ಅಮಿತಾಬ್ ಬಚ್ಚನ್, ಕಂಗನಾಗೆ ರಾಷ್ಟ್ರ ಪ್ರಶಸ್ತಿ

By Mahesh

2015ನೇ ಸಾಲಿನ ಪ್ರತಿಷ್ಠಿತ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೋಮವಾರ (ಮಾರ್ಚ್ 28)ದಂದು ಘೋಷಣೆಯಾಗಿವೆ. ಅಮಿತಾಬ್ ಬಚ್ಚನ್ ಶ್ರೇಷ್ಠ ನಟ, ಕಂಗನಾ ರನೌತ್ ಶ್ರೇಷ್ಠ ನಟಿ ಪ್ರಶಸ್ತಿ ಗೆದ್ದಿದ್ದಾರೆ.

ನಿರ್ದೇಶಕ ರಮೇಶ್ ಸಿಪ್ಪಿ ನೇತೃತ್ವದ 11 ಜನರ ಆಯ್ಕೆದಾರರ ಸಮಿತಿ ತನ್ನ ಶಿಫಾರಸ್ಸನ್ನು ವಾರ್ತಾ ಸಚಿವ ಅರುಣ್ ಜೇಟ್ಲಿ ಅವರಿಗೆ ಹಸ್ತಾಂತರಿಸಿದೆ. ಬಾಹುಬಲಿ, ಬಾಜಿರಾವ್ ಮಸ್ತಾನಿ, ಪೀಕು, ತನು ವೆಡ್ಸ್ ಮನು 2, ಎನ್ ಎಚ್ 10, ಭಜರಂಗಿ ಭೈಜಾನ್, ದಮ್ ಲಾಗ ಕೆ ಹೈಶಾ ಮುಂತಾದ ಚಿತ್ರಗಳು ಪ್ರಶಸ್ತಿ ಪಟ್ಟಿಯಲ್ಲಿವೆ.

63rd National Film Awards Announced, Amitabh, Kangana Best

ಚಲನಚಿತ್ರೋತ್ಸವ ನಿರ್ದೇಶನಾಲಯ ಈ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಅತ್ಯುತ್ತಮ ಭಾರತೀಯ ಹಾಗೂ ಪ್ರಾದೇಶಿಕ ಚಿತ್ರಗಳನ್ನು ಆಯ್ಕೆ ಮಾಡಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. [ಪಿ ಶೇಷಾದ್ರಿ ಅವರ 'ಡಿಸೆಂಬರ್ 1'ಕ್ಕೆ ರಾಷ್ಟ್ರಪ್ರಶಸ್ತಿ ಗರಿ]

ಪ್ರಶಸ್ತಿ ವಿಜೇತರ ಪಟ್ಟಿ :
* ಅತ್ಯುತ್ತಮ ನಟಿ: ಕಂಗನಾ ರನೌತ್ (ತನು ವೆಡ್ಸ್ ಮನು ರಿಟರ್ನ್ಸ್)
* ಅತ್ಯುತ್ತಮ ನಟ: ಅಮಿತಾಬ್ ಬಚ್ಚನ್ (ಪೀಕು)
* ಅತ್ಯುತ್ತಮ ಚಿತ್ರ: ಬಾಹುಬಲಿ (ಬಹುಭಾಷಾ ಚಿತ್ರ)
* ಅತ್ಯುತ್ತಮ ನಿರ್ದೇಶನ : ಸಂಜಯ್ ಲೀಲಾ ಬನ್ಸಾಲಿ (ಬಾಜಿರಾವ್ ಮಸ್ತಾನಿ)
* ಶ್ರೇಷ್ಠ ಕನ್ನಡ ಚಲನಚಿತ್ರ: ತಿಥಿ

* ಅತ್ಯುತ್ತಮ ಛಾಯಾಗ್ರಹಣ: ಸುದೀಪ್ ಚಟರ್ಜಿ, ಬಾಜಿರಾವ್ ಮಸ್ತಾನಿ ಚಿತ್ರ
* ಅತ್ಯುತ್ತಮ ನೃತ್ಯ ಸಂಯೋಜನೆ: ರೆಮೋ ಡಿಸೋಜಾ, ದೀವಾನಿ ಮಸ್ತಾನಿ ಹಾಡು, ಬಾಜಿರಾವ್ ಮಸ್ತಾನಿ ಚಿತ್ರ
* ಅತ್ಯುತ್ತಮ ಹಿನ್ನಲೆ ಸಂಗೀತ: ತಾತೈ ತಾಪ್ಪಟ್ಟಾಯಿ ತಮಿಳು ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಿದ ಇಳಯರಾಜ.
* ಅತ್ಯುತ್ತಮ ಸಂಗೀತ ನಿರ್ದೇಶನ: ಎಂ ಜಯಚಂದ್ರನ್, ಕಾಥಿರುನ್ನು ಹಾಡು, ಎನ್ನು ನಿಂಟೆ ಮೊಯಿದ್ದೀನ್ ಮಲಯಾಳಂ ಚಿತ್ರ
* ಅತ್ಯುತ್ತಮ ಪ್ರಸಾದನ: ನಾನಕ್ ಶಾ ಫಕೀರ್
* ಅತ್ಯುತ್ತಮ ವಸ್ತ್ರವಿನ್ಯಾಸ: ನಾನಕ್ ಶಾ ಫಕೀರ್
* ಅತ್ಯುತ್ತಮ ಸಂಕಲನ: ದಿವಂಗತ ಕಿಶೋರ್ ಟಿ.ಇ ತಮಿಳು ಚಿತ್ರ ವಿಸಾರಣೆ

* ಅತ್ಯುತ್ತಮ ಚಿತ್ರಕಥೆ: ಜೂಹಿ ಚತುರ್ವೇದಿ(ಪೀಕು), ಹಿಮಾಂಶು ಶರ್ಮ (ತನು ವೆಡ್ಸ್ ಮನು ರಿಟರ್ನ್ಸ್)
* ಅತ್ಯುತ್ತಮ ಗಾಯಕ: ಮಹೇಶ್ ಕಾಳೆ(ಕತ್ಯಾರ್ ಕಾಲೆಜಾತ್ ಘುಸ್ಲಿ)
* ಅತ್ಯುತ್ತಮ ಮೂಲಕಥೆ: ಜೂಹಿ ಚತುರ್ವೇದಿ(ಪೀಕು), ಹಿಮಾಂಶು ಶರ್ಮ (ತನು ವೆಡ್ಸ್ ಮನು ರಿಟರ್ನ್ಸ್)
* ಅತ್ಯುತ್ತಮ ಗಾಯಕಿ: ಮೊನಾಲಿ ಠಾಕೂರ್, ಮೊಹ್ ಮೊಹ್ ಕೆ ಧಾಗೆ (ಧಮ್ ಲಗಾ ಕೆ ಹೈಶಾ)
* ಅತ್ಯುತ್ತಮ ಪೋಷಕ ನಟ: ಸಮುತ್ತಿರಕನಿ, ವಿಸಾರಣೆ
* ಅತ್ಯುತ್ತಮ ಪೋಷಕ ನಟಿ: ತಾನ್ವಿ ಆಜ್ಮಿ, ಬಾಜಿರಾವ್ ಮಸ್ತಾನಿ

* ಅತ್ಯುತ್ತಮ ರಾಷ್ಟ್ರೀಯ ಭಾವೈಕ್ಯತೆಗಾಗಿ ನೀಡುವ ನರ್ಗೀಸ್ ದತ್ ಪ್ರಶಸ್ತಿ: ನಾನಕ್ ಶಾ ಫಕೀರ್
* ಅತ್ಯುತ್ತಮ ಮನರಂಜನಾತ್ಮಕ ಚಿತ್ರ: ಬಾಜಿರಾವ್ ಮಸ್ತಾನಿ
* ಅತ್ಯುತ್ತಮ ಮಕ್ಕಳ ಚಿತ್ರ: ಡುರೊಂಟೋ
* ಅತ್ಯುತ್ತಮ ಪರಿಸರ ಚಿತ್ರ : ವಾಳಿಯಾ ಚಿರಕುಲ್ಲಾ ಪಕ್ಷಿಕಲ್
* ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರ: ನಿರ್ಣಾಯಕಂ

* ಇಂದಿರಾಗಾಂಧಿ ಭಾವೈಕತ್ಯಾ ಪ್ರಶಸ್ತಿ : ನೀರಜ್ ಘಾಯ್ವನ್, ಮಸಾನ್
* ವಿಶೇಷ ಜ್ಯೂರಿ ಪ್ರಶಸ್ತಿ: ಕಲ್ಕಿ ಕೋಚ್ಲಿನ್ (ಮಾಗರೀಟಾ ವಿತ್ ಎ ಸ್ಟ್ರಾ)
* ಅತ್ಯುತ್ತಮ ಬಾಲ ನಟ: ಗೌರವ್ ಮೆನನ್

* ವಿಶೇಷ ಪ್ರಶಸ್ತಿ: ರಿಂಕು ರಾಜ್ ಗುರು ಸೈರಾತ್, ಜಯಸೂರ್ಯ, ರಿತಿಕಾ ಸಿಂಗ್

ಪ್ರಾದೇಶಿಕ ಚಿತ್ರಗಳು
ಬೋಡೊ ಚಿತ್ರ: ದಾಯು ಹುಡುನಿ ಮಿಠಾಯಿ
ಖಾಸಿ ಚಿತ್ರ: ಒನಾಥಾಯ್
ಹರ್ಯಾನ್ವಿ ಚಿತ್ರ: ಸತ್ ರಂಗಿ
ವಾಂಚೋ ಚಿತ್ರ: ಹೆಡ್ ಹಂಟರ್
ಮಣಿಪುರಿ: ಐಬುಸು ಯಾಯೋಹಂಬಿಯು
ಮಿಜೋರಾಂ: ಕಿಮಾಸ್ ಲೊಡೆ ಬಿಯಾಂಡ್ ದಿ ಕ್ಲಾಸ್
ಮೈಥಾಲಿ: ಮಿಥಿಲಾ ಮಖಾನ್
ಸಂಸ್ಕೃತ: ಪ್ರಿಯಮನಸಂ
ತೆಲುಗು: ಕಾಂಚೆ
ತಮಿಳು: ವಿಸಾರಣೆ
ಪಂಜಾಬಿ: ಚೌತಿ ಕೂತ್
ಒಡಿಯಾ: ಪಹಡಾ ರಾ ಲೂಹಾ
ಮರಾಠಿ: ರಿಂಗನ್
ಮಲಯಾಳಂ: ಪಥೇಮಾರಿ
ಕೊಂಕಣಿ: ಎನಿಮಿ


More from Filmibeat

English summary
The 63rd National Film Awards for the year 2015 in the Feature Film category, Non-Feature Film category and Best Writing on Cinema were announced on March 28, 2016. Amitabh Bachchan wins Best Actor for Piku and Kangana Ranaut for Tanu Weds Manu 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X