ ಇಮೇಜ್ ಸೇರಿಸಿದ ಸಿನಿಮಾ ಇದು.

ನಮ್ಮ ಪ್ರೀತಿಯ ರಾಮು
ಕಮರ್ಷಿಯಲ್ ಆಗಿ ಸಕ್ಸಸ್ ಆದ ದರ್ಶನ್ ಈ ನಡುವೆ ಪ್ರಯೋಗಾತ್ಮಕ ಚಿತ್ರವೊಂದನ್ನು ಕೈಗೆತ್ತಿಕೊಂಡರು. ಅದುವೇ ನಮ್ಮ ಪ್ರೀತಿಯ ರಾಮು (2003). ತಮಿಳಿನ ರೀಮೇಕ್ ಆಗಿದ್ದರು ಕಣ್ಣಿಲ್ಲದ ವ್ಯಕ್ತಿ ಪಾತ್ರದಲ್ಲಿ ದರ್ಶನ್ ನಟಿಸಿದರು. ತಮ್ಮ ಅಮೋಘ ಅಭಿನಯದ ಮೂಲಕ ಜನರ ಮನಸ್ಸು ಗೆದ್ದರು. ಆದರೆ, ಬಾಕ್ಸ್ ಆಫೀಸ್ ವಿಚಾರದಲ್ಲಿ ಸಿನಿಮಾ ದುಡ್ಡು ಮಾಡಿಲ್ಲ ಎಂಬ ಕಾರಣಕ್ಕೆ ನಟ ದರ್ಶನ್ ಮತ್ಯಾವತ್ತೋ ಇಂತಹ ಪ್ರಯೋಗಾತ್ಮಕ ಕಥೆಗಳ ಕಡೆ ಹೋಗಲೇ ಇಲ್ಲ. ಮತ್ತೆ ಮಾಸ್ ಇಮೇಜ್ ಚಿತ್ರಗಳಿಗೆ ಪ್ರಾಮುಖ್ಯತೆ ಕೊಟ್ಟರು. ಆದರೂ, ಡಿ ಬಾಸ್ ವೃತ್ತಿ ಜೀವನದಲ್ಲಿ 'ನಮ್ಮ ಪ್ರೀತಿಯ ರಾಮು' ಬಹಳ ವಿಶೇಷ ಸ್ಥಾನ ಪಡೆದುಕೊಂಡಿದೆ.
'ನವಗ್ರಹ' ಚಿತ್ರದ ಜಗ್ಗು ಪಾತ್ರಕ್ಕೆ ದರ್ಶನ್ ಮೊದಲ ಆಯ್ಕೆಯಾಗಿರಲಿಲ್ಲ!

2008ರಲ್ಲಿ ನವಗ್ರಹ
ನಮ್ಮ ಪ್ರೀತಿಯ ರಾಮು ಸಿನಿಮಾದ ಹಿನ್ನಡೆ ಬಳಿಕ ಸಾಲು ಸಾಲು ಆಕ್ಷನ್ ಚಿತ್ರಗಳಲ್ಲಿ ದರ್ಶನ್ ನಟಿಸಿದರು. ದಾಸ, ಕಲಾಸಿಪಾಳ್ಯ, ಶಾಸ್ತ್ರಿ, ಸುಂಟರಗಾಳಿ, ಅಯ್ಯ, ಮಂಡ್ಯ, ದತ್ತ, ಭೂಪತಿ, ಗಜ, ಇಂದ್ರ ಹೀಗೆ ಮಾಸ್ ಚಿತ್ರಗಳಿಗೆ ಪ್ರಾಮುಖ್ಯತೆ ನೀಡಿದ್ದರು. ಒಂದೇ ದೋಣಿಯಲ್ಲಿ ಸಾಗುತ್ತಿದ್ದ ಡಿ ಬಾಸ್ 2008ರಲ್ಲಿ ಮತ್ತೊಂದು ಬ್ರೇಕ್ ಹಾಕಿದರು. ನವಗ್ರಹ ಸಿನಿಮಾದಲ್ಲಿ ನೆಗಿಟಿವ್ ಶೇಡ್‌ನಲ್ಲಿ ನಟಿಸುವ ಮೂಲಕ ತಮ್ಮ ವರಸೆ ಬದಲಿಸಿದರು. ಇಂದಿಗೂ ನವಗ್ರಹ ಸಿನಿಮಾ ದರ್ಶನ್ ಅವರ ಆಲ್‌ಟೈಂ ಫೆವರೀಟ್ ಚಿತ್ರಗಳ ಪೈಕಿ ಮೊದಲ ಸಾಲಿನಲ್ಲಿ ಇರುತ್ತದೆ.

ಐತಿಹಾಸಿಕ ಚಿತ್ರದಲ್ಲಿ ಡಿ ಬಾಸ್
ಕಮರ್ಷಿಯಲ್ ಟ್ರೆಂಡ್ ಹಿಂದೆ ಓಡುತ್ತಿದ್ದ ಚಿತ್ರರಂಗದ ದಿಕ್ಕನ್ನು ಬದಲಿಸಿದ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಅಣ್ಣಾವ್ರು, ವಿಷ್ಣುವರ್ಧನ್ ಬಳಿಕ ಅಂತಹ ಚಿತ್ರಗಳನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎನ್ನುವ ಸಮಯದಲ್ಲಿ ಸರ್ಪ್ರೈಸ್ ಎಂಬಂತೆ ದರ್ಶನ್ ರಾಯಣ್ಣ ಸಿನಿಮಾ ಮಾಡಿದರು. ಬಹಳ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಂಡರು.

ಚರಿತ್ರೆ ಸೃಷ್ಟಿಸಿದ ಕುರುಕ್ಷೇತ್ರ
ಐತಿಹಾಸಿಕ ಚಿತ್ರವನ್ನು ಮಾಡಿ ನಂಬಿಕೆ ಹೆಚ್ಚು ಮಾಡಿಕೊಂಡಿದ್ದ ದರ್ಶನ್ ಮುನಿರತ್ನ ನಿರ್ಮಾಣದಲ್ಲಿ ಕುರುಕ್ಷೇತ್ರ ಸಿನಿಮಾ ಮಾಡಿದರು. ಪೌರಾಣಿಕ ಚಿತ್ರದಲ್ಲಿ ದುರ್ಯೋಧನನಾಗಿ ಡಿ ಬಾಸ್ ಅಬ್ಬರಿಸಿದರು. ದುರ್ಯೋಧನ ಪಾತ್ರಕ್ಕೆ ದರ್ಶನ್ ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಸದ್ದು ಮಾಡಿತ್ತು. ಬಹುಶಃ ಈ ಆರು ಚಿತ್ರಗಳು ದರ್ಶನ್ ವೃತ್ತಿ ಜೀವನದಲ್ಲಿ ಆಗಾಗ ಬದಲಾವಣೆಯನ್ನು ನೀಡುವ ಮೂಲಕ ವಿಶೇಷವೆನಿಸಿಕೊಂಡಿದೆ.