For Quick Alerts
  ALLOW NOTIFICATIONS  
  For Daily Alerts

  68ನೇ ರಾಷ್ಟ್ರಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

  By ಫಿಲ್ಮಿಬೀಟ್ ಡೆಸ್ಕ್
  |

  ಭಾರತದಲ್ಲಿ ಸಿನಿಮಾ ಕ್ಷೇತ್ರಕ್ಕೆ ನೀಡಲಾಗುವ ಅತ್ಯುತ್ತಮ ಪ್ರಶಸ್ತಿಯಂದ್ರೆ ಅದು ರಾಷ್ಟ್ರ ಪ್ರಶಸ್ತಿ. ಜುಲೈ 22 ರಂದು 68ನೇ ರಾಷ್ಟ್ರ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಸುಮಾರು 305 ಸಿನಿಮಾಗಳನ್ನು ಪರಿಗಣನೆಗೆ ತೆಗೆದುಕೊಂಡು ಅವುಗಳಲ್ಲಿ ಅತ್ಯುತ್ತಮವಾದುದ್ದನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

  ನಿನ್ನೆ(ಸೆಪ್ಟೆಂಬರ್ 30) 68ನೇ ರಾಷ್ಟ್ರ ಪ್ರಶಸ್ತಿಯನ್ನು ನವದೆಹಲಿಯ ವಿಗ್ಯಾನ್ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ವಿಜೇತರಿಗೆ ಪ್ರದಾನ ಮಾಡಿದ್ದಾರೆ. ಈ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಆದವರೆಲ್ಲರೂ ರಾಷ್ಟ್ರಪತಿಗಳಿಗೆ ಪ್ರಶಸ್ತಿಯನ್ನು ಪಡೆದಿದ್ದಾರೆ.

  ನವದೆಹಲಿಯಲ್ಲಿ ನಡೆದ 68ನೇ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡದ 'ಡೊಳ್ಳು' ಸಿನಿಮಾಗೆ ಪ್ರಶಸ್ತಿಗೆ ಆಯ್ಕೆ ಆಗಿತ್ತು. ನಿರ್ಮಾಪಕ ಪವನ್ ಒಡೆಯರ್ ತಮ್ಮ ಸಿನಿಮಾಗೆ ಸಿಕ್ಕ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಹಾಗೇ ದಿವಂಗತ ಸಂಚಾರಿ ವಿಜಯ್ ನಟನೆಯ 'ತಲೆದಂಡ', ಗಿರೀಶ್ ಕಾಸರವಳ್ಳಿ ನಿರ್ದೇಶನದ 'ನಾದದ ನವನೀತ'ಗೆ ಪ್ರಶಸ್ತಿ ನೀಡಲಾಗಿದೆ.

  ಹಾಗೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪ್ರಶಸ್ತಿಯನ್ನು'ಸೂರರೈ ಪೋಟ್ರು' ಗಿಟ್ಟಿಸಿಕೊಂಡಿದೆ. ಅಜಯ್ ದೇವಗನ್ ಹಾಗೂ ನಟ ಸೂರ್ಯಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 'ಸೂರರೈ ಪೋಟ್ರು' ಚಿತ್ರಕ್ಕಾಗಿಯೇ ಅಪರ್ಣಾ ಬಾಲಮುರಳಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.

  68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದ ಪಟ್ಟಿ

  ಅತ್ಯುತ್ತಮ ಚಲನ ಚಿತ್ರ: ಸೂರರೈ ಪೋಟ್ರು
  ಸಂಪೂರ್ಣ ಮನರಂಜನಾ ಚಿತ್ರ: ತಾನಾಜಿ: ದಿ ಅನ್‌ಸಂಗ್ ವಾರಿಯರ್
  ಅತ್ಯುತ್ತಮ ನಟ: ಸೂರ್ಯ( ಸೂರರೈ ಪೋಟ್ರು), ಅಜಯ್ ದೇವಗನ್(ತಾನಾಜಿ: ದಿ ಅನ್‌ಸಂಗ್ ವಾರಿಯರ್)
  ಅತ್ಯುತ್ತಮ ನಟ: ಅಪರ್ಣ ಬಾಲಮುರಳಿ ( ಸೂರರೈ ಪೋಟ್ರು)
  ಅತ್ಯುತ್ತಮ ಚಿತ್ರಕಥೆ: ಸೂರರೈ ಪೋಟ್ರು
  ಅತ್ಯುತ್ತಮ ನಿರ್ದೇಶನ: ಸಚ್ಚಿದಾನಂದನ್ ಕೆಆರ್ (ಅಯ್ಯಪ್ಪನುಂ ಕೋಶಿಯುಂ)
  ಅತ್ಯುತ್ತಮ ಕನ್ನಡ ಸಿನಿಮಾ: ಡೊಳ್ಳು (ಕನ್ನಡ)
  ಅತ್ಯುತ್ತಮ ಆಡಿಯೋಗ್ರಫಿ: ಡೊಳ್ಳು (ಕನ್ನಡ)
  ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರ: ತಲೆದಂಡ (ಕನ್ನಡ)
  ಸಾಂಸ್ಕೃತಿಕ ವಿಭಾಗದ ಸಿನಿಮಾ: ನಾದದ ನವನೀತ (ಕನ್ನಡ)
  ಅತ್ಯುತ್ತಮ ಮಕ್ಕಳ ಸಿನಿಮಾ: ಸುಮಿ (ಮರಾಠಿ)

  68th National Film Awards Presented By President Droupadi Murmu All Winners

  68ನೇ ರಾಷ್ಟ್ರ ಪ್ರಶಸ್ತಿಗೆ ಸುಮಾರು 30 ಭಾಷೆಗಳಿಂದ ವಿಭಿನ್ನ ಸಿನಿಮಾಗಳು ಬಂದಿದ್ದವು. ಸಿನಿಮೇತರ ವಿಭಾಗದಲ್ಲಿ 28 ಭಾಷೆಗಳಲ್ಲಿ 148 ಸಿನಿಮಾಗಳು ಬಂದಿತ್ತು. ಈ ಎಲ್ಲಾ ಸಿನಿಮಾಗಳನ್ನು ಪರಿಗಣನೆಗೆ ತೆಗೆದುಕೊಂಡು ರಾಷ್ಟ್ರ ಪ್ರಶಸ್ತಿಗೆ ಸಿನಿಮಾಗಳನ್ನು ಆಯ್ಕೆ ಮಾಡಲಾಗಿತ್ತು.
  English summary
  68th National Film Awards Presented By President Droupadi Murmu All Winners, Know More.
  Saturday, October 1, 2022, 13:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X