ಪವನ್ ಕುಮಾರ್ 'ಕನಸು' ನಿಜ ಆಗಿದ್ದು ಇದೇ ದಿನ

ಸಿನಿಮಾದ ಒಳಗೆ ಕನಸನ್ನು ತೋರಿಸಿ, ತಮ್ಮ ಜೀವನದ ಕನಸನ್ನು ನಿರ್ದೇಶಕ ಪವನ್ ಕುಮಾರ್ ನಿಜ ಮಾಡಿಕೊಂಡರು. ಪವನ್ ತಾವೇನು, ತಮ್ಮ ಟ್ಯಾಲೆಂಟ್ ಏನು ಎಂದು ಸಾಭೀತು ಮಾಡಿದ್ದು ಇದೇ ದಿನ. ಸಪ್ಟೆಂಬರ್ 6, 2013 ಪವನ್ ಕನಸಿನ ಸಿನಿಮಾ 'ಲೂಸಿಯಾ' ಬಿಡುಗಡೆಯಾಗಿತ್ತು.

Recommended Video

ಈ ಒಂದು ದೃಶ್ಯಕ್ಕೆ ಖರ್ಚಾಗಿದ್ದು ಬರೋಬ್ಬರಿ ಒಂದು ಕೋಟಿ..? | FILMIBEAT KANANDA

'ಲೂಸಿಯಾ' ಸಿನಿಮಾ ಬಿಡುಗಡೆಯಾಗಿ ಇಂದಿಗೆ 6 ವರ್ಷ ತುಂಬಿದೆ. ಇಂದು ಕನ್ನಡದಲ್ಲಿ ಬರುತ್ತಿರುವ ಹೊಸ ಬಗೆಯ ಸಿನಿಮಾಗಳಿಗೆ ಮುನ್ನುಡಿ ಬರೆದಿದ್ದು 'ಲೂಸಿಯಾ'. ಇಂತಹ ಸಿನಿಮಾಗಳನ್ನು ಕನ್ನಡದಲ್ಲಿಯೂ ಮಾಡಬಹುದು, ಜನರನ್ನು ಮೆಚ್ಚಿಸಿ ಗೆಲ್ಲಬಹುದು ಎಂದು ಈ ಚಿತ್ರ ತೋರಿಸಿಕೊಟ್ಟಿತ್ತು.

ಇದೇ ಸಿನಿಮಾ ಅನೇಕರ ಜನನಕ್ಕೆ ಕಾರಣ ಆಗಿತ್ತು. ನಟಿ ಶ್ರುತಿ ಹರಿಹರನ್ ಈ ಸಿನಿಮಾದ ಮೂಲಕ ಕನ್ನಡಕ್ಕೆ ಬಂದರು. ಸತೀಶ್ ನೀನಾಸಂ ಹೀರೋ ಆಗಿ ಗೆದ್ದರು. ಗಾಯಕ ನವೀನ್ ಸಜ್ಜು, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಪರಿಚಯ ಆದರು.

 6 Years For Lucia Kannada Movie

ಮತ್ತೊಂದು ಕಡೆ ಕ್ರೌಡ್ ಫಂಡಿಂಗ್ ಕಾನ್ಸೆಪ್ಟ್ ಈ ಚಿತ್ರದ ಮೂಲಕವೇ ಕನ್ನಡಕ್ಕೆ ಬಂತು. ಕೇವಲ 50 ಲಕ್ಷ ಬಂಡವಾಳ ಹಾಕಿ 3 ಕೋಟಿ ಗಳಿಕೆ ಮಾಡಿತ್ತು. ಬೇರೆ ಇಂಡಸ್ಟ್ರಿಯಲ್ಲಿಯೂ ಚಿತ್ರ ಟಾಕ್ ಆಗಿತ್ತು. ಬಾಲಿವುಡ್ ನಟ ಇರ್ಫಾನ್ ಖಾನ್ ಚಿತ್ರದ ಬಗ್ಗೆ ಮಾತನಾಡಿದ್ದರು.

 6 Years For Lucia Kannada Movie

ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ ಪಡೆದರು. ಇದೇ ಸಿನಿಮಾ 2015 ರಲ್ಲಿ ತಮಿಳಿನಲ್ಲಿ ರಿಮೇಕ್ ಆಯ್ತು. ಸಿದ್ಧಾರ್ಥ್ ಚಿತ್ರದ ನಾಯಕನಾಗಿ ಕಾಣಿಸಿಕೊಂಡರು. ಕನ್ನಡಕ್ಕೆ ಹೋಲಿಕೆ ಮಾಡಿದರೆ ತಮಿಳಿನಲ್ಲಿ ಸಿನಿಮಾ ಆ ಮಟ್ಟಕ್ಕೆ ಜನಪ್ರಿಯತೆ ಪಡೆದುಕೊಳ್ಳಲಿಲ್ಲ.

More from Filmibeat

English summary
6 years for Lucia kannada movie. The movie is directed by Pawan Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X