twitter
    For Quick Alerts
    ALLOW NOTIFICATIONS  
    For Daily Alerts

    2017ನೇ ಸಾಲಿನ ಪ್ರತಿಷ್ಟಿತ ರಾಷ್ಟ್ರ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ

    By Harshitha
    |

    2017ನೇ ಸಾಲಿನ ಪ್ರತಿಷ್ಟಿತ 65ನೇ ರಾಷ್ಟ್ರೀಯ ಪ್ರಶಸ್ತಿ ಪ್ರಕಟವಾಗಿದೆ. ನಟಿ ತಾರಾ ಅಭಿನಯದ ಕನ್ನಡದ 'ಹೆಬ್ಬೆಟ್ ರಾಮಕ್ಕ' ಚಿತ್ರಕ್ಕೆ ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ 'ಅತ್ಯುತ್ತಮ ಚಿತ್ರ' ಪ್ರಶಸ್ತಿ ಲಭಿಸಿದೆ.

    ಬೆಂಗಾಲಿ ಸಿನಿಮಾ 'ನಗರ್ ಕಿರ್ತನ್' ಚಿತ್ರದ ಅಭಿನಯಕ್ಕಾಗಿ ರಿದ್ಧಿ ಸೇನ್ 'ಅತ್ಯುತ್ತಮ ನಟ' ಪ್ರಶಸ್ತಿ ಪಡೆದರೆ, 'ಮಾಮ್' ಚಿತ್ರದಲ್ಲಿನ ನಟನೆಗಾಗಿ 'ಅತಿಲೋಕ ಸುಂದರಿ' ನಟಿ ಶ್ರೀದೇವಿಗೆ ಮರಣೋತ್ತರ 'ಅತ್ಯುತ್ತಮ ನಟಿ' ಪ್ರಶಸ್ತಿ ಲಭಿಸಿದೆ.

    ನವದೆಹಲಿಯ ಶಾಸ್ತ್ರಿ ಭವನ್ ನಲ್ಲಿರುವ ಪಿ.ಐ.ಬಿ ಕಾನ್ಫರೆನ್ಸ್ ರೂಮ್ ನಲ್ಲಿ 2017ನೇ ಸಾಲಿನ ಪ್ರತಿಷ್ಟಿತ 65ನೇ ರಾಷ್ಟ್ರ ಪ್ರಶಸ್ತಿಯನ್ನ ಘೋಷಿಸಲಾಗುತ್ತಿದೆ. ನಿರ್ದೇಶಕ ಶೇಖರ್ ಕಪೂರ್ ನೇತೃತ್ವದ ಜ್ಯೂರಿಯಲ್ಲಿ ದಕ್ಷಿಣ ಭಾರತದ ನಟಿ ಗೌತಮಿ, ಕನ್ನಡ ನಿರ್ದೇಶಕ ಪಿ.ಶೇಷಾದ್ರಿ ಸೇರಿದಂತೆ ಒಟ್ಟು 10 ಸದಸ್ಯರಿದ್ದರು. ಮೇ 3 ರಂದು 65ನೇ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

    2017ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಪಡೆದವರ ಪೂರ್ತಿ ವಿವರ ಇಲ್ಲಿದೆ ಓದಿರಿ...

    ಕನ್ನಡಕ್ಕೆ ದೊರೆಯಿತು 2 ರಾಷ್ಟ್ರ ಪ್ರಶಸ್ತಿ

    ಕನ್ನಡಕ್ಕೆ ದೊರೆಯಿತು 2 ರಾಷ್ಟ್ರ ಪ್ರಶಸ್ತಿ

    ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಚಿತ್ರ: ಹೆಬ್ಬೆಟ್ ರಾಮಕ್ಕ
    ಅತ್ಯುತ್ತಮ ಸಾಹಿತ್ಯ: ಪ್ರಹ್ಲಾದ್ (ಚಿತ್ರ: ಮಾರ್ಚ್ 22, ಹಾಡು: ಮುತ್ತು ರತ್ನದ ಪ್ಯಾಟೆ)

    ಶ್ರೀದೇವಿ ಪಾಲಾದ ಅತ್ಯುತ್ತಮ ನಟಿ ಪ್ರಶಸ್ತಿ

    ಶ್ರೀದೇವಿ ಪಾಲಾದ ಅತ್ಯುತ್ತಮ ನಟಿ ಪ್ರಶಸ್ತಿ

    ಅತ್ಯುತ್ತಮ ನಟ: ರಿದ್ಧಿ ಸೇನ್ (ಬೆಂಗಾಲಿ ಚಿತ್ರ: ನಗರ್ ಕಿರ್ತನ್)
    ಅತ್ಯುತ್ತಮ ನಟಿ: ದಿವಂಗತ ನಟಿ ಶ್ರೀದೇವಿ (ಚಿತ್ರ: ಮಾಮ್)
    ಅತ್ಯುತ್ತಮ ಪೋಷಕ ನಟ: ಫಹಾದ್ ಫಾಝಿಲ್
    ಅತ್ಯುತ್ತಮ ಪೋಷಕ ನಟಿ: ದಿವ್ಯಾ ದತ್ತಾ (ಚಿತ್ರ: ಇರಾದಾ)

    'ಬಾಹುಬಲಿ'ಗೆ ದೊರಕಿತು 3 ರಾಷ್ಟ್ರ ಪ್ರಶಸ್ತಿ

    'ಬಾಹುಬಲಿ'ಗೆ ದೊರಕಿತು 3 ರಾಷ್ಟ್ರ ಪ್ರಶಸ್ತಿ

    ಅತ್ಯುತ್ತಮ ಮನರಂಜನಾ ಚಿತ್ರ: ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ, ದಿ ಕನ್ ಕ್ಲೂಶನ್
    ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: ಬಾಹುಬಲಿ, ದಿ ಕನ್ ಕ್ಲೂಶನ್
    ಅತ್ಯುತ್ತಮ ಸಾಹಸ ನಿರ್ದೇಶನ: ಅಬ್ಬಾಸ್ ಅಲಿ ಮೊಘಲ್ (ಚಿತ್ರ: ಬಾಹುಬಲಿ ದಿ ಕನ್ ಕ್ಲೂಶನ್)

    ಯೇಸುದಾಸ್ ಮುಡಿಗೆ ರಾಷ್ಟ್ರ ಪ್ರಶಸ್ತಿ ಗರಿ

    ಯೇಸುದಾಸ್ ಮುಡಿಗೆ ರಾಷ್ಟ್ರ ಪ್ರಶಸ್ತಿ ಗರಿ

    ಅತ್ಯುತ್ತಮ ಹಿನ್ನಲೆ ಗಾಯಕ: ಕೆ.ಜೆ.ಯೇಸುದಾಸ್ (ಹಾಡು: ಪೊಯಿ ಮರಂಜಾ ಕಲಂ, ಚಿತ್ರ: ವಿಶ್ವಾಸಪೂರ್ವಂ ಮನ್ಸೂರ್)
    ಅತ್ಯುತ್ತಮ ಹಿನ್ನಲೆ ಗಾಯಕಿ: ಶಾಶಾ ತಿರುಪತಿ (ಹಾಡು: ವಾನ್, ಚಿತ್ರ: ಕಾಟ್ರು ವೇಲಿಯಿದೈ)

    ವಿನೋದ್ ಖನ್ನಾಗೆ ಮರಣೋತ್ತರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

    ವಿನೋದ್ ಖನ್ನಾಗೆ ಮರಣೋತ್ತರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

    ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ದಿವಂಗತ ನಟ ವಿನೋದ್ ಖನ್ನಾ
    ಅತ್ಯುತ್ತಮ ನಿರ್ದೇಶಕ: ಜಯರಾಜ್ (ಮಲಯಾಳಂ ಚಿತ್ರ: ಭಯಾನಕಂ)
    ಇಂದಿರಾ ಗಾಂಧಿ ಪ್ರಶಸ್ತಿ (ನಿರ್ದೇಶಕರ ಚೊಚ್ಚಲ ಚಿತ್ರ): ನಿರ್ದೇಶಕ ಪಾಂಪಲ್ಲಿ (ಚಿತ್ರ: ಸಿಂಜಾರ್)

    ಅತ್ಯುತ್ತಮ ಚಿತ್ರ ಯಾವುದು?

    ಅತ್ಯುತ್ತಮ ಚಿತ್ರ ಯಾವುದು?

    ಅತ್ಯುತ್ತಮ ಚಿತ್ರ: ವಿಲೇಜ್ ರಾಕ್ ಸ್ಟಾರ್ಸ್ (ಅಸ್ಸಾಮೀಸ್)
    ಅತ್ಯುತ್ತಮ ಮಕ್ಕಳ ಚಿತ್ರ: ಅಮರ್ ಭರತ್ ದಿಯೋಕರ್ ನಿರ್ದೇಶನದ 'ಮೋರ್ಕ್ಯಾ'
    ನರ್ಗೀಸ್ ದತ್ ಪ್ರಶಸ್ತಿ (ರಾಷ್ಟ್ರೀಯ ಏಕೀಕರಣ ಕುರಿತ ಅತ್ಯುತ್ತಮ ಚಿತ್ರ): ಧಪ್ಪಾ
    ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರ: ಆಲೋರುಕ್ಕಂ
    ಪರಿಸರ ಸಂರಕ್ಷಣೆ ಕುರಿತ ಅತ್ಯುತ್ತಮ ಚಿತ್ರ: ಇರಾದಾ
    ಅತ್ಯುತ್ತಮ ಬಾಲ ಪ್ರತಿಭೆ: ಬನಿತಾ ದಾಸ್ (ಅಸ್ಸಾಮೀಸ್ ಚಿತ್ರ: ವಿಲೇಜ್ ರಾಕ್ ಸ್ಟಾರ್ಸ್)

    ಎ.ಆರ್.ರೆಹಮಾನ್ ಗೆ 2 ರಾಷ್ಟ್ರ ಪ್ರಶಸ್ತಿ

    ಎ.ಆರ್.ರೆಹಮಾನ್ ಗೆ 2 ರಾಷ್ಟ್ರ ಪ್ರಶಸ್ತಿ

    ಅತ್ಯುತ್ತಮ ಸಂಗೀತ ನಿರ್ದೇಶನ: ಎ.ಆರ್.ರೆಹಮಾನ್ (ಚಿತ್ರ: ಕಾಟ್ರು ವೇಲಿಯಿದೈ)
    ಅತ್ಯುತ್ತಮ ಬ್ಯಾಕ್ ಗ್ರೌಂಡ್ ಮ್ಯೂಸಿಕ್: ಎ.ಆರ್.ರೆಹಮಾನ್ (ಚಿತ್ರ: ಮಾಮ್)
    ಅತ್ಯುತ್ತಮ ನೃತ್ಯ ಸಂಯೋಜನೆ: ಗಣೇಶ್ ಆಚಾರ್ಯ (ಚಿತ್ರ: ಟಾಯ್ಲೆಟ್ ಏಕ್ ಪ್ರೇಮ್ ಕಥಾ)
    ಅತ್ಯುತ್ತಮ ಛಾಯಾಗ್ರಹಣ: ನಿಖಿಲ್.ಎಸ್.ಪ್ರವೀಣ್ (ಚಿತ್ರ: ಭಯಾನಕಂ)
    ಅತ್ಯುತ್ತಮ ಚಿತ್ರಕಥೆ: ಸಜೀವ್ ಪಳೂರ್
    ಅತ್ಯುತ್ತಮ ಚಿತ್ರಕಥೆ (adapted): ಜಯರಾಜ್ (ಚಿತ್ರ: ಭಯಾನಕಂ)
    ಅತ್ಯುತ್ತಮ ಸಂಭಾಷಣೆ: ಸಂಭಿತ್ ಮೊಹಾಂತಿ (ಚಿತ್ರ: ಹಲೋ ಅರ್ಶಿ)
    ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಸಂತೋಷ್ ರಮಣ್ (ಚಿತ್ರ: ಟೇಕ್ ಆಫ್)
    ಅತ್ಯುತ್ತಮ ಪ್ರಸಾದನ (ಮೇಕಪ್): ರಾಮ್ ರಾಜಕ್ (ಚಿತ್ರ: ನಗರ್ ಕಿರ್ತನ್)
    ಅತ್ಯುತ್ತಮ ಆಡಿಯೋಗ್ರಾಫಿ: ವಿಲೇಜ್ ರಾಕ್ ಸ್ಟಾರ್ಸ್
    ಅತ್ಯುತ್ತಮ ಸೌಂಡ್ ಡಿಸೈನ್, ರೆಕಾರ್ಡಿಸ್ಟ್: ವಾಕಿಂಗ್ ವಿತ್ ದಿ ವಿಂಡ್

    ಪ್ರಾದೇಶಿಕ ಚಿತ್ರಗಳ ವಿಭಾಗ

    ಪ್ರಾದೇಶಿಕ ಚಿತ್ರಗಳ ವಿಭಾಗ

    ಅತ್ಯುತ್ತಮ ಕನ್ನಡ ಚಿತ್ರ: ಹೆಬ್ಬೆಟ್ಟು ರಾಮಕ್ಕ
    ಅತ್ಯುತ್ತಮ ಹಿಂದಿ ಚಿತ್ರ: ನ್ಯೂಟನ್
    ಅತ್ಯುತ್ತಮ ಗುಜರಾತಿ ಚಿತ್ರ: Dhh
    ಅತ್ಯುತ್ತಮ ತೆಲುಗು ಚಿತ್ರ: ಘಾಝಿ
    ಅತ್ಯುತ್ತಮ ತಮಿಳು ಚಿತ್ರ: ಟು ಲೆಟ್
    ಅತ್ಯುತ್ತಮ ಅಸ್ಸಾಮೀಸ್ ಚಿತ್ರ: ಇಶು
    ಅತ್ಯುತ್ತಮ ಬೆಂಗಾಲಿ ಚಿತ್ರ: ಮಯೂರಾಕ್ಷಿ
    ಅತ್ಯುತ್ತಮ ಮಲಯಾಳಂ ಚಿತ್ರ: ತೊಂಡಿಮುತ್ತಲಮ್ ದ್ರಿಸಾಕ್ಷಿಯುಂ
    ಅತ್ಯುತ್ತಮ ಮರಾಠಿ ಚಿತ್ರ: ಕಚ್ಚಾ ಲಿಂಬು
    ಅತ್ಯುತ್ತಮ ಒಡಿಯಾ ಚಿತ್ರ: ಹಲೋ ಅರ್ಶಿ
    ಅತ್ಯುತ್ತಮ ತುಳು ಚಿತ್ರ: ಪಡ್ಡಾಯಿ
    ಅತ್ಯುತ್ತಮ ಲಡಾಕಿ ಚಿತ್ರ: ವಾಕಿಂಗ್ ವಿತ್ ದಿ ವಿಂಡ್
    ಸ್ಪೆಷಲ್ ಜ್ಯೂರಿ ಅವಾರ್ಡ್: ನಗರ್ ಕಿರ್ತನ್

    ವಿಶೇಷ ಮನ್ನಣೆ

    ವಿಶೇಷ ಮನ್ನಣೆ

    'ನ್ಯೂಟನ್' ಚಿತ್ರದ ಪಂಕಜ್ ತ್ರಿಪಾಠಿ, 'ಟೇಕ್ ಆಫ್' ಚಿತ್ರದ ಪಾರ್ವತಿ, 'ಹಲೋ ಅರ್ಶಿ' ಚಿತ್ರದ ಪ್ರಕೃತಿ ಮಿಶ್ರ, 'ಮೋರ್ಕ್ಯಾ' ಚಿತ್ರದ ಯಶ್ ರಾಜ್ ಕರ್ಹಾಡೇ ರವರುಗಳಿಗೆ ವಿಶೇಷ ಮನ್ನಣೆ ದೊರೆತಿದೆ.

    English summary
    65th National Film Awards announced: Here is the complete list of Winners.
    Friday, April 13, 2018, 14:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X