twitter
    For Quick Alerts
    ALLOW NOTIFICATIONS  
    For Daily Alerts

    ದಕ್ಷಿಣ ಫಿಲಂಫೇರ್ : ಪ್ರಶಸ್ತಿಗೆ ಕನ್ನಡ ಚಿತ್ರಗಳ ಪೈಪೋಟಿ

    |

    ಸಿನಿಮಾ ಜಗತ್ತಿನ ಅತಿ ದೊಡ್ಡ ಪ್ರಶಸ್ತಿಯಾದ ಫಿಲಂಫೇರ್ ಅವಾರ್ಡ್ಸ್ (ಸೌತ್) ನಾಮ ನಿರ್ದೇಶಿತರ ಪಟ್ಟಿಯನ್ನು (2014ರ ಸಾಲಿನ) ಪ್ರಕಟಿಸಲಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗಾಗಿ ನೀಡುವ ಈ ಪ್ರಶಸ್ತಿ ಪ್ರಧಾನ ಸಮಾರಂಭ ಚೆನ್ನೈ ನಗರದಲ್ಲಿ ನಡೆಯಲಿದೆ.

    ಐಡಿಯಾ 62ನೇ ಫಿಲಂಫೇರ್ ಕನ್ನಡ ಚಿತ್ರಗಳ ನಾಮಿನೇಶನ್ ಪಟ್ಟಿಯಲ್ಲಿ ಪುನೀತ್ ರಾಜಕುಮಾರ್, ರಕ್ಷಿತ್ ಶೆಟ್ಟಿ ಮತ್ತು ರಾಕಿಂಗ್ ಸ್ಟಾರ್ ಯಶ್ ಎರಡು ವಿಭಾಗದಲ್ಲಿ ಸ್ಪರ್ಧೆಯಲ್ಲಿರುವುದು ವಿಶೇಷ. (ಅಂಬಿಗೆ ಫಿಲಂಫೇರ್ ಜೀವಮಾನ ಸಾಧನೆ ಪ್ರಶಸ್ತಿ)

    1954ರಲ್ಲಿ ಫಿಲಂಫೇರ್ ಪ್ರಶಸ್ತಿ ನೀಡಲು ಆರಂಭವಾಗಿತ್ತಾದರೂ ಕನ್ನಡ ಚಿತ್ರಗಳಿಗೆ ಪ್ರಶಸ್ತಿ ನೀಡಲು ಆರಂಭವಾಗಿದ್ದು 1970ರಲ್ಲಿ. ಜನಮತ ಅಭಿಪ್ರಾಯ ಮತ್ತು ಕಮಿಟಿ ಸದಸ್ಯರ ಮೂಲಕ ಪ್ರಶಸ್ತಿಯನ್ನು ನೀಡಲಾಗುವುದು.

    ಫಿಲಂಫೇರ್ ಸೌತಿನ ಇದುವರೆಗಿನ ಇತಿಹಾಸದಲ್ಲಿ ಕಮಲಹಾಸನ್ 17 ಸಲ ಪ್ರಶಸ್ತಿ ಪಡೆದು ದಾಖಲೆ ಸೃಷ್ಟಿಸಿದ್ದರೆ, ವರನಟ ಡಾ.ರಾಜ್ ಕುಮಾರ್ ಅವರಿಗೆ ಎಂಟು ಸಲ ಫಿಲಂಫೇರ್ ಕೃಷ್ಣ ಸುಂದರಿ ಒಲಿದಿದ್ದಳು.

    ಇನ್ನು ನಟಿಯರಾದ ಲಕ್ಷ್ಮಿ, ಸರಿತಾ, ಸುಹಾಸಿನಿ ಹಾಗೂ ರೇವತಿಯವರಿಗೂ ತಲಾ ಆರು ಬಾರಿ ಪ್ರಶಸ್ತಿ ಲಭಿಸಿದೆ. (ಫಿಲಂಫೇರ್ ಪ್ರಶಸ್ತಿಗೆ ದರ್ಶನ್ ಗೈರಾಗಲು ಕಾರಣ)

    ಐಡಿಯಾ 62ನೇ ಫಿಲಂಫೇರ್ ಪ್ರಶಸ್ತಿ ಕನ್ನಡ ಚಿತ್ರಗಳ ನಾಮಿನೇಶನಿನ ವಿವಿಧ ಕ್ಯಾಟಗರಿಯಲ್ಲಿರುವ ಚಿತ್ರ/ನಟ/ನಟಿ/ತಂತ್ರಜ್ಞರು ಯಾರು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

    ಅತ್ಯುತ್ತಮ ಚಿತ್ರ

    ಅತ್ಯುತ್ತಮ ಚಿತ್ರ

    1. ದೃಶ್ಯ
    2. ಗಜಕೇಸರಿ
    3. ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ
    4. ಉಗ್ರಂ
    5. ಉಳಿದವರು ಕಂಡಂತೆ

    ಅತ್ಯುತ್ತಮ ನಿರ್ದೇಶಕ

    ಅತ್ಯುತ್ತಮ ನಿರ್ದೇಶಕ

    1. ಪ್ರಕಾಶ್ ರಾಜ್ (ಒಗ್ಗರಣೆ)
    2. ಪ್ರಶಾಂತ್ ನೀಲ್ (ಉಗ್ರಂ)
    3. ರಕ್ಷಿತ್ ಶೆಟ್ಟಿ (ಉಳಿದವರು ಕಂಡಂತೆ)
    4. ಎಸ್ ಕೃಷ್ಣ (ಗಜಕೇಸರಿ)
    5. ಸಂತೋಷ್ ಆನಂದರಾಮ್ (ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ)

    ಅತ್ಯುತ್ತಮ ನಟ

    ಅತ್ಯುತ್ತಮ ನಟ

    1. ಪುನೀತ್ ರಾಜಕುಮಾರ್ (ಪವರ್ ***)
    2. ರಕ್ಷಿತ್ ಶೆಟ್ಟಿ (ಉಳಿದವರು ಕಂಡಂತೆ)
    3. ಶರಣ್ (ಅಧ್ಯಕ್ಷ)
    4. ಶ್ರೀಮುರಳಿ (ಉಗ್ರಂ)
    5. ಯಶ್ (ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ)

    ಅತ್ಯುತ್ತಮ ನಟಿ

    ಅತ್ಯುತ್ತಮ ನಟಿ

    1. ಹರಿಪ್ರಿಯ (ಉಗ್ರಂ)
    2. ಕೃತಿ ಕರಬಂದ (ಸೂಪರ್ ರಂಗ)
    3. ರಾಧಿಕಾ ಪಂಡಿತ್ (ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ)
    4. ರಾಗಿಣಿ ದ್ವಿವೇದಿ (ರಾಗಿಣಿ ಐಪಿಎಸ್)
    5. ಶ್ವೇತಾ ಶ್ರೀವಾಸ್ತವ್ (ಫೇರ್ ಎಂಡ್ ಲವ್ಲಿ)

    ಅತ್ಯುತ್ತಮ ಪೋಷಕ ನಟ

    ಅತ್ಯುತ್ತಮ ಪೋಷಕ ನಟ

    1. ಅಚ್ಯುತ್ ಕುಮಾರ್ (ದೃಶ್ಯ)
    2. ಹರೀಶ್ ರಾಜ್ (ಪವರ್ ***)
    3. ಕಿಶೋರ್ (ಉಳಿದವರು ಕಂಡಂತೆ)
    4. ತಿಲಕ್ ( ಉಗ್ರಂ)
    5. ವಿ ರವಿಚಂದ್ರನ್ (ಮಾಣಿಕ್ಯ)

    ಅತ್ಯುತ್ತಮ ಪೋಷಕ ನಟಿ

    ಅತ್ಯುತ್ತಮ ಪೋಷಕ ನಟಿ

    1. ಆಶಾ ಶರತ್ ( ದೃಶ್ಯ)
    2. ಮಾಳವಿಕ (ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ)
    3. ಪದ್ಮಜಾ ರಾವ್ (ಉಗ್ರಂ)
    4. ಸಂಯುತ ಹೊರನಾಡು (ಒಗ್ಗರಣೆ)
    5. ಸುಮಿತ್ರಾ (ಶಿವಾಜಿನಗರ)

    ಅತ್ಯುತ್ತಮ ಸಂಗೀತ ನಿರ್ದೇಶಕ

    ಅತ್ಯುತ್ತಮ ಸಂಗೀತ ನಿರ್ದೇಶಕ

    1. ಅರ್ಜುನ್ ಜನ್ಯ (ಅಧ್ಯಕ್ಷ)
    2. ಅಜನೀಶ್ ಲೋಕನಾಥ್ (ಉಳಿದವರು ಕಂಡಂತೆ)
    3. ಮಣಿಶರ್ಮಾ (ನಿನ್ನಿಂದಲೇ)
    4. ರವಿ ಬಸ್ರೂರು (ಉಗ್ರಂ)
    5. ವಿ ಹರಿಕೃಷ್ಣ (ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ)

    ಅತ್ಯುತ್ತಮ ಸಾಹಿತಿ

    ಅತ್ಯುತ್ತಮ ಸಾಹಿತಿ

    1. ಕೆ ಕಲ್ಯಾಣ್ (ಜೀವಾ.. ಮಾಣಿಕ್ಯ)
    2. ಕವಿರಾಜ್ (ನಿಂತೇ ನಿಂತೇ.. ನಿನ್ನಿಂದಲೇ)
    3. ರಕ್ಷಿತ್ ಶೆಟ್ಟಿ ( ಗಾತಿಯಾ..ಉಳಿದವರು ಕಂಡಂತೆ)
    4. ಯೋಗರಾಜ್ ಭಟ್ ( ಓಪನ್ ಹೇರು.. ಅಧ್ಯಕ್ಷ)
    5. ವಿ ನಾಗೇಂದ್ರ ಪ್ರಸಾದ್ ( ಕಣ್ಣಲ್ಲಿ.. ಅಂಬರೀಶ)

    ಅತ್ಯುತ್ತಮ ಗಾಯಕ

    ಅತ್ಯುತ್ತಮ ಗಾಯಕ

    1. ಕೈಲಾಶ್ ಖೇರ್ ( ಈ ಜನುಮವೇ.. ಒಗ್ಗರಣೆ)
    2. ಪುನೀತ್ ರಾಜಕುಮಾರ್ ( ಗುರುವಾರ ಸಂಜೆ.. ಪವರ್ ***)
    3. ವಿಜಯ್ ಪ್ರಕಾಶ್ (ಗಾತಿಯಾ.. ಉಳಿದವರು ಕಂಡಂತೆ)
    4. ಸೋನು ನಿಗಂ (ರಿಂಗಾಗಿದೆ.. ಫೇರ್ ಎಂಡ್ ಲವ್ಲಿ)
    5. ಯಶ್ (ಅಣ್ತಮ್ಮಾ.. ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ)

    ಅತ್ಯುತ್ತಮ ಗಾಯಕಿ

    ಅತ್ಯುತ್ತಮ ಗಾಯಕಿ

    1. ಅನುರಾಧ ಭಟ್ ( ಚನ್ನಚನ್ನ.. ಉಗ್ರಂ)
    2. ಅರ್ಚನಾ ರವಿ (ಕಣ್ಣಲ್ಲೇ.. ಅಧ್ಯಕ್ಷ)
    3. ಮಾಲತಿ (ಪಂತರ ಪಂತ.. ಮಾಣಿಕ್ಯ)
    4. ಶ್ರೇಯಾ ಘೋಷಾಲ್ (ಕಾಕಿಗ್ ಬಣ್ಣ.. ಉಳಿದವರು ಕಂಡಂತೆ)
    5. ಸಿಂಚನಾ ದೀಕ್ಷಿತ್ (ಕರೆಂಟ್ ಹೋದ ಟೈಮಲ್ಲಿ.. ಲವ್ ಇನ್ ಮಂಡ್ಯ)

    English summary
    The nominations for the 62nd Film fare South 2014 Kannada. The award function will be held at Chennai.
    Friday, June 5, 2015, 16:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X