ಪಿ ಶೇಷಾದ್ರಿ ಅವರ 'ಡಿಸೆಂಬರ್ 1'ಕ್ಕೆ ರಾಷ್ಟ್ರಪ್ರಶಸ್ತಿ ಗರಿ

By Rajendra

2013ನೇ ಸಾಲಿನ ಪ್ರತಿಷ್ಠಿತ ಅರುವತ್ತೊಂದನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಬುಧವಾರ (ಏ.16) ಘೋಷಣೆಯಾಗಿವೆ. ಚಲನಚಿತ್ರೋತ್ಸವ ನಿರ್ದೇಶನಾಲಯ ಈ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಅತ್ಯುತ್ತಮ ಭಾರತೀಯ ಹಾಗೂ ಪ್ರಾದೇಶಿಕ ಚಿತ್ರಗಳನ್ನು ಆಯ್ಕೆ ಮಾಡಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಪಿ ಶೇಷಾದ್ರಿ ನಿರ್ದೇಶನದ ಕನ್ನಡ ಚಿತ್ರ 'ಡಿಸೆಂಬರ್ 1'ಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಒಲಿದಿದೆ. ಅದೇ ರೀತಿ ಪಿ ಶೇಷಾದ್ರಿ ಅವರು ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪಂಚಾಕ್ಷರಿ ಅವರು ಪ್ರಕೃತಿ ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರಕಥೆ (Adopted) ಪ್ರಶಸ್ತಿಗೆ ಭಾಜನರಾಗಿದ್ದಾರೆ. [ಅನಂತಮೂರ್ತಿ ಕುರಿತು ಗಿರೀಶ್ ಕಾಸರವಳ್ಳಿ ಚಿತ್ರ]

ಮೇ 3, 2014ರಂದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅತ್ಯಮೂಲ್ಯ ಸೇವೆಗಾಗಿ ಕೊಡುವ ಅತ್ಯುನ್ನತ ಸಿನಿಮಾ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಅಂದೇ ಪ್ರದಾನ ಮಾಡಲಾಗುತ್ತದೆ. ಈ ಬಾರಿ ಖ್ಯಾತ ಗೀತಸಾಹಿತಿ, ಕವಿ, ಲೇಖಕ ಗುಲ್ಜಾರ್ ಅವರನ್ನು ಆಯ್ಕೆ ಮಾಡಲಾಗಿದೆ. [ಗೀತಸಾಹಿತಿ ಗುಲ್ಜಾರ್ ಅವರಿಗೆ ಪ್ರತಿಷ್ಠಿತ ಫಾಲ್ಕೆ ಪ್ರಶಸ್ತಿ]

ಸ್ವರ್ಣ ಕಮಲ ಪ್ರಶಸ್ತಿಯು ಅತ್ಯುತ್ತಮ ಸಿನಿಮಾ ಪುಸ್ತಕ 'ಸಿನಿಮಾ ಕಾ ಸಿನಿಮಾ' (ತೆಲುಗು) ಹಾಗೂ ಅತ್ಯುತ್ತಮ ವಿಮರ್ಶೆ - ಅಲ್ಕಾ ಸಹ್ನಿ ಪಾತ್ರರಾಗಿದ್ದಾರೆ. ಉಳಿದ ಪ್ರಶಸ್ತಿ ವಿವರಗಳು ಕೆಳಕಂಡಂತಿವೆ. ಸ್ವರ್ಣ ಕಮಲ ಪ್ರಶಸ್ತಿಯು ರು.75 ಸಾವಿರ ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಒಳಗೊಂಡಿರುತ್ತದೆ.

61st National Film Awards Announced

ಅತ್ಯುತ್ತಮ ನಟಿ: ಗೀತಾಂಜಲಿ ಥಾಪಾ (ಲೈಯರ್ಸ್ ಡೈಸ್)
ಅತ್ಯುತ್ತಮ ನಟ: ರಾಜ್ ಕುಮಾರ್ ರಾವ್ (ಶಾಹಿದ್), ಸೌರವ್ ವೆಂಜರಾಮುಡು (ಮಲಯಾಳಂ)
ಅತ್ಯುತ್ತಮ ಚಿತ್ರ:
ಷಿಪ್ ಆಫ್ ಥೀಸಿಸ್ (ಇಂಗ್ಲಿಷ್ ಹಿಂದಿ)
ಅತ್ಯುತ್ತಮ ಛಾಯಾಗ್ರಹಣ: ಮಸ್ತೋ ಕ ಜುಂಡ್ - ಭಾಗ್ ಮಿಲ್ಕಾ ಭಾಗ್
ಅತ್ಯುತ್ತಮ ಪ್ರಸಾದನ: ಜತೀಶ್ವರ್
ಅತ್ಯುತ್ತಮ ವಸ್ತ್ರವಿನ್ಯಾಸ: ಜತೀಶ್ವರ್
ಅತ್ಯುತ್ತಮ ಬಾಲ ನಟ: ಸೋಮನಾಥ್ ಅವಘಾದೆ (ಫಾಂಡ್ರಿ)
ಅತ್ಯುತ್ತಮ ಪೋಷಕ ನಟ: ಸೌರಭ್ ಶುಕ್ಲಾ, ಜಾಲಿ ಎಲ್ಎಲ್ ಬಿ
ಅತ್ಯುತ್ತಮ ಪೋಷಕ ನಟಿ:
ಅಮ್ರುತಾ ಸುಭಾಷ್ (ಮರಾಠಿ), ಅಡಿಯಾ ಎಲ್ ಕಶೆಫ್ (ಇಂಗ್ಲಿಷ್-ಹಿಂದಿ)
ಅತ್ಯುತ್ತಮ ನಿರ್ದೇಶಕ: ಹನ್ಸಾಲ್ ಮೆಹ್ತಾ (ಶಾಹಿದ್)
ಅತ್ಯುತ್ತಮ ರಾಷ್ಟ್ರೀಯ ಭಾವೈಕ್ಯತೆಗಾಗಿ ನೀಡುವ ನರ್ಗೀಸ್ ದತ್ ಪ್ರಶಸ್ತಿ: ತಲೈ ಮುರುಗಲ್ (ತಮಿಳು)
ಅತ್ಯುತ್ತಮ ಮನರಂಜನಾತ್ಮಕ ಚಿತ್ರ: ಭಾಗ್ ಮಿಲ್ಕಾ ಭಾಗ್
ಅತ್ಯುತ್ತಮ ಮಕ್ಕಳ ಚಿತ್ರ: ಕಫಲ್ (ಹಿಂದಿ)
ಅತ್ಯುತ್ತಮ ವಿಜ್ಞಾನ ಮತ್ತು ತಂತ್ರಜ್ಞಾನದ ಚಿತ್ರ: ದಿ ಪ್ಯಾಡ್ ಪೈಪರ್
ಅತ್ಯುತ್ತಮ ಪರಿಸರ ಚಿತ್ರ ಕೃಷಿ ಒಳಗೊಂಡಂತೆ: ಫಾರೆಸ್ಟಿಂಗ್ ಲೈಫ್
ಅತ್ಯುತ್ತಮ ಶೈಕ್ಷಣಿಕ ಚಿತ್ರ: ದಿ ಕ್ವಾಂಟಮ್ ಇಂಡಿಯನ್ಸ್
ಅತ್ಯುತ್ತಮ ತನಿಖಾ ಚಿತ್ರ: ಕತಿಯಾಬಾಝ್

More from Filmibeat

English summary
The 61st National Film Awards for the year 2013 in the Feature Film category, Non-Feature Film category and Best Writing on Cinema were announced on 16th April at a press conference held at the National Media Centre, New Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X