For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಂಬರೀಶ್ ರವರ ಅಪರೂಪದ ಭಾವಚಿತ್ರಗಳು

  By Harshitha
  |

  ಡಾ.ರಾಜ್ ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ನಂತರ ಕನ್ನಡದ ಇನ್ನೊಬ್ಬ ಸೂಪರ್ ಸ್ಟಾರ್ ಅಂದ್ರೆ ಅದು ರೆಬೆಲ್ ಸ್ಟಾರ್ ಅಂಬರೀಶ್ ಮಾತ್ರ. 1972 ರಲ್ಲಿ ತೆರೆಕಂಡ 'ನಾಗರಹಾವು' ಚಿತ್ರದಲ್ಲಿ ಪುಟ್ಟದೊಂದು ಪಾತ್ರ ಪೋಷಿಸುವ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ಅಂಬಿ ನಾಲ್ಕು ದಶಕಗಳಿಂದ ಕನ್ನಡ ಸಿನಿ ಪ್ರಿಯರನ್ನು ರಂಜಿಸುತ್ತಾ ಬಂದಿದ್ದಾರೆ.

  80 ರ ದಶಕದಲ್ಲಿ ಆಂಗ್ರಿ ಯಂಗ್ ಮ್ಯಾನ್ ರೋಲ್ ಗಳನ್ನು ಮಾಡುತ್ತಾ ಅಂದಿನ ಯುವ ಜನರಿಗೆ ರೋಲ್ ಮಾಡಲ್ ಆಗಿದ್ದವರು ಅಂಬರೀಶ್.

  ಅಭಿಮಾನಿಗಳಿಂದ ಮಂಡ್ಯದ ಗಂಡು ಅಂತಲೇ ಕರೆಯಿಸಿಕೊಳ್ಳುವ ಅಂಬರೀಶ್ ಕೇವಲ ಒಬ್ಬ ನಟ, ರಾಜಕಾರಣಿ ಮಾತ್ರ ಅಲ್ಲ. ಅಭಿಮಾನಿಗಳ ಪಾಲಿಗೆ ಅಂಬರೀಶ್ ಗುಣವಂತ, ಹೃದಯವಂತ. ಬೇಡಿ ಬಂದವರ ಪಾಲಿಗೆ 'ಕಲಿಯುಗದ ಕರ್ಣ'.

  ಚಿತ್ರರಂಗದ ಸಕಲ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಅಂಬರೀಶ್ ರವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಅಂಬರೀಶ್ ರವರ 64ನೇ ಜನ್ಮದಿನವನ್ನ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.[ಇಂದು ಅಂಬರೀಶ್ ಹುಟ್ಟುಹಬ್ಬ, ನ್ಯೂಸ್ ಅದಲ್ಲ!]

  ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ, ಅವರಿಗೆ ಶುಭಾಶಯ ಕೋರುತ್ತಾ, ಅವರ ಅಪರೂಪದ ಭಾವಚಿತ್ರಗಳ ಫೋಟೋ ಕಲೆಕ್ಷನ್ ಇದೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ... ಕೆಳಗಿರುವ ಒಂದೊಂದೇ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

  ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಂಬರೀಶ್ ರವರ ಅಪರೂಪದ ಭಾವಚಿತ್ರಗಳು

  English summary
  Kannada Actor, Rebel Star, Congress Politician, Housing Minister Ambareesh is celebrating 64th birthday today (May 29th). On this occasion, here is the collection of Ambareesh's rare photos. Have a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X