69th National Film Awards: ವಿಜೇತರಿಗೆ ರಾಷ್ಟ್ರಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯಲ್ಲಿ ನೆರವೇರಿದೆ. 2021ರಲ್ಲಿ ಸೆನ್ಸಾರ್ ಆಗಿದ್ದ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಆಗಸ್ಟ್ 24ರಂದು ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಇಂದು(ಅಕ್ಟೋಬರ್ 17) ದೆಹಲಿಯ ವಿಜ್ಞಾನ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಫೀಚರ್ ಹಾಗೂ ನಾನ್ ಫೀಚರ್ ವಿಭಾಗಗಳಲ್ಲಿ ಹಲವರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 'ಪುಷ್ಪ' ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಇನ್ನು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಆಲಿಯಾ ಭಟ್ ಹಾಗೂ ಕೃತಿ ಸನೂನ್ ಹಂಚಿಕೊಂಡಿದ್ದಾರೆ. ಗಂಗೂಬಾಯಿ ಕಥಿಯಾವಾಡ ಚಿತ್ರದ ನಟನೆಗಾಗಿ ಆಲಿಯಾ ಪ್ರಶಸ್ತಿ ಸ್ವೀಕರಿಸಿದರೆ 'ಮಿಮಿ' ಚಿತ್ರ ಅಭಿನಯಕ್ಕಾಗಿ ಕೃತಿ ಪ್ರಶಸ್ತಿ ಪಡೆದರು.

69th-National-Film-Awards-ceremony

ಈ ಬಾರಿ ಕನ್ನಡಕ್ಕೆ 4 ರಾಷ್ಟ್ರಪ್ರಶಸ್ತಿಗಳು ಸಿಕ್ಕಿದು ವಿಶೇಷ. ಅತ್ಯುತ್ತಮ ಕನ್ನಡ ಸಿನಿಮಾ ವಿಭಾಗದಲ್ಲಿ '777 ಚಾರ್ಲಿ' ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ. ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಪ್ರಶಸ್ತಿ ಪಡೆದರು. 'ಬಾಳೇ ಬಂಗಾರ' ಸಾಕ್ಷ್ಯಚಿತ್ರಕ್ಕೂ ಸ್ಪೆಷಲ್‌ ಮೆನ್ಷನ್‌ ವಿಭಾಗದಲ್ಲಿ ಅನಿರುದ್ಧ್ ಜತ್ಕರ್ ಪ್ರಶಸ್ತಿ ಸ್ವೀಕರಿಸಿದರು. ಅತ್ಯುತ್ತಮ ಅನ್ವೇಷಣಾ ಸಿನಿಮಾ ವಿಭಾಗದಲ್ಲಿ 'ಆಯುಷ್ಮಾನ್‌' ಸಾಕ್ಷ್ಯಚಿತ್ರಕ್ಕಾಗಿ ಜೇಕಬ್ ವರ್ಗೀಸ್ ಹಾಗೂ ಹಿರಿಯ ಪತ್ರಕರ್ತ ಬಿ. ಎನ್‌ ಸುಬ್ರಮಣ್ಯ ತೀರ್ಪುಗಾರರ ಸ್ಪೆಷಲ್ ಮೆನ್ಷನ್‌ ಪ್ರಶಸ್ತಿ ಪಡೆದಿದ್ದು ವಿಶೇಷ.

ಬಿಳಿ ಬಣ್ಣದ ಕುರ್ತಾ ಸೆಟ್‌ ಧರಿಸಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡರು. ಇನ್ನು ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ದ ಅರ್ಜುನ್, ತಗ್ಗದೇ ಲೇ ಡೈಲಾಗ್ ಹೊಡೆದು ರಂಗೇರಿಸಿದರು. ಇನ್ನು ತೆಲುಗಿನಲ್ಲಿ ಹಲವರಿಗೆ ಪ್ರಶಸ್ತಿ ಲಭಿಸಿದ್ದು ಎಲ್ಲರೂ ಪ್ರಶಸ್ತಿ ಪಡೆಯುವುದನ್ನು ಬನ್ನಿ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದರು. 'RRR' ರಾಜಮೌಳಿ, ಕೀರವಾಣಿ, ಪ್ರೇಮ್ ರಕ್ಷಿತ್, ದೇವಿಶ್ರೀ ಪ್ರಸಾದ್ ಪ್ರಶಸ್ತಿ ಸ್ವೀಕರಿಸಿದರು.

69th-National-Film-Awards-ceremony

ಪತಿ ರಣ್‌ಬೀರ್ ಕಪೂರ್ ಜೊತೆ ಆಲಿಯಾ ಭಟ್ ರಾಷ್ಟ್ರಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದರು. ತಮ್ಮ ಮದುವೆಯಲ್ಲಿ ಉಟ್ಟಿದ್ದ ಬಿಳಿ ಬಣ್ಣದ ಸಬ್ಯಾಸಾಚಿ ಸೀರೆಯನ್ನೇ ಕಾರ್ಯಕ್ರಮಕ್ಕೆ ಉಟ್ಟಿದ್ದರು. 'ಮಿಮಿ' ಚಿತ್ರದ ನಟನೆಗೆ ಪ್ರಶಸ್ತಿ ಪಡೆದ ಕೃತಿ ಸನೂನ್, ಪಾಸ್ತೆಲ್ ಸೀರೆ ಉಟ್ಟು ಕಂಗೊಳಿಸಿದರು. ತಾಯಿ ಕೃತಿಗೆ ಸಾಥ್ ಕೊಟ್ಟರು.

'ಬಾಳೆ ಬಂಗಾರ' ಸಾಕ್ಷ್ಯಚಿತ್ರ ನಿರ್ದೇಶಿಸಿ ಗೆದ್ದ ಅನಿರುದ್ಧ್ ಜತ್ಕರ್ ಸ್ಟೈಲಿಶ್ ಶೆರ್ವಾನಿಯಲ್ಲಿ ಮಿಂಚಿದು. ರಕ್ಷಿತ್ ಶೆಟ್ಟಿ ಸೂಟ್ ಧರಿಸಿ ವೇದಿಕೆ ಏರಿದ್ದರು.

More from Filmibeat

English summary
69th National Film Awards Winners Felicitated by President Droupadi Murmu;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X