ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ

By Rajendra

60th National Film Awards
ಅರುವತ್ತನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಸೋಮವಾರ (ಜ.18) ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ಕಹಾನಿ, ವಿಕ್ಕಿ ಡೋನರ್, ಗ್ಯಾಂಗ್ಸ್ ಆಫ್ ವಾಸೇಪುರ್, ಸುದೀಪ್ ಅಭಿನಯದ ತೆಲುಗಿನ ಈಗ ಚಿತ್ರಗಳು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ಪ್ರಶಸ್ತಿಗಳನ್ನು ಮೇ.3ರಂದು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಆಯ್ಕೆ ಸಮಿತಿಯು ಬಸು ಚಟರ್ಜಿ, ಅರುಣಾ ರಾಜೇ ಹಾಗೂ ಸ್ವಪ್ನ ಮುಲ್ಲಿಕ್ ಅವರನ್ನೊಳಗೊಂಡಿತ್ತು. ಈ ಬಾರಿ ಸ್ಪರ್ಧಿಸಿದ್ದ 38 ಚಿತ್ರಗಳಲ್ಲಿ 14 ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.

ಅತ್ಯುತ್ತಮ ಚೊಚ್ಚಲ ನಿರ್ದೇಶನಕ್ಕೆ ನೀಡುವ ಇಂದಿರಾಗಾಂಧಿ ಪ್ರಶಸ್ತಿಯನ್ನು ಚಿತ್ತಗಾಂಗ್ ಹಾಗೂ 101 ಛೋಡಿಯಾಂಗಲ್ (ಮಲಯಾಳಂ) ಚಿತ್ರಗಳು ಹಂಚಿಕೊಂಡಿವೆ. ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ವಿಕ್ಕಿ ಡೋನರ್ (ಹಿಂದಿ) ಹಾಗೂ ಉಸ್ತಾದ್ ಹೋಟೆಲ್ (ಮಲಯಾಳಂ) ಚಿತ್ರಗಳು ಹಂಚಿಕೊಂಡಿವೆ. ಪ್ರಶಸ್ತಿ ಪಟ್ಟಿ ಹೀಗಿದೆ.

* ಅತ್ಯುತ್ತಮ ಚಿತ್ರ: ಪಾನ್ ಸಿಂಗ್ ತೋಮರ್
* ಇಂದಿರಾಗಾಂಧಿ ಪ್ರಶಸ್ತಿ: ಚಿತ್ತಗಾಂಗ್ ಹಾಗೂ 101 ಛೋಡಿಯಾಂಗಲ್ (ಮಲಯಾಳಂ)
* ಅತ್ಯುತ್ತಮ ಜನಪ್ರಿಯ ಚಿತ್ರ: ವಿಕ್ಕಿ ಡೋನರ್ (ಹಿಂದಿ), ಉಸ್ತಾದ್ ಹೋಟೆಲ್ (ಮಲಯಾಳಂ)
* ನರ್ಗೀಸ್ ದತ್ ಪ್ರಶಸ್ತಿ (ರಾಷ್ಟೀಯ ಭಾವೈಕ್ಯತೆಗಾಗಿ ನೀಡುವ ಪ್ರಶಸ್ತಿ) : ಥಾನಿಚೆಲ್ಲಾಂಜಿ (ಮಲಯಾಳಂ)
* ಅತ್ಯುತ್ತಮ ಸಾಮಾಜಿಕ ಚಿತ್ರ: ಸ್ಪಿರಿಟ್ (ಮಲಯಾಳಂ)
* ಅತ್ಯುತ್ತಮ ಪರಿಸರ ಸಂರಕ್ಷಣೆ ಚಿತ್ರ: ಬ್ಲ್ಯಾಕ್ ಫಾರೆಸ್ಟ್ (ಮಲಯಾಳಂ)
* ಅತ್ಯುತ್ತಮ ಮಕ್ಕಳ ಚಿತ್ರ: ದೇಖ್ ಇಂಡಿಯನ್ ಸರ್ಕಸ್
* ಅತ್ಯುತ್ತಮ ಅನಿಮೇಷನ್ ಚಿತ್ರ: ಡೆಲ್ಲಿ ಸಫಾರಿ
* ಅತ್ಯುತ್ತಮ ನಿರ್ದೇಶನ : ಶಿವಾಜಿ ಲೋತನ್ ಪಾಟೀಲ್, ಚಿತ್ರ: ಧಾಗ್ (ಮರಾಠಿ)
* ಅತ್ಯುತ್ತಮ ನಟ : ಇರ್ಫಾನ್ (ಚಿತ್ರ: ಪಾನ್ ಸಿಂಗ್ ತೋಮರ್)
* ಅತ್ಯುತ್ತಮ ನಟಿ : ಉಷಾ ಜಾದವ್ (ಚಿತ್ರ: ಧಾಗ್ ಮರಾಠಿ)
* ಅತ್ಯುತ್ತಮ ಪೋಷಕ ನಟ: ಅನ್ನು ಕಪೂರ್ (ಚಿತ್ರ ವಿಕಿ ಡೋನರ್)
* ಅತ್ಯುತ್ತಮ ಪೋಷಕ ನಟಿ: ಡಾಲಿ ಅಹ್ಲುವಾಲಿಯಾ (ಚಿತ್ರ ವಿಕಿ ಡೋನರ್) ಹಾಗೂ ಕಲ್ಪನಾ (ಮಲಯಾಳಂ ಚಿತ್ರ: ಥನ್ನಿಚೆಲ್ಲಂಜನ್)
* ಅತ್ಯುತ್ತಮ ಬಾಲನಟ: ವೀರೇಂದ್ರ ಪ್ರತಾಪ್ (ದೇಖ್ ಇಂಡಿಯನ್ ಸರ್ಕಸ್) ಹಾಗೂ ಮಿನನ್ (ಮಲಯಾಳಂ ಚಿತ್ರ:101 ಛೋಡಿಯಾಂಗಲ್ )
* ಅತ್ಯುತ್ತಮ ಹಿನ್ನೆಲೆ ಗಾಯಕ: ಶಂಕರ್ ಮಹದೇವನ್ (ಚಿತ್ರ ಚಿತ್ತಗಾಂಗ್, ಹಾಡು : ಬೋಲೋ ನಾ)
* ಅತ್ಯುತ್ತಮ ಹಿನ್ನೆಲೆ ಗಾಯಕಿ: ಆರತಿ ಅಂಕ್ಲೇಕರ್ ಟೀಕೇಕರ್ (ಮರಾಠಿ ಚಿತ್ರ ಸಂಹಿತಾ)
* ಅತ್ಯುತ್ತಮ ಛಾಯಾಗ್ರಹಣ: ಸುಧೀರ್ ಪಲ್ಸಾನೆ (ಚಿತ್ರ: ಕೋ ಯಾದ್)
* ಅತ್ಯುತ್ತಮ ಚಿತ್ರಕಥೆ: ಸುಜಯ್ ಘೋಷ್ (ಚಿತ್ರ ಕಹಾನಿ)
* ಅತ್ಯುತ್ತಮ ಧ್ವನಿಗ್ರಹಣ: ರಾಧಾಕೃಷ್ಣ ಎಸ್ (ಮಲಯಾಳಂ ಚಿತ್ರ: ಅನ್ನಯುಂ ರಸೂಲುಂ)
* ಅತ್ಯುತ್ತಮ ಸಂಕಲನ: ನಮ್ರತಾ ರಾವ್ (ಚಿತ್ರ ಕಹಾನಿ)
* ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಬೂಂತಾವಿ 'ಥಾರ್' ತವಿಪಸಸ್ ಹಾಗೂ ಲಾಲ್ ಗುಡಿ ಎನ್ ಇಳಯರಾಜಾ (ತಮಿಳು ಚಿತ್ರ ವಿಶ್ವರೂಪಂ)
* ಅತ್ಯುತ್ತಮ ವಸ್ತ್ರ ವಿನ್ಯಾಸ: ಪೂರ್ಣಿಮಾ ರಾಮಸ್ವಾಮಿ (ತಮಿಳು ಚಿತ್ರ ಪರದೇಸಿ)
* ಅತ್ಯುತ್ತಮ ಮೇಕಪ್ ಕಲಾವಿದ: ರಾಜ (ತಮಿಳು ಚಿತ್ರ ವಝಾಕ್ಕೂನ್)
* ಅತ್ಯುತ್ತಮ ಸಂಗೀತ ನಿರ್ದೇಶನ: ಶೈಲೇಂದರ್ ಬಾರ್ವೆ (ಮರಾಠಿ ಚಿತ್ರ ಸಂಹಿತಾ) ಹಾಗೂ ಬಿಜಿಬಲ್ (ಮಲಯಾಳಂ ಚಿತ್ರ ಕಲಿಯಾಚನ್)
* ಅತ್ಯುತ್ತಮ ಗೀತ ಸಾಹಿತ್ಯ: ಪ್ರಸೂನ್ ಜೋಷಿಪರ್ (ಚಿತ್ರ ಚಿತ್ತಗಾಂಗ್ ಹಾಡು ಬೋಲೋ ನಾ)
* ತೀರ್ಪುಗಾರರ ವಿಶೇಷ ಪ್ರಶಸ್ತಿ: ರಿತುಪರ್ಣ ಘೋಷ್ (ಬಂಗಾಳಿ ಚಿತ್ರ ಚಿತ್ರಾಂಗದ), ನವಾಜುದ್ದೀನ್ ಸಿದ್ಧಿಕಿ (ಕಹಾನಿ, ಗ್ಯಾಂಗ್ಸ್ ಆಫ್ ವಾಸೇಪುರ್, ದೇಖ್ ಇಂಡಿಯನ್ ಸರ್ಕಸ್)
* ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್ : ಮಕುತಾ VFX (ತೆಲುಗು ಚಿತ್ರ ಈಗ)
* ಅತ್ಯುತ್ತಮ ನೃತ್ಯ ನಿರ್ದೇಶನ: ಪಂಡಿತ್ ಬಿರ್ಜು ಮಹಾರಾಜ್ (ತಮಿಳು ಚಿತ್ರ ವಿಶ್ವರೂಪಂ)
* ಅತ್ಯುತ್ತಮ ಅಸ್ಸಾಮಿ ಚಿತ್ರ: ಬಾಂಧೋನ್
* ಅತ್ಯುತ್ತಮ ಬಂಗಾಳಿ ಚಿತ್ರ: ಶಬ್ದೋ
* ಅತ್ಯುತ್ತಮ ಗುಜರಾತಿ ಚಿತ್ರ: ದಿ ಗುಡ್ ರೋಡ್
* ಅತ್ಯುತ್ತಮ ಹಿಂದಿ ಚಿತ್ರ: ಫಿಲ್ಮಿಸ್ತಾನ್
* ಅತ್ಯುತ್ತಮ ಕನ್ನಡ ಚಿತ್ರ: ಭಾರತ್ ಸ್ಟೋರ್ಸ್ (ನಿರ್ದೇಶನ: ಪಿ ಶೇಷಾದ್ರಿ, ನಿರ್ಮಾಣ: ಬಸಂತ್ ಕುಮಾರ್ ಪಾಟೀಲ್)
* ಅತ್ಯುತ್ತಮ ಮಲಯಾಳಂ ಚಿತ್ರ: ಸೆಲ್ಲುಲಾಯ್ಡ್
* ಅತ್ಯುತ್ತಮ ಮಣಿಪುರಿ ಚಿತ್ರ: ಲಿಪಾಕ್ ಲಿ
* ಅತ್ಯುತ್ತಮ ಮರಾಠಿ ಚಿತ್ರ: ಇನ್ವೆಷ್ಟ್ ಮೆಂಟ್
* ಅತ್ಯುತ್ತಮ ಪಂಜಾಬಿ ಚಿತ್ರ: ನಬರ್
* ಅತ್ಯುತ್ತಮ ತಮಿಳು ಚಿತ್ರ: ವಝಕ್ಕುನ್ 18/9
* ಅತ್ಯುತ್ತಮ ತೆಲುಗು ಚಿತ್ರ: ಈಗ
* ಅತ್ಯುತ್ತಮ ಉರ್ದು ಚಿತ್ರ: ಹರುದ್
* ಅತ್ಯುತ್ತಮ ಇಂಗ್ಲಿಷ್ ಚಿತ್ರ: ಲೆಸೆನ್ಸ್ ಇನ್ ಫರ್ಗೆಟಿಂಗ್
* ಅತ್ಯುತ್ತಮ ಮಿಸ್ಸಿಂಗ್ ಚಿತ್ರ: ಕೋ : ಯಾದ್

More from Filmibeat

English summary
The prestigious 60th National Film Awards for the year 2012 were announced here today at a joint Press Conference addressed by the Chairpersons of the three juries, Shri Basu Chatterjee for Feature Films, Ms. Aruna Raje for Non-Feature Films and Shri Swapan Mullick for Best Writing on Cinema.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X