»   » ಈ ವಾರ 7 ಸಿನಿಮಾ ರಿಲೀಸ್, ನಿಮ್ಮ ಆಯ್ಕೆ ಯಾವುದು?

ಈ ವಾರ 7 ಸಿನಿಮಾ ರಿಲೀಸ್, ನಿಮ್ಮ ಆಯ್ಕೆ ಯಾವುದು?

Posted By:
Subscribe to Filmibeat Kannada

ಪ್ರತಿವಾರದಂತೆ ಈ ವಾರವೂ ಕನ್ನಡದಲ್ಲಿ ಸಿನಿಮಾ ಮಳೆ ಆಗಲಿದೆ. ಯಾಕಂದ್ರೆ, ಒಂದಲ್ಲ, ಎಡರಲ್ಲ ಬರೋಬ್ಬರಿ 7 ಕನ್ನಡ ಸಿನಿಮಾಗಳು ಚಿತ್ರಮಂದಿರಕ್ಕೆ ಕಾಲಿಡುತ್ತಿದೆ.

ವಿಶೇಷ ಅಂದ್ರೆ, ಈ ವಾರ ತೆರೆಕಾಣುತ್ತಿರುವ ಬಹುತೇಕ ಚಿತ್ರಗಳು ಹಾರರ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಆಗಿದೆ. ಎಲ್ಲರಿಗೂ ಗೊತ್ತಿರುವಂತೆ 'ಕಾಲೇಜ್ ಕುಮಾರ್', 'ಸಂಯುಕ್ತ-2' ಚಿತ್ರಗಳು ಈ ವಾರ ಎಂಟ್ರಿ ಕೊಡ್ತಿದೆ.

ಹಾಗಿದ್ರೆ, ಈ ಎರಡು ನಿರೀಕ್ಷೆಯ ಸಿನಿಮಾ ಜೊತೆ ಬರ್ತಿರುವ ಉಳಿದ 5 ಚಿತ್ರಗಳು ಯಾವುದು ಎಂದು ತಿಳಿಯಲು ಮುಂದೆ ಓದಿ......

ಚಿತ್ರ - ಕಾಲೇಜ್ ಕುಮಾರ್

ನಿರ್ದೇಶಕ: ಅಲೆಮಾರಿ ಸಂತು
ಕಲಾವಿದರು: ವಿಕ್ಕಿ, ಸಂಯುಕ್ತ ಹೆಗಡೆ, ರವಿಶಂಕರ್, ಶ್ರುತಿ, ಪ್ರಕಾಶ್ ಬೆಳವಾಡಿ, ಸಾಧುಕೋಕಿಲ, ಅಚ್ಯುತ ಕುಮಾರ್ ಮತ್ತು ಇತರರು
ತಂತ್ರಜ್ಞರು: ಅರ್ಜುನ್ ಜನ್ಯ ಸಂಗೀತ, ಎ.ಅನಘನ್ ಛಾಯಾಗ್ರಹಣ
ವಿಶೇಷತೆ ಏನು: ಕೆಂಡ ಸಂಪಿಗೆ ನಾಯಕನ ಎರಡನೇ ಸಿನಿಮಾ. ಶ್ರುತಿ ಮತ್ತು ರವಿಶಂಕರ್ ಕಾಂಬಿನೇಷನ್.

ಚಿತ್ರ- ಸಂಯುಕ್ತ-2

ನಿರ್ದೇಶಕ: ಅಭಿರಾಮ್
ಕಲಾವಿದರು: ಚೇತನ್ ಚಂದ್ರ, ಸಂಜಯ್, ಪ್ರಭು ಸೂರ್ಯ, ನೇಹಾ ಪಾಟೀಲ್, ಐಶ್ವರ್ಯಾ ಸಿಂಧೋಗಿ ಮತ್ತು ಇತರರು
ತಂತ್ರಜ್ಞರು: ಕೆ ರವಿಚಂದ್ರ ಸಂಗೀತ, ರಾಜಶೇಖರ್ ಛಾಯಾಗ್ರಹಣ
ವಿಶೇಷತೆ ಏನು: ಶಿವರಾಜ್ ಕುಮಾರ್ ಅಭಿನಯಿಸಿದ್ದ ಚಿತ್ರದ ಟೈಟಲ್. ಅದೇ ರೀತಿಯ ಸಸ್ಪೆನ್ಸ್ ಥ್ರಿಲ್ಲಿಂಗ್ ಸಿನಿಮಾ.

ಚಿತ್ರ - ಸೈಕೋ ಶಂಕ್ರ

ನಿರ್ದೇಶಕ: ಪುನಿತ್ ಆರ್‍

ಕಲಾವಿದರು: ಪ್ರಣವ್, ಶರತ್ ಲೋಹಿತಾಶ್ವ, ನವರಸನ್, ಯಶಸ್ ಸೂರ್ಯ, ವಿಜಯ್ ಚೆಂಡೂರು, ಪೂಜಾ ಮತ್ತು ಇತರರು

ತಂತ್ರಜ್ಞರು: ಶ್ರೀಧರ್ ಕಶ್ಯಪ್ ಸಂಗೀತ, ರವಿ ಬಸ್ರೂರು ಹಿನ್ನಲೆ ಸಂಗೀತ, ನಿತಿನ್ ಛಾಯಾಗ್ರಹಣ

ವಿಶೇಷತೆ ಏನು: ಅತ್ಯಾಚಾರಿ ಸೈಕೋ ಶಂಕ್ರನ ಕುರಿತ ಸಿನಿಮಾ

ಚಿತ್ರ - ನುಗ್ಗೇಕಾಯಿ

ನಿರ್ದೇಶಕ: ಎ.ವೇಣುಗೋಪಾಲ್
ಕಲಾವಿದರು: ಮಧುಸೂಧನ್, ಎಸ್ತಾರ್ ನರೋನಾ, ಸುಚೇಂದ್ರ ಪ್ರಸಾದ್, ಕ್ರಿಸ್ಟಿನ್ ಜಾಯ್, ಉದಿತ್, ಮುಕುಂದ, ಬ್ಯಾಂಕ್ ಜನಾರ್ಧನ್, ಬಿರಾದರ್ ಮುಂತಾದವರ ತಾರಾಬಳಗವಿದೆ.
ತಂತ್ರಜ್ಞರು: ಸೂರ್ಯಕಾಂತ್ ಹೊನ್ನಾಳಿ ಛಾಯಾಗ್ರಹಣ, ಸುರೇಶ್ ಬಿ.ಎಸ್.ವಿ ಸಾಹಿತ್ಯ ಮತ್ತು ಸಂಗೀತ
ವಿಶೇಷತೆ ಏನು: ಕಾಮಿಡಿ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ

ಚಿತ್ರ- ಬಿಕೋ

ನಿರ್ದೇಶಕ: ಸಂದೀಪ್ ದಕ್ಷ್
ಕಲಾವಿದರು: ರೇವಾ, ರಿಷಿತಾ ಮಲ್ನಾಡ್, ರಾಕ್‌ಲೈನ್ ಸುಧಾಕರ್, ಸಿದ್ದರಾಜು, ಸುಧಾ ಪ್ರಸನ್ನ ಮತ್ತು ಇತರರು
ತಂತ್ರಜ್ಞರು: ಕುಮಾರ್. ಜಿ. ಛಾಯಾಗ್ರಹಣ, ಪೀಟರ್ ಎಸ್ ಜೋಸೆಫ್ ಸಂಗೀತ
ವಿಶೇಷತೆ ಏನು: ಲವ್, ಆಕ್ಷ್ಯನ್, ಕಾಮಿಡಿ ಸಿನಿಮಾ ಬಿಕೋ

ಚಿತ್ರ- ರಾಜರು

ನಿರ್ದೇಶಕ: ಗಿರೀಶ್ ಮೂಲಿಮನಿ
ಕಲಾವಿದರು: ನಿರಂಜನ್ ಕುಮಾರ್ ಶೆಟ್ಟಿ, ಶಾಲಿನಿ, ಪೃಥ್ವಿ ಅಂಬರ್, ಜಗದೀಶ್,
ಶರಣ್ ರಾಜ್, ಖುಷಿ, ಪಲ್ಲಕ್ಕಿ ರಾಧಾಕೃಷ್ಣ, ರಾಕ್‌ಲೈನ್ ಸುಧಾಕರ್ ಮತ್ತು ಇತರರು
ತಂತ್ರಜ್ಞರು: ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ
ವಿಶೇಷತೆ ಏನು: ನಾಲ್ಕು ಜನ ರಾಜರಿಗೆ ಒಬ್ಬ ರಾಣಿ ಎಂಬ ಕಾನ್ಸೆಪ್ಟ್. ಲವ್ ಕಮ್ ಆಕ್ಷನ್ ಸಿನಿಮಾ.

ಚಿತ್ರ: ಅರ್ಧ‌ ತಿಕ್ಲು ಪುಕ್ಲು

ನಿರ್ದೇಶಕ: ಮಂಡ್ಯದ ಬಿ ಕೆ ಅಂಕರಾಜು

ಕಲಾವಿದರು: ಯಶಸ್, ಐಶ್ವರ್ಯ, ಮೈಕಲ್ ಮಧು, ಸಂತೋಷ್ ಮತ್ತು ಇತರರು

ವಿಶೇಷತೆ ಏನು: ಹಾರರ್ ಕಮ್ ಕಾಮಿಡಿ ಸಿನಿಮಾ

English summary
7 Kannada Movies Are Releasing this Week (November 10). here's the details.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X