ಟ್ರೆಕ್ಕಿಂಗ್ ಮೂಲಕ '6ನೇ ಮೈಲಿ' ಚಿತ್ರತಂಡ ವಿನೂತನ ಪ್ರಚಾರ
ಸಿನಿಮಾದಲ್ಲಿ ಹೊಸತನವನ್ನು ತೋರಿಸಿದ್ದ '6ನೇ ಮೈಲಿ' ಚಿತ್ರತಂಡ ಈಗ ಚಿತ್ರದ ಪ್ರಚಾರದಲ್ಲಿಯೂ ಹೊಸತನವನ್ನು ತೋರಿಸಿದೆ. ಟ್ರೆಕ್ಕಿಂಗ್ ಮೂಲಕ ಚಿತ್ರದ ಪ್ರಮೋಷನ್ ಅನ್ನು '6ನೇ ಮೈಲಿ' ಚಿತ್ರತಂಡ ವಿಭಿನ್ನವಾಗಿ ಮಾಡಿದೆ.
'6ನೇ ಮೈಲಿ' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಟ್ರೆಕ್ಕಿಂಗ್ ಪ್ಲಾನ್ ಮಾಡಿತ್ತು. ಇದರಲ್ಲಿ ಚಿತ್ರದ ನಾಯಕ ಸಂಚಾರಿ ವಿಜಯ್, ನಿರ್ಮಾಪಕ ಶೈಲೇಶ್ ಕುಮಾರ್, ನಿರ್ದೇಶಕ ಸೀನಿ, ಸಂಗೀತ ನಿರ್ದೇಶಕ ಸಾಯಿಕಿರಣ್ ಹಾಗೂ ಇಡೀ ಚಿತ್ರತಂಡ ಭಾಗಿಯಾಗಿತ್ತು. ಆಕರ್ಷ್ ಹಾಗೂ ಪುನೀತ್ ಸಾರಥ್ಯದ ಟಿ.ಬಿ.ಆರ್ ಎಂಬ ಬೈಕರ್ ಗ್ರೂಪ್ ಕೂಡ ಈ ಟ್ರೆಕ್ಕಿಂಗ್ ನಲ್ಲಿ ಪಾಲ್ಗೊಂಡಿದ್ದರು.

ಅಂದಹಾಗೆ, ಈ ಟ್ರೆಕ್ಕಿಂಗ್ ಅನ್ನು ಸಿನಿಮಾದ ಪ್ರಚಾರಕ್ಕೆ ಮಾತ್ರ ಸೀಮಿತವಾಗಿಡದೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಹ ಚಿತ್ರತಂಡ ಮಾಡಿದೆ. ಟ್ರೆಕ್ಕಿಂಗ್ ಹೋಗುವ ಸಮಯದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಜನರಿಗೆ ತಿಳಿ ಹೇಳಿದೆ.

ಈಗಾಗಲೇ '6ನೇ ಮೈಲಿ' ಸಿನಿಮಾದ ಟ್ರೇಲರ್ ಸೂಪರ್ ಹಿಟ್ ಆಗಿದೆ. ಯೂಟ್ಯೂಬ್ ನಲ್ಲಿ ಟ್ರೇಲರ್ ರಿಲೀಸ್ ಆದ ಮೂರೇ ದಿನಗಳಲ್ಲಿ ಮೂರು ಲಕ್ಷದ ಗಡಿಯಲ್ಲಿ ಬಂದಿದೆ. '6ನೇ ಮೈಲಿ' 6ನೇ ತಾರೀಖು ಚಿತ್ರಮಂದಿರಕ್ಕೆ ಬರಲಿದೆ.


Click it and Unblock the Notifications











