'KGF' ಚರಿತ್ರೆಯ ಪುಸ್ತಕ ತೆರೆದ ದಿನ.. ದೊಡ್ಡ ಕಾಡ್ಗಿಚ್ಚಿಗೆ ಕಿಡಿ ಹೊತ್ತಿಕೊಂಡ ಕ್ಷಣ: ಯಶ್ ಟ್ವೀಟ್ ವೈರಲ್

ಇಂದಿಗೆ ಸರಿಯಾಗಿ 6 ವರ್ಷಗಳ ಹಿಂದೆ KGF ಸಿನಿಮಾ ಚಿತ್ರೀಕರಣ ಶುರುವಾಗಿತ್ತು. 2016 ಜೂನ್ 9ರಂದು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಚಿತ್ರದ ಮುಹೂರ್ತ ನೆರವೇರಿಸಲಾಗಿತ್ತು. 2017, ಮಾರ್ಚ್ 15ರಂದು ಅಂದ್ರೆ ಸರಿಯಾಗಿ 6 ವರ್ಷಗಳ ಹಿಂದೆ 'KGF' ಬಿಗಿನ್ಸ್‌ ಎಂದು ಯಶ್ ಟ್ವೀಟ್ ಮಾಡಿದ್ದರು. ಗಡ್ಡ ಬಿಟ್ಟು ಖಡಕ್ ಲುಕ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದರು. ಮುಂದೆ ಸೃಷ್ಟಿಯಾಗಿದ್ದು ಇತಿಹಾಸ.

ಅಂದು 'KGF' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗುತ್ತೆ. ಸಾವಿರಾರು ಕೋಟಿ ಕಲೆಕ್ಷನ್ ಮಾಡುತ್ತೆ ಎಂದು ಯಾರು ಊಹಿಸಿರಲಿಲ್ಲ. ಆದರೆ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್‌ಗೆ ನಂಬಿಕೆ ಇತ್ತು. ಈ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತೆ ಎನ್ನುವ ಅಂದಾಜಿತ್ತು. ಏನೋ ದೊಡ್ಡದಾಗಿ ಮಾಡುತ್ತಿದ್ದಾರಂತೆ ಎಂದು ಕೆಲವರು ನಿರೀಕ್ಷಿಸಿದ್ದರು. ಇಷ್ಟೊಂದು ಸೀಕ್ರೆಟ್ ಆಗಿ ಇಷ್ಟು ತಡವಾಗಿ ಅದೆಂಥಾ ಸಿನಿಮಾ ಮಾಡ್ತಿದ್ದಾರಪ್ಪಾ ಎಂದವರು ಇದ್ದಾರೆ.

6 Years Since Yash Shared This selfie with KGF begins caption

2018 ಜನವರಿ 8ರಂದು ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಮೇಕಿಂಗ್ ಝಲಕ್ ಜೊತೆಗೆ ಸಣ್ಣ ಟೀಸರ್ ರಿಲೀಸ್ ಆಗಿತ್ತು. ಆಗಲೂ ಕೂಡ ಸಿನಿಮಾ ಬಗ್ಗೆ ಅಷ್ಟೇನು ನಿರೀಕ್ಷೆ ಇರಲಿಲ್ಲ. ಆದರೆ ಅದೇ ವರ್ಷ ನವೆಂಬರ್ 9ರಂದು ಒಂದು ಟ್ರೈಲರ್ ರಿಲೀಸ್ ಆಯ್ತು ನೋಡಿ ಅಲ್ಲಿಂದ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿತ್ತು. ನೋಡ ನೋಡುತ್ತಲೇ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಆಗಲು ಆರಂಭವಾಯಿತು. ಬಾಲಿವುಡ್ ಮಂದಿ ಕೂಡ ಸಿನಿಮಾ ಬಗ್ಗೆ ಮಾತನಾಡಲು ಆರಂಭಿಸಿದರು. ರಾಜಮೌಳಿರಂತಹ ದಿಗ್ಗಜರು ತಂಡದ ಬೆನ್ನಿಗೆ ನಿಂತರು. ಅಲ್ಲಿಂದ ಮುಂದೆ ರಾಕಿ ಆರ್ಭಟ ಜೋರಾಗುತ್ತಲೇ ಹೋಯಿತು.

'KGF' ಚಾಪ್ಟರ್ 1 ಟ್ರೈಲರ್‌ಗೆ ಸಿಕ್ಕ ರೆಸ್ಪಾನ್ಸ್ ನೋಡಿ ಖುಷಿಯಾದ ತಂಡ ದೇಶದ ವಿವಿಧ ನಗರಗಳಿಗೆ ಭೇಟಿ ನೀಡಿ ಪ್ರಚಾರ ಮಾಡಿತ್ತು. ಪ್ರಶಾಂತ್ ನೀಲ್ ಸಿನಿಮಾ ಕನ್ನಡದಲ್ಲಿ ರಿಲೀಸ್ ಆದರೆ ಸಾಕು ಎಂದುಕೊಂಡಿದ್ದರು. ಆದರೆ ಯಶ್ ಹಾಗೂ ವಿಜಯ್ ಕಿರಗಂದೂರ್ ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ಏಕಕಾಲಕ್ಕೆ ಪ್ರೇಕ್ಷಕರ ಮುಂದೆ ಕೊಂಡೊಯ್ಯುವ ಪ್ರಯತ್ನ ಮಾಡಿದರು. ನಟ ಯಶ್ ಹಗಳಿರುಳು ಸಿನಿಮಾ ಪ್ರಚಾರಕ್ಕಾಗಿ ಸುತ್ತಾಡಿದರು. 2018, ಡಿಸೆಂಬರ್ 21ರಂದು ಬೆಳ್ಳಿತೆರೆಗೆ ರಾಕಿ ಭಾಯ್ ಎನ್ನುವ ಬೆಂಕಿ ಚೆಂಡು ತೂರಿ ಬಂದಿತ್ತು.

6 Years Since Yash Shared This selfie with KGF begins caption

ಪ್ರಶಾಂತ್ ನೀಲ್ ವಿಷನ್, ಟೇಕಿಂಗ್, ಯಶ್ ಆಕ್ಟಿಂಗ್ ನೋಡಿ ಸಿನಿರಸಿಕರು ಫಿದಾ ಆಗಿ ಹೋದರು. ನೋಡ ನೋಡುತ್ತಲೇ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯಲು ಆರಂಭಿಸಿತು. ಟ್ರೈಲರ್, ಸಾಂಗ್ಸ್‌ನಿಂದ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಅದಕ್ಕೆ ತಕ್ಕಂತೆ ದೊಡ್ಡ ಓಪನಿಂಗ್ ಸಿಕ್ಕಿತ್ತು. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಚಿತ್ರವನ್ನು ಸ್ವಾಗತಿಸಿದ್ದರು. ಎರಡ್ಮೂರು ದಿನ ಎಲ್ಲಾ ಥಿಯೇಟರ್‌ಗಳಲ್ಲೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತು. ಪರಭಾಷೆಗಳಲ್ಲೂ ಸಿನಿಮಾ ಸೂಪರ್ ಹಿಟ್ ಆಯಿತು. ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳದಲ್ಲಿ ಯಶ್ ಅಭಿಮಾನಿ ಸಂಘಗಳು ಹುಟ್ಟಿಕೊಂಡವು.

ಹಿಂದಿ ಬೆಲ್ಟ್‌ನಲ್ಲೂ 'KGF' ಚಾಪ್ಟರ್ 1 ಸಖತ್ ಸೌಂಡ್ ಮಾಡ್ತು. ಎಲ್ಲರೂ ರಾಕಿ ಭಾಯ್ ಅಭಿಮಾನಿಗಳಾಗಿಬಿಟ್ಟರು. ಚಿತ್ರವನ್ನು 2 ಭಾಗಗಳಾಗಿ ಪ್ರೇಕ್ಷಕರು ಮುಂದೆ ತರುವ ಚಿತ್ರತಂಡ ಲೆಕ್ಕಾಚಾರ ವರ್ಕೌಟ್ ಆಗಿತ್ತು. ಫಸ್ಟ್ ಚಾಪ್ಟರ್ 250 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತು. ಇನ್ನು ಓಟಿಟಿ ಫ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಪರಭಾಷಿಕರನ್ನು ದೊಡ್ಡಮಟ್ಟದಲ್ಲಿ ತಲುಪಿತ್ತು. ಚಿತ್ರದ ಡೈಲಾಗ್‌ಗಳು, ಸಾಂಗ್ಸ್ ಸೆನ್ಸೇಷನ್‌ ಕ್ರಿಯೇಟ್ ಮಾಡಿತ್ತು. ಚಾಪ್ಟರ್‌-2 ಬಗ್ಗೆ ಇನ್ನಿಲ್ಲದ ನಿರೀಕ್ಷೆ ಹುಟ್ಟಾಕ್ಕಿತ್ತು. ಮೊದಲ ಭಾಗವನ್ನು ಥಿಯೇಟರ್‌ನಲ್ಲಿ ನೋಡದವರು ಕೂಡ 2ನೇ ಭಾಗವನ್ನು ಮುಗಿಬಿದ್ದು ಥಿಯೇಟರ್‌ನಲ್ಲಿ ನೋಡಿದರು.

6 Years Since Yash Shared This selfie with KGF begins caption

ಭಾರೀ ನಿರೀಕ್ಷೆಯೊಂದಿಗೆ ಕಳೆದ ವರ್ಷ ಏಪ್ರಿಲ್ 14ರಂದು 'KGF' ಚಾಪ್ಟರ್ 2 ತೆರೆಗಪ್ಪಳಿಸಿ ಬಾಕ್ಸಾಫೀಸ್ ದಾಖಲೆಗಳನ್ನು ಧೂಳಿಪಟ ಮಾಡಿತು. ವಾರಗಳಗಟ್ಟಲೆ ಕೆಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೀತು. ಪರಭಾಷಿಕರು ಕೂಡ ಕನ್ನಡ ಮಣ್ಣಿನ ಸಿನಿಮಾ ನೋಡಿ ಶಾಕ್ ಆದರು. ಬಾಲಿವುಡ್‌ ಸ್ಟಾರ್‌ಗಳು ಕೂಡ ಯಶ್ ಅಭಿಮಾನಿಗಳಾಗಿಬಿಟ್ಟರು. ಯಶ್ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. 6 ವರ್ಷಗಳ ಹಿಂದೆ ಶುರುವಾದ 'KGF' ಸಿನಿಮಾವನ್ನು ಪ್ರೇಕ್ಷಕರು ಇನ್ನು ಮರೆತ್ತಿಲ್ಲ.

'KGF' -3 ಮಾಡುವ ಬಗ್ಗೆ ಕೂಡ ಚಿತ್ರತಂಡ ಸುಳಿವು ನೀಡಿದೆ. ಆದರೆ ನಿರ್ದೇಶಕ ಪ್ರಶಾಂತ್ ನೀಲ್ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಯಶ್19 ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಯಶ್ ಮುಂದಿನ ಸಿನಿಮಾ ಅನೌನ್ಸ್‌ಮೆಂಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ಯಶ್ ಅಂದು ಮಾಡಿದ್ದ 'KGF' ಬಿಗಿನ್ಸ್‌ ಎನ್ನುವ ಟ್ವೀಟ್ ಈಗ ವೈರಲ್ ಆಗ್ತಿದೆ. ಬೇಗ ಮುಂದಿನ ಸಿನಿಮಾ ಅಪ್‌ಡೇಟ್ ಕೊಡಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.

More from Filmibeat

English summary
6 Years Since Yash Shared This selfie with KGF begins caption. Rocking Star Old Tweet Goes Viral. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X