'ಬಾಹುಬಲಿ' ಚಿತ್ರವನ್ನ ರಿಜೆಕ್ಟ್ ಮಾಡಿದ್ದ ಅತಿರಥ ಮಹಾರಥರಿವರು.!
ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಇಂದು ಜಗತ್ತಿನಾದ್ಯಂತ ಚರ್ಚೆ ಆಗುತ್ತಿರುವ ಮೆಗಾ ಸಿನಿಮಾ. ಭಾರತೀಯ ಬಾಕ್ಸ್ ಆಫೀಸ್ ನಲ್ಲಂತೂ 'ಬಾಹುಬಲಿ' ಚಿತ್ರದ್ದೇ ದರ್ಬಾರ್. 1000 ಕೋಟಿ ಗಳಿಸುವ ಮೂಲಕ ಇಡೀ ಚಿತ್ರ ಜಗತ್ತಿನಲ್ಲಿ ಹೊಸ ದಾಖಲೆ ಬರೆದಿದೆ.
'ಬಾಹುಬಲಿ' ಚಿತ್ರದಲ್ಲಿ ನಟಿಸಿದ ಕಲಾವಿದರು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಇನ್ಮುಂದೆ ಇವರ ಕಾಲ್ ಶೀಟ್ ಸಿಗುವುದು ತೀರಾ ಕಷ್ಟ ಎನ್ನುವ ಮಟ್ಟಕ್ಕೆ ಆಫರ್ ಗಳು ಬರುತ್ತಿದೆ. ಆದ್ರೆ, ನಿಮಗೆಲ್ಲಾ ಗೊತ್ತಿರಲಿ, 'ಬಾಹುಬಲಿ' ಚಿತ್ರದಲ್ಲಿ ಅಭಿನಯಿಸಿರುವ ಪ್ರಮುಖ ಪಾತ್ರಗಳಲ್ಲವೂ ಈ ಮೊದಲು ಬೇರೆ ಕಲಾವಿದರು ಮಾಡಬೇಕಿತ್ತು.
ಅದರಲ್ಲೂ ಬಾಲಿವುಡ್ ನ ಸೂಪರ್ ಸ್ಟಾರ್ ತಾರೆಯರಿಗೆ ಈ ಆಫರ್ ಮೊದಲು ಹೋಗಿತ್ತಂತೆ. ಆದ್ರೆ, ಅವರೆಲ್ಲರೂ ಈ ಸೌತ್ ಸಿನಿಮಾವನ್ನ ರಿಜೆಕ್ಟ್ ಮಾಡಿದ್ದರಂತೆ. ಅಂದು ಅವರೆಲ್ಲ ರಿಜೆಕ್ಟ್ ಮಾಡಿದ 'ಬಾಹುಬಲಿ' ಇಂದು ವಿಶ್ವವೇ ಮಾತನಾಡುವಂತಾಗಿದೆ.
ಅಷ್ಟಕ್ಕೂ, 'ಬಾಹುಬಲಿ' ಚಿತ್ರವನ್ನ ರಿಜೆಕ್ಟ್ ಮಾಡಿದ ಆ 7 ಸೂಪರ್ ಸ್ಟಾರ್ ತಾರೆಯರು ಯಾರು ಎಂದು ಮುಂದೆ ನೋಡಿ.....

'ಬಲ್ಲಾಳದೇವ'ನಾಗಬೇಕಿದ್ದ ಜಾನ್ ಅಬ್ರಾಹಂ
'ಬಾಹುಬಲಿ' ಚಿತ್ರದಲ್ಲಿ ರಾಣಾ ದಗ್ಗುಬಾಟಿ ಅಭಿನಯಿಸಿರುವ 'ಬಲ್ಲಾಳದೇವ'ನ ಪಾತ್ರಕ್ಕೆ ಮೊದಲು ಆಫರ್ ಬಂದಿದ್ದೇ ಬಾಲಿವುಡ್ ನಟ ಜಾನ್ ಅಬ್ರಾಹಂ ಅವರಿಗಂತೆ. ಆದ್ರೆ, ಸ್ಕ್ರಿಪ್ಟ್ ಕೇಳಿದ್ದ ಜಾನ್ ಅಬ್ರಾಹಂ ರಾಜಮೌಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಂತೆ. ಹೀಗಾಗಿ, ಜಾನ್ ಈ ಚಿತ್ರವನ್ನ ರಿಜೆಕ್ಟ್ ಮಾಡಿದ್ದರಂತೆ.

ವಿವೇಕ್ ಒಬೆರಾಯ್ ಕೂಡ ಒಪ್ಪಲಿಲ್ಲ!
ಜಾನ್ ಅಬ್ರಾಹಂ ನಂತರ 'ಬಲ್ಲಾಳದೇವ'ನ ಪಾತ್ರಕ್ಕಾಗಿ ವಿವೇಕ್ ಒಬೆರಾಯ್ ಅವರನ್ನ ಕೂಡ ಸಂಪರ್ಕ ಮಾಡಲಾಗಿತ್ತಂತೆ. ಆದ್ರೆ, ವಿವೇಕ್ ಒಬೆರಾಯ್ ತಮ್ಮ ಬ್ಯುಸಿ ಶೆಡ್ಯೂಲ್ ನಿಂದ ಈ ಚಿತ್ರವನ್ನ ಬಿಟ್ಟರಂತೆ.

'ಕಟ್ಟಪ್ಪ' ಆಗಲಿಲ್ಲ ಮೋಹನ್ ಲಾಲ್!
'ಬಾಹುಬಲಿ' ಚಿತ್ರದಲ್ಲಿ ಸತ್ಯರಾಜ್ ಅಭಿನಯಿಸಿರುವ 'ಕಟ್ಟಪ್ಪ'ನ ಪಾತ್ರ ಬಹುಮುಖ್ಯವಾದದು. ಈ ಮೊದಲು ಮಲಯಾಳಂ ನಟ ಮೋಹನ್ ಲಾಲ್ ಅವರು ಈ ಪಾತ್ರವನ್ನ ಮಾಡಬೇಕಾಗಿತ್ತಂತೆ. ಕಾರಣಾಂತರಗಳಿಂದ ಮಾಡಲಿಲ್ಲ. ನಂತರ ಕಟ್ಟಪ್ಪ ಆಗಿದ್ದು ತಮಿಳು ನಟ ಸತ್ಯರಾಜ್.

ಆವಂತಿಕಾ ಸೋನಮ್ ಕಪೂರ್!
ಇನ್ನು ತಮನ್ನ ಭಾಟಿಯಾ ಕಾಣಿಸಿಕೊಂಡಿದ್ದ ಆವಂತಿಕಾ ಪಾತ್ರವನ್ನ ಬಾಲಿವುಡ್ ನಟಿ ಸೋನಮ್ ಕಪೂರ್ ರಿಜೆಕ್ಟ್ ಮಾಡಿದ್ದರಂತೆ. 'ಬಾಹುಬಲಿ ದಿ ಬಿಗಿನಿಂಗ್' ಚಿತ್ರದಲ್ಲಿ ಆವಂತಿಕಾ ಆಗಿ ಬಣ್ಣ ಹಚ್ಚಲು ಮೊದಲು ಸೋನಮ್ ಗೆ ಆಫರ್ ಮಾಡಲಾಗಿತ್ತು.

ನಯನತಾರ ಆಗಲಿಲ್ಲ 'ದೇವಸೇನಾ'!
ಅನುಷ್ಕಾ ಶೆಟ್ಟಿ ನಿರ್ವಹಿಸಿರುವ 'ದೇವಸೇನಾ' ಪಾತ್ರವನ್ನ ಮೊದಲು ದಕ್ಷಿಣ ಭಾರತದ ಮತ್ತೊಬ್ಬ ನಟಿ ನಯನತಾರ ಮಾಡಬೇಕಿತ್ತು. ಆದ್ರೆ, ನಯನತಾರ ಈ ಚಿತ್ರವನ್ನ ಒಪ್ಪಿಕೊಳ್ಳಲಿಲ್ಲವಂತೆ. ನಂತರ ಇದು ಅನುಷ್ಕಾ ಶೆಟ್ಟಿ ಪಾಲಾಯಿತು.

ರಾಜಮಾತ 'ಶಿವಗಾಮಿ'
ಇನ್ನು 'ಬಾಹುಬಲಿ' ಚಿತ್ರದಲ್ಲಿ ರಾಜಮಾತ ಶಿವಗಾಮಿದೇವಿ ಪಾತ್ರ ಅತಿ ಮುಖ್ಯವಾದದು. ಈ ಪಾತ್ರದಲ್ಲಿ ರಮ್ಯಾಕೃಷ್ಣ ಅವರು ಅಭಿನಯ ಅಮೋಘ. ಈ ಪಾತ್ರಕ್ಕಾಗಿ ಮೊದಲು ಶ್ರೀದೇವಿ ಅವರನ್ನ ಸಂಪರ್ಕಿಸಲಾಗಿತ್ತು ಅಂದ್ರೆ ನಂಬಲೇಬೇಕು. ಆದ್ರೆ, ಸಂಭಾವನೆ ವಿಚಾರದಲ್ಲಿ ಶ್ರೀದೇವಿ ಒಪ್ಪದ ಕಾರಣ ಈ ಚಿತ್ರದಿಂದ ದೂರ ಉಳಿದರು.

'ಬಾಹುಬಲಿ' ಆಗಬೇಕಿದ್ದ ಹೃತಿಕ್ ರೋಷನ್!
ಮೂಲಗಳ ಪ್ರಕಾರ ನಿರ್ದೇಶಕ ರಾಜಮೌಳಿ 'ಬಾಹುಬಲಿ' ಕಥೆ ಮಾಡಿದಾಗ 'ಬಾಹುಬಲಿ' ಪಾತ್ರಕ್ಕಾಗಿ ಬಾಲಿವುಡ್ ನಟ ಹೃತಿಕ್ ರೋಷನ್ ಅವರನ್ನ ಆಯ್ಕೆ ಮಾಡಿಕೊಂಡಿದ್ದರಂತೆ. ಆದ್ರೆ, ಹೃತಿಕ್ ಅದ್ಯಾಕೋ ಈ ಚಿತ್ರದಲ್ಲಿ ಅಭಿನಯಿಸಲು ಆಸಕ್ತಿ ತೋರಲಿಲ್ಲವಂತೆ. ಅಂತಿಮವಾಗಿ ಈ ಪಾತ್ರಕ್ಕೆ ಪ್ರಭಾಸ್ ಜೀವ ತುಂಬಿದರು.


Click it and Unblock the Notifications











