ಜನ ಮೆಚ್ಚಿದ '6ನೇ ಮೈಲಿ'ಯಲ್ಲೊಂದು ಯಶಸ್ವಿ ಜರ್ನಿ ಮಾಡಬಹುದು

By Bharath Kumar

ಸಂಚಾರಿ ವಿಜಯ್ ಮತ್ತು ಆರ್.ಜೆ ನೇತ್ರಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ '6ನೇ ಮೈಲಿ' ಸಿನಿಮಾ ಈ ವಾರವಷ್ಟೇ ತೆರೆಕಂಡಿದ್ದು, ಎಲ್ಲೆಡೆ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ.

ಟ್ರೈಲರ್ ನಲ್ಲಿ ಮೂಡಿಸಿದ್ದ ಕುತೂಹಲವನ್ನ ಸಿನಿಮಾದಲ್ಲೂ ಹಿಡಿದಿಟ್ಟುಕೊಂಡು ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ದಿನ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಂಡಿರುವ ಚಿತ್ರಕ್ಕೆ ಕನ್ನಡ ಕಲಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಸೀನಿ, ಥಿಯೇಟರ್ ಗೆ ಬರುವ ಪ್ರೇಕ್ಷಕರನ್ನ ನಿರಾಸೆ ಮಾಡದಿರುವುದು ಚಿತ್ರಕ್ಕೆ ಸಿಕ್ಕಿರುವ ಯಶಸ್ಸು ಎಂದೇ ಹೇಳಬಹುದು.

6ne Maili movie first day respons

ಸಸ್ಪೆನ್ಸ್, ಥ್ರಿಲ್ಲರ್, ಕ್ರೈಂ... ಈ ಎಲ್ಲಾ ಅಂಶಗಳು ಹದವಾಗಿ ಬೆರೆತಿರುವ ಸಿನಿಮಾ '6ನೇ ಮೈಲಿ'. ಕಡೆಯವರೆಗೂ ಪ್ರೇಕ್ಷಕರನ್ನ ಅತ್ತಿತ್ತ ಅಲುಗಾಡದಂತೆ '6ನೇ ಮೈಲಿ'ಯಲ್ಲೇ ಕಟ್ಟಿ ಹಾಕಿ ಕೂರಿಸುವಲ್ಲಿ ಚಿತ್ರತಂಡ ಯಶಸ್ವಿ ಆಗಿದೆ. ಪೂರ್ತಿ ವಿಮರ್ಶೆ ಓದಿರಿ

ಇನ್ನು ಚಿತ್ರದಿಂದ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದ ಸಂಚಾರಿ ವಿಜಯ್ ಈ ಚಿತ್ರದಲ್ಲೂ ಹೊಸ ಶೈಲಿಯಲ್ಲಿ ಚಿತ್ರಪ್ರೇಮಿಗಳನ್ನ ರಂಜಿಸಿದ್ದಾರೆ. ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಹಾಫ್ ನಲ್ಲಿ ಒಂಥರಾ ಎಂಟ್ರಿಕೊಟ್ಟರೆ, ಸೆಕೆಂಡ್ ಹಾಫ್ ನಲ್ಲಿ ಅವರ ಖದರ್ರೇ ಬೇರೆ.! ಎರಡೂ ಶೇಡ್ ಗಳನ್ನ ನೀಟಾಗಿ ಬ್ಯಾಲೆನ್ಸ್ ಮಾಡಿದ್ದಾರೆ ಸಂಚಾರಿ ವಿಜಯ್. ಆರ್.ಜೆ.ನೇತ್ರ ಕೂಡ ತಮ್ಮ ಅಭಿನಯದಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ.

6ne Maili movie first day respons

ಇನ್ನುಳಿದಂತೆ ಸಿನಿಮಾ ಮೇಕಿಂಗ್, ಹಿನ್ನಲೆ ಸಂಗೀತ, ಕಲಾವಿದರ ಫರ್ಫಾಮೆನ್ಸ್ ಎಲ್ಲದರಿಂದಲೂ ಒಂದೊಳ್ಳೆ ಸಿನಿಮಾ ಎನಿಸಿಕೊಂಡಿದೆ. ಹೀಗಾಗಿ, ಇತ್ತೀಚಿಗೆ ತೆರೆಕಂಡಿದ್ದ ಚಿತ್ರಗಳಲ್ಲಿ ನೋಡಲು ಉತ್ತಮ ಆಯ್ಕೆಯೂ ಇದಾಗಿದೆ.

More from Filmibeat

English summary
Kannada Actor Sanchari Vijay and RJ Netra starrer Kannada Movie '6ne Maili' has released yesterday (july 6th). the movie get good respons from audience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X