For Quick Alerts
  ALLOW NOTIFICATIONS  
  For Daily Alerts

  Breaking: 68ನೇ ರಾಷ್ಟ್ರ ಪ್ರಶಸ್ತಿ ಪ್ರಕಟ: ಯಾರಿಗೆ ಯಾವ್ಯಾವ ಪ್ರಶಸ್ತಿ? ಇಲ್ಲಿದೆ ಪಟ್ಟಿ!

  |

  ಭಾರತೀಯ ಸಿನಿಮಾಗಳಿಗೆ ನೀಡಲಾಗುವ ಅತ್ಯುತ್ತಮ ರಾಷ್ಟ್ರ ಪ್ರಶಸ್ತಿಯನ್ನು ಘೋಷಿಸಲಾಗಿದೆ. 68ನೇ ಸಾಲಿನ ರಾಷ್ಟ್ರ ಪ್ರಶಸ್ತಿಯನ್ನು ಇಂದು( ಜುಲೈ 22) ಅನೌನ್ಸ್ ಮಾಡಲಾಗಿದೆ. ಈ ವರ್ಷ ಸುಮಾರು 305 ಚಲನ ಚಿತ್ರಗಳು ಪ್ರಶಸ್ತಿಯ ರೇಸ್‌ನಲ್ಲಿ ಇದ್ದವು.

  ಸುಮಾರು 30 ಭಾಷೆಗಳಿಂದ ರಾಷ್ಟ್ರ ಪ್ರಶಸ್ತಿ ಪೈಪೋಟಿಗೆ ಇಳಿದಿದ್ದವು. ಸಿನಿಮೇತರ ವಿಭಾಗದಲ್ಲಿ 28 ಭಾಷೆಗಳಲ್ಲಿ 148 ಸಿನಿಮಾಗಳು ಅಖಾಡಕ್ಕೆ ಇಳಿದಿದ್ದವು. ಈ ಎಲ್ಲಾ ಸಿನಿಮಾಗಳನ್ನು ಗಣನೆಗೆ ತೆಗೆದುಕೊಂಡು ರಾಷ್ಟ್ರ ಪ್ರಶಸ್ತಿಗೆ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ.

  ಇಬ್ಬರಿಗೆ ಅತ್ಯುತ್ತಮ ನಟ ಪ್ರಶಸ್ತಿ

  68ನೇ ರಾಷ್ಟ್ರ ಪ್ರಶಸ್ತಿಯನ್ನು ಇಬ್ಬರು ನಟರು ಹಂಚಿಕೊಂಡಿದ್ದಾರೆ. 'ಸೂರರೈ ಪೋಟ್ರು' ಸಿನಿಮಾದ ಹೀರೊ ಸೂರ್ಯ ಹಾಗೂ 'ತಾನಾಜಿ' ಸಿನಿಮಾಗಾಗಿ ಬಾಲಿವುಡ್ ನಟ ಅಜಯ್ ದೇವಗನ್‌ಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಘೋಷಿಸಲಾಗಿದೆ.

  ಇನ್ನು 'ಸೂರರೈ ಪೋಟ್ರು' ಅತೀ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇದೇ ಸಿನಿಮಾದ ಅತ್ಯುತ್ತಮ ನಟನೆಗಾಗಿ ಅಪರ್ಣ ಬಾಲಮುರುಳಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿಯೂ 'ಸೂರರೈ ಪೋಟ್ರು' ಸಿನಿಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

  ಕನ್ನಡದ ಎರಡು ಸಿನಿಮಾಗಳಿಗೆ ಪ್ರಶಸ್ತಿ

  ಕನ್ನಡದ ಎರಡು ಸಿನಿಮಾಗಳು ಕೂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಅತ್ಯುತ್ತಮ ಪರಿಸರ ಸಂರಕ್ಷಣೆ ಸಿನಿಮಾ ವಿಭಾಗದಲ್ಲಿ ಸಂಚಾರಿ ವಿಜಯ್ ಅಭಿನಯದ 'ತಲೆದಂಡ'ಗೆ ಪ್ರಶಸ್ತಿ ಸಿಕ್ಕಿದೆ. ಹಾಗೇ ಬೆಸ್ಟ್ ಆಡಿಯೋಗ್ರಫಿ ಹಾಗೂ ಬೆಸ್ಟ್ ಕನ್ನಡ ಸಿನಿಮಾ ವಿಭಾಗದಲ್ಲಿ 'ಡೊಳ್ಳು' ಸಿನಿಮಾ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

  68th National Film Awards 2022 : Heres the complete list of winners

  68ನೇ ರಾಷ್ಟ್ರ ಪ್ರಶಸ್ತಿ ಪಡೆದ ಪ್ರಮುಖ ಪಟ್ಟಿ ಇಲ್ಲಿದೆ.

  ಅತ್ಯುತ್ತಮ ಚಲನ ಚಿತ್ರ: ಸೂರರೈ ಪೋಟ್ರು
  ಸಂಪೂರ್ಣ ಮನರಂಜನಾ ಚಿತ್ರ: ತಾನಾಜಿ: ದಿ ಅನ್‌ಸಂಗ್ ವಾರಿಯರ್
  ಅತ್ಯುತ್ತಮ ನಟ: ಸೂರ್ಯ( ಸೂರರೈ ಪೋಟ್ರು), ಅಜಯ್ ದೇವಗನ್(ತಾನಾಜಿ: ದಿ ಅನ್‌ಸಂಗ್ ವಾರಿಯರ್)
  ಅತ್ಯುತ್ತಮ ನಟಿ: ಅಪರ್ಣ ಬಾಲಮುರಳಿ ( ಸೂರರೈ ಪೋಟ್ರು)
  ಅತ್ಯುತ್ತಮ ಚಿತ್ರಕಥೆ: ಸೂರರೈ ಪೋಟ್ರು
  ಅತ್ಯುತ್ತಮ ನಿರ್ದೇಶನ: ಸಚ್ಚಿದಾನಂದನ್ ಕೆಆರ್ (ಅಯ್ಯಪ್ಪನುಂ ಕೋಶಿಯುಂ)
  ಅತ್ಯುತ್ತಮ ಡೈಲಾಗ್: ಮಂಡೇಲಾ(ತಮಿಳು)
  ಅತ್ಯುತ್ತಮ ಪರಿಸರ ಸಂರಕ್ಷಣಾ ಸಿನಿಮಾ: ತಲೆದಂಡ
  ಅತ್ಯುತ್ತಮ ಕನ್ನಡ ಸಿನಿಮಾ: ಡೊಳ್ಳು
  ಅತ್ಯುತ್ತಮ ಆಡಿಯೋಗ್ರಫಿ: ಡೊಳ್ಳು

  Recommended Video

  ನಿರೂಪ್ ಬಂಡಾರಿ ನೀತ ಅಶೋಕ್ ಪ್ರಕಾರ ವಿಕ್ರಾಂತ್ ರೋಣ ಹಾಗು ಫ್ಯಾಂಟಮ್‌ಗೆ ಸಂಭಂದಾನೇ ಇಲ್ಲ | Filmibeat Kannada

  ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಪ್ರಶಸ್ತಿ-ನಾದದ ನವನೀತ

  English summary
  68th National Film Awards 2022 : Here's the complete list of winners, Know More.
  Friday, July 22, 2022, 19:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X