For Quick Alerts
  ALLOW NOTIFICATIONS  
  For Daily Alerts

  ದರ್ಶನ್ ' ನಾರಾಯಣ್ ಮತ್ತೆ ಜೋಡಿಯಾದ್ರು ನೋಡಿ

  |
  <ul id="pagination-digg"><li class="next"><a href="/news/7-s-narayan-darshan-past-controversy-aid0172.html">Next »</a></li></ul>

  ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ದೇಶಕ 'ಕಲಾಸಾಮ್ರಾಟ್' ಎಸ್ ನಾರಾಯಣ್ ಚಿತ್ರದಲ್ಲಿ ಮತ್ತೆ ನಟಿಸಲಿದ್ದಾರೆ. ಅದೂ ಬರೋಬ್ಬರಿ 14 ವರ್ಷಗಳ ನಂತರ. ದರ್ಶನ್ ಚಿಂಗಾರಿ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಬೆನ್ನಲ್ಲೇ ಸಿನಿಪ್ರೇಕ್ಷಕರಿಗೆ ಈ ಹೊಸ ಸುದ್ದಿ ಸಿಕ್ಕಿ ಸಂತಸಗೊಂಡಿದ್ದಾರೆ.

  ಈ ಚಿತ್ರವನ್ನು ಸ್ವತಃ ನಾರಾಯಣ್ ನಿರ್ಮಿಸುತ್ತಿದ್ದಾರೆ, ನಿರ್ದೇಶಿಸುತ್ತಿದ್ದಾರೆ. 14 ಕೋಟಿ ರೂಪಾಯಿಗಳ ಭಾರೀ ಬಜೆಟ್ ಚಿತ್ರವಿದು. ಆದರೆ ಈ ಚಿತ್ರ ರೀಮೇಕ್ ಅಥವಾ ಸ್ವಮೇಕ್ ಎಂಬ ಮಾಹಿತಿ ಲಭ್ಯವಿಲ್ಲ. ನಾಯಕಿ, ಪ್ರಮುಖ ಪೋಷಕನಟರು, ಸ್ಪೆಷಲ್ ಪಾತ್ರಧಾರಿಗಳು, ಹೀಗೆ ಮಿಕ್ಕೆಲ್ಲ ಮಾಹಿತಿ ಇನ್ನೂ ಸಿಗಬೇಕಿದೆ.

  ಹದಿನಾಲ್ಕು ವರ್ಷಗಳ ಹಿಂದೆ ಎಸ್ ನಾರಾಯಣ್ ನಿರ್ದೇಶನದ ಚರಣರಾಜ್, ವಿನೋದ್ ರಾಜ್ ತಾರಾಗಣದ 'ಮಹಾಭಾರತ' ಎಂಬ ಚಿತ್ರದಲ್ಲಿ ದರ್ಶನ್ ನಟಿಸಿದ್ದರು. ಆಗ ಸ್ಟಾರ್ ಹಾಗಿರಲಿ, ನಟನಾಗಿಯೂ ದರ್ಶನ್ ಸೆಟ್ಲ್ ಆಗಿರಲಿಲ್ಲ. ಈಗ 'ಬಾಕ್ಸ್ ಆಫೀಸ್ ಸುಲ್ತಾನ್' ಎನಿಸಿಕೊಂಡಿರುವ ದರ್ಶನ್ ರನ್ನು ಹಾಕಿಕೊಂಡು ನಾರಾಯಣ್ ಚಿತ್ರ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ಇದು ಆಶ್ಚರ್ಯ ಪಡಬೇಕಾದ ಸಂಗತಿ ಯಾಕೆಂದರೆ ಇದೇ ದರ್ಶನರನ್ನು 'ಇದೇ' ನಾರಾಯಣ್ 'ದುರಂಹಕಾರಿ' ಎಂದು ಜರೆದಿದ್ದರು. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/7-s-narayan-darshan-past-controversy-aid0172.html">Next »</a></li></ul>
  English summary
  Director S Narayan produces Movie for Challenging Star Darshan. Not only producing, S Narayan directing this movie. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X