twitter
    For Quick Alerts
    ALLOW NOTIFICATIONS  
    For Daily Alerts

    ರಿಯಲ್ ಘಟನೆಗಳ ಸುತ್ತ ಸುತ್ತಲಿದೆ '6ನೇ ಮೈಲಿ' ಸಿನಿಮಾ

    By Naveen
    |

    '6ನೇ ಮೈಲಿ' ಸಿನಿಮಾ ಅನೇಕ ವಿಶೇಷತೆಗಳನ್ನು ಹೊಂದಿದೆ. ಈಗ ಚಿತ್ರದ ಮತ್ತೊಂದು ಕುತೂಹಲಕಾರಿ ವಿಷಯವನ್ನು ನಿರ್ದೇಶಕ ಸೀನಿ ಹಂಚಿಕೊಂಡಿದ್ದಾರೆ.

    2010 ರಿಂದ 2014ರಲ್ಲಿ ಪಶ್ಚಿಮ ಘಟ್ಟಗಳಲ್ಲಿ ನಡೆದಿರುವ ಘಟನೆಯನ್ನು ಆಧಾರವಾಗಿ ಇಟ್ಟುಕೊಂಡು ಈ ಚಿತ್ರದ ಕಥೆ ಮಾಡಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಇದ್ದ ದರೋಡೆಕೋರರ ಹಿನ್ನಲೆ ಏನು? ಅವರು ಹೇಗೆ ಆ ಸ್ಥಳಕ್ಕೆ ಬರುತ್ತಿದ್ದ ಪ್ರವಾಸಿಗರನ್ನು ಬೆಚ್ಚಿ ಬೀಳಿಸುತ್ತಿದ್ದರು ಎಂಬುದನ್ನು '6ನೇ ಮೈಲಿ' ಸಿನಿಮಾದಲ್ಲಿ ಥ್ರಿಲ್ಲಿಂಗ್ ಆಗಿ ತೋರಿಸಲಾಗಿದೆಯಂತೆ.

    ಇದರ ಜೊತೆಗೆ '6ನೇ ಮೈಲಿ' ಚಿತ್ರದಲ್ಲಿ ನಕ್ಸಲ್ ಶೇಡ್ ಇದೆ ಎನ್ನುವುದು ವಿಶೇಷ. ಹೀಗಿದ್ದರೂ, ಇಲ್ಲಿ ನಕ್ಸಲಿಸಂ ಬಗ್ಗೆ ಪಾಸಿಟಿವ್ ಅಥವಾ ನೆಗೆಟಿವ್ ಯಾವುದೇ ಅಂಶವನ್ನು ಹೇಳಿಲ್ಲವಂತೆ. ಉಳಿದಂತೆ, ಚಿತ್ರದ ಚಿತ್ರೀಕರಣವನ್ನು ಶಿರಸಿ, ಯಲ್ಲಾಪುರದ ಕಾಡಿನಲ್ಲಿ ಮಾಡಲಾಗಿದೆ.

    6ne maili kannada movie is based on real incidence

    ದಟ್ಟ ಅರಣ್ಯದ ಮಧ್ಯೆ ಚಿತ್ರದ ಶೂಟಿಂಗ್ ಮಾಡಿದ್ದು, ಕಲಾವಿದರು ಹಾಗೂ ತಂತ್ರಜ್ಞರು ಸೇರಿದಂತೆ 100 ರಿಂದ 120 ಜನರ ತಂಡ ಹಗಲು ಇರುಳು ಕಷ್ಟ ಪಟ್ಟಿದೆ. ಜನರ ಸಂಪರ್ಕ ಇರಲಿ ಮೊಬೈಲ್ ಸಿಗ್ನಲ್ ಕೂಡ ಸಿಗದ ಜಾಗದಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆಯಂತೆ.

    ನಿರ್ದೇಶಕ ಸೀನಿ ತಮಗೆ ಆದ ಅನುಭವನ್ನು ಸಿನಿಮಾ ಮಾಡಿದ್ದು, ಅವರ ಕನಸಿನ ಸಿನಿಮಾ ಜುಲೈ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

    English summary
    Kannada actor Sanchari Vijay starrer Kannada Movie '6ne maili' is based on real incidents.
    Thursday, June 28, 2018, 18:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X