twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಪರಿಣಾಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಮುಂದೂಡಿಕೆ

    |

    ಕೊರೊನಾ ಲಾಕ್‌ಡೌನ್‌ ನಿಂದಾಗಿ ಸಿನಿಮಾ, ಧಾರವಾಹಿಗಳ ಚಿತ್ರೀಕರಣವೇ ಮುಂದೂಡಲ್ಪಟ್ಟಿದೆ. ಚಿತ್ರೀಕರಣ ಮಾತ್ರವಲ್ಲದೆ ಸಿನಿಮಾ ಸಂಬಂಧಿತ ಎಲ್ಲಾ ಸಮಾರಂಭಗಳೂ ಸಹ ಮುಂದೂಡಲ್ಪಟ್ಟಿವೆ.

    Recommended Video

    ಸೋಷಿಯಲ್ ಮೀಡಿಯಾದಿಂದ ಯಾರ ಜೀವನಕ್ಕೂ ಹಾನಿ ಮಾಡಬೇಡಿ | Ramesh Aravind | Filmibeat Kannada

    ಮೇ 3 ರಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸಮಾರಂಭ ನಡೆಯುವುದು ವಾಡಿಕೆ. ಈ ಬಾರಿಯೂ ಮೇ 3 ಕ್ಕೆ ಸಿನಿಮಾ ಪ್ರಶಸ್ತಿ ಸಮಾರಂಭ ನಡೆಯಬೇಕಿತ್ತು, ಆದರೆ ಕೊರೊನಾ ಕಾರಣದಿಂದಾಗಿ ಅದು ಮುಂದೂಡಲ್ಪಟ್ಟಿದೆ.

    ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಿನಿಮಾ ಕುರಿತ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು, ಬಾಲಿವುಡ್ ಸೇರಿದಂತೆ ದೇಶದ ಎಲ್ಲಾ ಭಾಷೆಯ ಅತ್ಯುತ್ತಮ ಸಿನಿಮಾಗಳನ್ನು, ನಟರನ್ನು ಗುರುತಿಸುವ ಅದ್ಭುತ ಇವೆಂಟ್ ಅದಾಗಿತ್ತು, ಆದರೆ ಕೊರೊನಾ ಕಾರಣದಿಂದ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ.

    ಸಿನಿಮಾ ಆಯ್ಕೆ ಸಹ ನಡೆದಿಲ್ಲ

    ಸಿನಿಮಾ ಆಯ್ಕೆ ಸಹ ನಡೆದಿಲ್ಲ

    67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆ ಸಹ ನಡೆದಿಲ್ಲ. ಜ್ಯೂರಿಗಳ ನಾಮನಿರ್ದೇಶನ ಆಗಿತ್ತೇ ಹೊರತು ಸಿನಿಮಾಗಳ ಆಯ್ಕೆ ಪ್ರಕ್ರಿಯೆಗೂ ಚಾಲನೆ ದೊರೆತಿರಲಿಲ್ಲ.

    ಕಳೆದ ವರ್ಷವೂ ಸಮಾರಂಭ ವಿಳಂಬವಾಗಿತ್ತು

    ಕಳೆದ ವರ್ಷವೂ ಸಮಾರಂಭ ವಿಳಂಬವಾಗಿತ್ತು

    ಕಳೆದ ವರ್ಷವೂ ಸಹ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ವಿಳಂಬವಾಗಿತ್ತು. ಕಳೆದ ವರ್ಷ ಲೋಕಸಭೆ ಚುನಾವಣೆಗಳು ಇದ್ದ ಕಾರಣ ಸಮಾರಂಭವನ್ನು ಮುಂದೂಡಲಾಗಿತ್ತು. ಡಿಸೆಂಬರ್ ನಲ್ಲಿ ಪ್ರಶಸ್ತಿ ವಿತರಣೆ ನಡೆಯಿತು.

    ಮುಂದಿನ ವರ್ಷ ಸಮಾರಂಭಕ್ಕೂ ತೊಂದರೆ

    ಮುಂದಿನ ವರ್ಷ ಸಮಾರಂಭಕ್ಕೂ ತೊಂದರೆ

    ಈ ವರ್ಷ ಎಲ್ಲೂ ಸಿನಿಮೋತ್ಸವಗಳು ನಡೆದಿಲ್ಲ, ಸಿನಿಮಾಗಳೂ ಸಹ ಹೆಚ್ಚು ನಿರ್ಮಾಣವಾಗಿಲ್ಲ. ಇದು ಮುಂದಿನ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಮೇಲೂ ಪರಿಣಾಮ ಬೀರಲಿದೆ ಎಂದು ಕಳೆದ ವರ್ಷ ಜ್ಯೂರಿ ಪ್ರಮುಖ ಆಗಿದ್ದ ಸಿನಿಕರ್ಮಿ ರಾಹುಲ್ ರವೇಲ್ ಹೇಳಿದ್ದಾರೆ.

    ಮೇ 3 ರಂದೇ ಕಾರ್ಯಕ್ರಮ ಆಯೋಜನೆ ಏಕೆ?

    ಮೇ 3 ರಂದೇ ಕಾರ್ಯಕ್ರಮ ಆಯೋಜನೆ ಏಕೆ?

    1913 ಮೇ 3 ರಂದು ಭಾರತದ ಮೊತ್ತ ಮೊದಲ ಸಿನಿಮಾ ರಾಜಾ ಹರೀಶ್ಚಂದ್ರ ಬಿಡುಗಡೆ ಆಗಿತ್ತು ಎಂಬ ಕಾರಣಕ್ಕೆ 2012 ರಿಂದಲೂ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ಮೇ 3 ರಂದೇ ಮಾಡಿಕೊಂಡು ಬರಲಾಗುತ್ತಿದೆ.

    English summary
    67th national film award which designated to happen on May 3 is postponed due to coronavirus lock down.
    Saturday, April 25, 2020, 16:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X