For Quick Alerts
  ALLOW NOTIFICATIONS  
  For Daily Alerts

  ಪ್ರಶಸ್ತಿ ಗೆದ್ದವರ ಮಾತು : ಪುನೀತ್, ಶೃತಿ, ತರುಣ್, ಧನಂಜಯ್ ಸಂತಸ

  By Naveen
  |

  2018ರ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಿನ್ನೆ ನಡೆದಿದೆ. ಈ ಬಾರಿ ನಟ ಪುನೀತ್ ರಾಜ್ ಕುಮಾರ್, ಶೃತಿ ಹರಿಹರನ್, ತರುಣ್ ಸುಧೀರ್, ಧನಂಜಯ್, ರವಿಶಂಕರ್, ಶ್ರದ್ಧಾ ಶ್ರೀನಾಥ್, ವಿ ನಾಗೇಂದ್ರ ಪ್ರಸಾದ್, ಅನುರಾಧ ಭಟ್, ಭವಾನಿ ಪ್ರಕಾಶ್, ಅರ್ಮನ್ ಮಲ್ಲಿಕ್, ಭರತ್ ಬಿಜೆ ಪ್ರಶಸ್ತಿ ಪಡೆದಿದ್ದಾರೆ.

  ಇದರ ಜೊತೆಗೆ ರಾಜ್ ಬಿ ಶೆಟ್ಟಿ ನಿರ್ದೇಶನ ಹಾಗೂ ನಟನೆ ಮಾಡಿದ್ದ 'ಒಂದು ಮೊಟ್ಟೆಯ ಕಥೆ' ಸಿನಿಮಾ 2018ನೇ ಸಾಲಿನ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದೆ.

  65ನೇ ಸೌತ್ ಫಿಲ್ಮ್ ಫೇರ್: ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ 65ನೇ ಸೌತ್ ಫಿಲ್ಮ್ ಫೇರ್: ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ

  ಅಂದಹಾಗೆ, ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಪುನೀತ್ ರಾಜ್ ಕುಮಾರ್, ಶೃತಿಹರಿಹನ್, ಧನಂಜಯ್, ತುರುಣ್ ಸುಧೀರ್ ಹಾಗೂ ವಿ ನಾಗೇಂದ್ರ ಪ್ರಸಾದ್ ತಮ್ಮ ಸಂತಸವನ್ನು ಈ ರೀತಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

  ಈ ಪ್ರಶಸ್ತಿಗೆ ಮೂವರು ಮುಖ್ಯ ಕಾರಣ- ಪುನೀತ್

  ಈ ಪ್ರಶಸ್ತಿಗೆ ಮೂವರು ಮುಖ್ಯ ಕಾರಣ- ಪುನೀತ್

  ''ಇಡೀ ಕರ್ನಾಟಕ 'ರಾಜಕುಮಾರ' ಸಿನಿಮಾವನ್ನು ಒಂದು ಹಬ್ಬ ಮಾಡಿದಂತೆ ಆಚರಿಸಿದ್ದರು. ಈಗ ಈ ಚಿತ್ರಕ್ಕಾಗಿ ಫಿಲ್ಮ್ ಫೇರ್ ಬಂದಿರುವುದು ಬಹಳ ಖುಷಿ ನೀಡಿದೆ. ಈ ಪ್ರಶಸ್ತಿಯನ್ನು ನಾನು ವಿಶೇಷವಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಿರ್ಮಾಪಕ ವಿಜಯ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ಡೇಡಿಕೇಟ್ ಮಾಡುತ್ತೇನೆ.''

  ಕೆಲಸ ಮಾಡಲು ಸ್ಫೂರ್ತಿ ಕೊಟ್ಟಿದೆ - ಶೃತಿ ಹರಿಹರನ್

  ಕೆಲಸ ಮಾಡಲು ಸ್ಫೂರ್ತಿ ಕೊಟ್ಟಿದೆ - ಶೃತಿ ಹರಿಹರನ್

  ''ಈ ಪ್ರಶಸ್ತಿ ತುಂಬ ಉತ್ಸಾಹ ನೀಡಿದೆ. ಈ ಪ್ರಶಸ್ತಿ ನನ್ನ ಕೆಲಸವನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗಲು ಹಾಗೂ ಇನ್ನು ಹೆಚ್ಚಿನ ಕೆಲಸ ಮಾಡಲು ಸ್ಫೂರ್ತಿ ಕೊಟ್ಟಿದೆ. ಒಬ್ಬ ನಟಿಯಾಗಿ ಇದನ್ನು ಮುಂದುವರೆಸಿಕೊಂಡು ಹೋಗುವುದು ಕಷ್ಟ. ಈ ಪ್ರಶಸ್ತಿ ಬಂದಿರುವುದಕ್ಕೆ 'ಬ್ಯೂಟಿಫುಲ್ ಮನಸುಗಳು' ಚಿತ್ರತಂಡಕ್ಕೆ ಹಾಗೂ ಫಿಲ್ಮ್ ಫೇರ್ ಗೆ ಧನ್ಯವಾದ ತಿಳಿಸುತ್ತೇನೆ.''

  5ನೇ ಬಾರಿ ಅಪ್ಪುಗೆ ಫಿಲ್ಮ್ ಫೇರ್ : ಈ ಮೂವರಿಗೆ ಪ್ರಶಸ್ತಿ ಸಮರ್ಪಣೆ 5ನೇ ಬಾರಿ ಅಪ್ಪುಗೆ ಫಿಲ್ಮ್ ಫೇರ್ : ಈ ಮೂವರಿಗೆ ಪ್ರಶಸ್ತಿ ಸಮರ್ಪಣೆ

  ಯಾವಾಗಲು ನನ್ನ ನೆನಪಿನಲ್ಲಿ ಉಳಿಯುತ್ತದೆ - ವಿ ನಾಗೇಂದ್ರ ಪ್ರಸಾದ್

  ಯಾವಾಗಲು ನನ್ನ ನೆನಪಿನಲ್ಲಿ ಉಳಿಯುತ್ತದೆ - ವಿ ನಾಗೇಂದ್ರ ಪ್ರಸಾದ್

  ''ಅಪ್ಪ ಐ ಲವ್ ಯೂ..' ಹಾಡಿಗೆ ಪ್ರಶಸ್ತಿ ಸಿಕ್ಕಿದೆ. ಈ ಹಾಡನ್ನು ಆರು ಕೋಟಿ ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಈ ಪ್ರಶಸ್ತಿ ನಿಜಕ್ಕೂ ಖುಷಿ ನೀಡಿದೆ. ಯಾಕೆಂದ್ರೆ, ಎಲ್ಲರೂ ಈ ಹಾಡಿಗೆ ಭಾವನಾತ್ಮಕವಾಗಿ ಹತ್ತಿರ ಆಗಿದ್ದರು. ಇಂತಹ ಪ್ರಶಸ್ತಿ ಯಾವಾಗಲು ನನ್ನ ನೆನಪಿನಲ್ಲಿ ಉಳಿಯುತ್ತದೆ. ಈ ಹಾಡಿಗೆ ಕಾರಣರಾದ ಎಲ್ಲರಿಗೆ ಧನ್ಯವಾದ.''

  ಇದು ನನ್ನ ಮೊದಲನೇ ಫಿಲ್ಮ್ ಫೇರ್ - ಧನಂಜಯ್

  ಇದು ನನ್ನ ಮೊದಲನೇ ಫಿಲ್ಮ್ ಫೇರ್ - ಧನಂಜಯ್

  ''ಇದು ನನ್ನ ಮೊದಲನೇ ಫಿಲ್ಮ್ ಫೇರ್. 'ಅಲ್ಲಮ' ರೀತಿಯ ಪಾತ್ರವನ್ನು ಗುರುತಿಸಿದ್ದಕ್ಕೆ ಧನ್ಯವಾದ ಈ ಪಾತ್ರವನ್ನು ನೀಡಿದ್ದ 'ಅಲ್ಲಮ' ಚಿತ್ರತಂಡಕ್ಕೆ, ನಿರ್ದೇಶಕರಾದ ನಾಗಭರಣ ಅವರಿಗೆ, ನಿರ್ಮಾಪಕರಿಗೆ ಧನ್ಯವಾದ. ಎಲ್ಲದಕ್ಕೂ ಹೆಚ್ಚಾಗಿ ಇವತ್ತು ಡಾಲಿ ಅಂತ ಕರ್ನಾಟಕದಲ್ಲಿ ಅಪ್ಪಿಕೊಂಡಿರುವ ಕನ್ನಡಿಗರಿಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ.''

  ಇದು ಇಡೀ ತಂಡದ ಶ್ರಮ - ತರುಣ್ ಸುಧೀರ್

  ಇದು ಇಡೀ ತಂಡದ ಶ್ರಮ - ತರುಣ್ ಸುಧೀರ್

  ''ಚೌಕ' ಸಿನಿಮಾಗೆ ಪ್ರಶಸ್ತಿ ಬಂದಿದೆ. ಈ ಸಿನಿಮಾ ನೀಡಿದ್ದ ದ್ವಾರಕೀಶ್ ಚಿತ್ರಕ್ಕೆ ಧನ್ಯವಾದ. ಚಿತ್ರದ ಇಡೀ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ, ಕಾಶೀನಾಥ್ ಸರ್, ದರ್ಶನ್ ಸರ್ ಎಲ್ಲರೂ ನಂಬಿಕೆ ಇಟ್ಟು ನನ್ನ ಮೊದಲ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಇದೆಲ್ಲ ಅವರ ಶ್ರಮ.''

  English summary
  65th south filmfare awards : Sandalwood stars spoke about Filmfare awards. Kannada actor Puneeth Rajkumar bags his fourth Best Actor award, and Sruthi Hariharan gets best Actress award.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X