»   » ಮುಹೂರ್ತ ಮುಗಿಸಿ ಮೈಸೂರಿಗೆ 'ಡ್ರಾಮಾ' ಪ್ರಯಾಣ

ಮುಹೂರ್ತ ಮುಗಿಸಿ ಮೈಸೂರಿಗೆ 'ಡ್ರಾಮಾ' ಪ್ರಯಾಣ

Posted By:
Subscribe to Filmibeat Kannada

ಯೋಗರಾಜ್ ಭಟ್ ನಿರ್ದೇಶಿಸಲಿರುವ ಡ್ರಾಮಾ ಚಿತ್ರದ ಮುಹೂರ್ತ ನಿನ್ನೆ ಇಸ್ಕಾನ್ ಪಕ್ಕದ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಯೋಗರಾಜ್ ಭಟ್ ಹಾಗೂ ಚಿತ್ರದ ನಾಯಕರಾದ ಯಶ್ ಮುಹೂರ್ತ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆಗಳಾಗಿ ಮಿಂಚುತ್ತಿದ್ದರು. ಚಿತ್ರದ ಮತ್ತೊಬ್ಬ ನಾಯಕ ನೀನಾಸಂ ಸತೀಶ್ ಕೂಡ ಮುಹೂರ್ತಕ್ಕೆ ಬಂದಿದ್ದರು. ಮುಹೂರ್ತ ಆಚರಿಸಿಕೊಂಡ ಚಿತ್ರತಂಡದ ಪ್ರತಿಯೊಬ್ಬರ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು.

ನಿನ್ನೆ ಡ್ರಾಮಾ ಮುಹೂರ್ತ ಆಚರಿಸಿಕೊಂಡ ಚಿತ್ರತಂಡ, ನಂತರ ಮೈಸೂರಿಗೆ ಪ್ರಯಾಣ ಬೆಳೆಸಿದೆ. ನಿನ್ನೆಯಿಂದ ಪ್ರಾರಂಬಿಸಲಾಗಿರುವ ಚಿತ್ರೀಕರಣದಲ್ಲಿ ಯಶ್ ಮತ್ತು ನೀನಾಸಂ ಸತೀಶ್ ಪಾಲ್ಗೊಳ್ಳುತ್ತಿದ್ದಾರೆ. ಇದೀಗ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಬ್ರೇಕಿಂಗ್ ನ್ಯೂಸ್ ' ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಾಯಕಿ ರಾಧಿಕಾ ಪಂಡಿತ್, ಮಾರ್ಚ್ 12ರಂದು ಡ್ರಾಮಾ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

ರಾಧಿಕಾ ಪಂಡಿತ್ ಅಲ್ಲದೇ ಇನ್ನೊಬ್ಬಳು ನಾಯಕಿಯಾಗಿ ಪ್ರಜ್ಞಾ ಕೂಡ ಇದ್ದಾರೆ. ಚಿತ್ರದಲ್ಲವರು ನೀನಾಸಂ ಸತೀಶ್ ಜೋಡಿ. ಉಳಿದಂತೆ ಸಾಕಷ್ಟು ಪೋಷಕ ನಟ-ನಟಿಯರು ಇದ್ದಾರೆ. ಈ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಪ್ರಕಾಶ್ ರೈ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿರುವುದು ವಿಶೇಷ ಎನಿಸಿದೆ. ತುಂಬಾ ವಿಭಿನ್ನವಾಗಿ ಕಥೆ, ಚಿತ್ರಕಥೆ ಮೂಡಿಬಂದಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Yograj Bhat movie Drama launched on March 5, 2012 at Ganapathi Temple, Near Iscon. Rocking Star Yash, Radhika Pandit, Neenasam Sathish and Prajna are in lead role. Rebel Star Ambarish and Prakash Rai acts in an important role. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X