twitter
    For Quick Alerts
    ALLOW NOTIFICATIONS  
    For Daily Alerts

    67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ: ಕನ್ನಡಕ್ಕೆ ಸಿಕ್ಕ ಪ್ರಶಸ್ತಿಗಳೆಷ್ಟು?

    |

    67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಇಂದು ಘೋಷಣೆ ಆಗಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಸಿನಿಮಾ ಉತ್ಪಾದಿಸುವ ಭಾರತದಲ್ಲಿ ಹಲವಾರು ಸಿನಿಮಾ ಸಂಬಂಧಿ ಪ್ರಶಸ್ತಿಗಳಿವೆ ಆದರೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ವಿಶೇಷ ಗೌರವ ಇದ್ದೇ ಇದೆ.

    ಕರ್ನಾಟಕದಿಂದಲೂ ಹಲವು ಸಿನಿಮಾಗಳು ಪ್ರಶಸ್ತಿಗಾಗಿ ಕಳುಹಿಸಲ್ಪಟ್ಟಿದ್ದವು. ಆದರೆ ಬಹಳ ಕೆಲವಕ್ಕೆ ಮಾತ್ರವೇ ಪ್ರಶಸ್ತಿ ದೊರಕಿದೆ. ಪಟ್ಟಿಯನ್ನು ಪೂರ್ಣ ಕಣ್ಣಾಡಿಸಿದರೆ ಕನ್ನಡಕ್ಕೆ ಸಿಕ್ಕಿರುವುದು ಬಹಳ ಅಲ್ಪ ಎನ್ನಬಹುದು. ಆದರೆ ಏನೂ ಸಿಗದೆ ನಿರಾಸೆ ಆಗಿಲ್ಲ ಎಂದು ಸಮಾಧಾನಿಸಿಕೊಳ್ಳಲು ಅಡ್ಡಿಯಿಲ್ಲ.

    67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪೂರ್ಣ ಪಟ್ಟಿ ಇಲ್ಲಿದೆ67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪೂರ್ಣ ಪಟ್ಟಿ ಇಲ್ಲಿದೆ

    ನಾನ್ ಫೀಚರ್ ಫಿಲಂ ವಿಭಾಗದಲ್ಲಿ 'ಬೆಸ್ಟ್ ನರೇಶನ್ ವಾಯ್ಸ್ ಓವರ್ ವಿಭಾಗದಲ್ಲಿ ಕನ್ನಡಿಗರು ನಿರ್ದೇಶಿಸಿ ನಿರ್ಮಿಸಿರುವ ಕನ್ನಡದ 'ವೈಲ್ಡ್ ಕರ್ನಾಟಕ'ಕ್ಕೆ ವಾಯ್ಸ್ ಓವರ್ ನೀಡಿರುವ ಖ್ಯಾತ ಸಿನಿಮಾ ನಿರ್ದೇಶಕ ಡೇವಿಡ್ ಅಟೆನ್‌ಬರೋ ಅವರಿಗೆ ಪ್ರಶಸ್ತಿ ದೊರಕಿದೆ.

    'ವೈಲ್ಡ್ ಕರ್ನಾಟಕ'ಕ್ಕೆ ಮತ್ತೊಂದು ಪ್ರಶಸ್ತಿ

    'ವೈಲ್ಡ್ ಕರ್ನಾಟಕ'ಕ್ಕೆ ಮತ್ತೊಂದು ಪ್ರಶಸ್ತಿ

    ನಾನ್ ಫೀಚರ್ ವಿಭಾಗದಲ್ಲಿಯೇ 'ಬೆಸ್ಟ್ ಎಕ್ಸ್‌ಪ್ಲೊರೇಷನ್ ಸಿನಿಮಾ' ಪ್ರಶಸ್ತಿಯು 'ವೈಲ್ಡ್ ಕರ್ನಾಟಕ' ಪಾಲಾಯಿತು. ಈ ಸಿನಿಮಾವನ್ನು ಅಮೋಘವರ್ಷ, ಕಲ್ಯಾಣ ವರ್ಮಾ, ಶರತ್ ಚಂಪಾಟಿ, ವಿಜಯ್ ಮೋಹನ್ ರಾಜು ನಿರ್ದೇಶಿಸಿದ್ದಾರೆ. ಈ ನಾನ್ ಫೀಚರ್ ಕಿರು ಸಿನಿಮಾ ನಿರ್ಮಾಣ ಮಾಡಿರುವುದು ಅಮೋಘವರ್ಷ.

    'ಅವನೇ ಶ್ರೀಮನ್ನಾರಾಯಣ'ಕ್ಕೆ ಪ್ರಶಸ್ತಿ

    'ಅವನೇ ಶ್ರೀಮನ್ನಾರಾಯಣ'ಕ್ಕೆ ಪ್ರಶಸ್ತಿ

    ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯ ಪ್ರಮುಖ ವಿಭಾಗ ಫೀಚರ್ ಫಿಲಂ ವಿಭಾಗ. ಈ ವಿಭಾಗದಲ್ಲಿ ಇನ್ನೂ ಹಲವು ಉಪ ವಿಭಾಗಗಳಿವೆ. ಫೀಚರ್ ಫಿಲಂ ವಿಭಾಗದಲ್ಲಿ ಕನ್ನಡದ ಒಂದು ಸಿನಿಮಾಕ್ಕೆ ಮಾತ್ರವೇ ಪ್ರಶಸ್ತಿ ದೊರಕಿದೆ. ರಕ್ಷಿತ್ ಶೆಟ್ಟಿ ನಟಿಸಿ ಸಚಿನ್ ರವಿ ನಿರ್ದೇಶನ ಮಾಡಿರುವ 'ಅವನೇ ಶ್ರೀಮನ್ನಾರಾಯಣ' ಸಿನಿಮಾಕ್ಕೆ ಅತ್ಯುತ್ತಮ ಸ್ಟಂಟ್ಸ್ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ದೊರೆತಿದೆ.

    'ಅಕ್ಷಿ' ಅತ್ಯುತ್ತಮ ಕನ್ನಡ ಭಾಷಾ ಸಿನಿಮಾ

    'ಅಕ್ಷಿ' ಅತ್ಯುತ್ತಮ ಕನ್ನಡ ಭಾಷಾ ಸಿನಿಮಾ

    ಇನ್ನು ವಿವಿಧ ಭಾಷೆಗಳು ಹಾಗೂ ಶೆಡ್ಯೂಲ್ಡ್ ಭಾಷೆಗಳಲ್ಲಿ ನಿರ್ಮಾಣವಾದ ಸಿನಿಮಾಗಳಿಗೆ ನೀಡಲಾಗುವ ಆಯಾ ಭಾಷೆಯ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಕನ್ನಡದಿಂದ ಆಯ್ಕೆ ಆಗಿರುವುದು ಮನೋಜ್ ಕುಮಾರ್ ನಿರ್ದೇಶಿಸಿರುವ 'ಅಕ್ಷಿ'. ಈ ಸಿನಿಮಾವು ಕನ್ನಡದ ಅತ್ಯುತ್ತಮ ಸಿನಿಮಾ. ತುಳು ಭಾಷೆಯಲ್ಲಿ 'ಪಿಂಗಾರಾ' ಅತ್ಯುತ್ತಮ ಸಿನಿಮಾ ಆಗಿ ಆಯ್ಕೆಗೊಂಡಿದೆ.

    ರಾಮದಾಸ್ ನಾಯ್ಡು ಪ್ರಬಂಧಕ್ಕೆ ಪ್ರಶಸ್ತಿ

    ರಾಮದಾಸ್ ನಾಯ್ಡು ಪ್ರಬಂಧಕ್ಕೆ ಪ್ರಶಸ್ತಿ

    ಇನ್ನು ಸಿನಿಮಾ ಬರೆಹ ಮತ್ತು ವಿಮರ್ಶೆ ವಿಭಾಗದಲ್ಲಿ ಕನ್ನಡಿಗ ರಾಮದಾಸ್ ನಾಯ್ಡು ಅವರು ಬರೆದಿರುವ ಕನ್ನಡ ಸಿನಿಮಾ ಚಾರಿತ್ರಿಕ ನೋಟ: ಜಾಗತಿಕ ಪ್ರೇರಣೆ ಮತ್ತು ಪ್ರಭಾವಗಳನ್ನು ಅನುಲಕ್ಷಿಸಿ ಬರೆದ ಪ್ರಬಂಧಕ್ಕೆ ಜ್ಯೂರಿ ಸ್ಪೆಷಲ್ ಮೆನ್ಶನ್ ಪ್ರಶಸ್ತಿ ನೀಡಲಾಗಿದೆ.

    Recommended Video

    Darshan meets real Sarathi who used to be KSRTC bus driver of darshan's school
    2019 ರಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಪ್ರಶಸ್ತಿ

    2019 ರಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಪ್ರಶಸ್ತಿ

    2019 ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳನ್ನಷ್ಟೆ 67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಪರಿಗಣಿಸಲಾಗಿದೆ. 2019 ರಲ್ಲಿ ಕೆಲವಾರು ಒಳ್ಳೆಯ ಸಿನಿಮಾಗಳು ನಿರ್ಮಾಣ ಆಗಿದ್ದವು. ಆದರೆ ಅವ್ಯಾವೂ ಪ್ರಶಸ್ತಿ ಗಳಿಸಲು ವಿಫಲವಾಗಿವೆ.

    English summary
    67th National Film Awards Kannada Winners List: The 67th National Film Awards several Kannada films and actors declared as the winners of the prestigious award. Here is the List.
    Monday, March 22, 2021, 19:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X