For Quick Alerts
  ALLOW NOTIFICATIONS  
  For Daily Alerts

  ಈ ವಾರ ಒಂದಲ್ಲ, ಎರಡಲ್ಲ 7 ಕನ್ನಡ ಸಿನಿಮಾಗಳು ರಿಲೀಸ್ ಆಗ್ತಿದೆ.!

  By Bharath Kumar
  |

  ಈ ಶುಕ್ರವಾರ ಗಾಂಧಿನಗರದ ಕಡೆ ಹೋಗುವಾಗ ಸ್ವಲ್ಪ ಯೋಚನೆ ಮಾಡಿ. ಯಾಕಂದ್ರೆ, ಗಲ್ಲಿ ಗಲ್ಲಿಯಲ್ಲೂ ಜಾತ್ರೆ ನಡೆಯುತ್ತಿರುತ್ತೆ. ತಮಟೆ, ಡ್ಯಾನ್ಸ್, ಜನ ಅಂತ ನೋಡಿ ಆಶ್ಚರ್ಯ ಆಗಬೇಡಿ. ಯಾಕಂದ್ರೆ, ಈ ವಾರ ಸ್ಯಾಂಡಲ್ ವುಡ್ ನಲ್ಲಿ ಬರೋಬ್ಬರಿ 7 ಸಿನಿಮಾಗಳು ತೆರೆಕಾಣುತ್ತಿದೆ. ಹೀಗಾಗಿ, ಗಾಂಧಿನಗರದಲ್ಲಿರುವ ಎಲ್ಲ ಚಿತ್ರಮಂದಿರಗಳ ಬಳಿಯೂ ಪ್ರೇಕ್ಷಕರು ಜಮಾಯಿಸಿರುತ್ತಾರೆ.

  ಅರೇ....7 ಸಿನಿಮಾನ? ಯಾವ ಯಾವ ಸಿನಿಮಾಗಳು, ಆ ಚಿತ್ರಕ್ಕೆ ನಾಯಕ ಯಾರು? ನಾಯಕಿ ಯಾರು ಎಂಬ ಕುತೂಹಲ ಕಾಡುತ್ತಿದೆ ಅಲ್ವಾ.! ನಿಮ್ಮ ಈ ಎಲ್ಲ ಕುತೂಹಲಕ್ಕೂ ಉತ್ತರ ಇಲ್ಲಿದೆ. ಈ ಏಳು ಚಿತ್ರಗಳು ಬಗ್ಗೆ ಸಣ್ಣದೊಂದು ಪರಿಚಯವನ್ನ ನಾವು ಮಾಡಿಕೊಡುತ್ತೇವೆ.

  ಯಾವ ಚಿತ್ರಕ್ಕೆ ಹೋಗಬಹುದು, ಹೋಗಬೇಕು ಎಂಬುದನ್ನ ನೀವೇ ನಿರ್ಧರಿಸಿ. ಹಾಗಿದ್ರೆ, ಆ ಏಳು ಚಿತ್ರಗಳು ಯಾವುದು ಎಂದು ನೋಡೋಣ. ಮುಂದೆ ಓದಿ.....

  ಈ ವಾರ ತೆರೆಗೆ 'ಆ ಒಂದು ದಿನ'

  ಈ ವಾರ ತೆರೆಗೆ 'ಆ ಒಂದು ದಿನ'

  ರವೀಂದ್ರ ಗೌಡ ಎನ್.ಪಾಟೀಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಿಸಿರುವ 'ಆ ಒಂದು ದಿನ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಸಂಜಯ್ ನಿರ್ದೇಶಿಸಿದ್ದಾರೆ. ಶ್ರೀಹರ್ಷ ಅವರ ಸಂಗೀತವಿದೆ. ಬಾದಾಮಿ, ವಿಜಯ್ ದೇಸಾಯಿ, ರಾಜ್ ಬಹದ್ದೂರ್, ಸಿಮ್ರಾನ್ ಮಿಶ್ರಕೋಟಿ, ಆಲೀಶ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  'ದೇವ್ರಂಥ ಮನುಷ್ಯ'

  'ದೇವ್ರಂಥ ಮನುಷ್ಯ'

  ಬಿಗ್ ಬಾಸ್ 4 ಆವೃತ್ತಿಯ ವಿನ್ನರ್ ಪ್ರಥಮ್ ನಾಯಕನಾಗಿ ಅಭಿನಯಿಸಿರುವ ಮೊದಲ ಸಿನಿಮಾ ದೇವ್ರಂಥ ಮನುಷ್ಯ ಚಿತ್ರವೂ ಇದೇ ವಾರ ತೆರೆಗೆ ಬರ್ತಿದೆ. ಕಿರಣ್ ಶೆಟ್ಟಿ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಚಿತ್ರ ಇದಾಗಿದೆ. ತಪ್ಪು ಮಾಡುವುದು ಸಹಜ ಆದರೆ ಅದು ವಿಪರೀತ ಆದರೆ ಏನಾಗುತ್ತದೆ ಎಂಬ ಅಂಶದ ಮೇಲೆ ಈ ಸಿನಿಮಾ ನಿಂತಿದೆ. ಈ ಚಿತ್ರದಲ್ಲಿ ಶ್ರುತಿ ಹಾಗೂ ವೈಷ್ಣವಿ ಕಥಾ ನಾಯಕಿಯರು. ತಬಲಾ ನಾಣಿ, ಸುಚಿಂದ್ರ ಪ್ರಸಾದ್, ಮಜಾ ಟಾಕೀಸ್ ಪವನ್ ಅಲ್ಲದೆ ಕಿರಿಕ್ ಕೀರ್ತಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

  'ಜಂತರ್ ಮಂತರ್' ಈ ವಾರ ಬಿಡುಗಡೆ

  'ಜಂತರ್ ಮಂತರ್' ಈ ವಾರ ಬಿಡುಗಡೆ

  'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಗೋವಿಂದೇಗೌಡ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮಾಡಿರುವ 'ಜಂತರ್ ಮಂತರ್' ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ, ನಯನ, ಸಂಭ್ರಮ, ಗೋವಿಂದೇಗೌಡ, ಹಿತೇಶ್, ಜೊತೆಗೆ ದಿವ್ಯಶ್ರೀ, ಸಂಜು ಬಸಯ್ಯ, ಶೋಭರಾಜ್, ಬಿರಾದರ್, ವಿ.ಮನೋಹರ್ ಅಭಿನಯಿಸಿದ್ದಾರೆ.

  ಈ ವಾರ ತೆರೆಗೆ 'ರಾಜಾಸಿಂಹ'

  ಈ ವಾರ ತೆರೆಗೆ 'ರಾಜಾಸಿಂಹ'

  ಡಾ.ವಿಷ್ಣುವರ್ಧನ್ ಅಭಿನಯಿಸಿದ್ದ 'ಸಿಂಹಾದ್ರಿಯ ಸಿಂಹ' ಚಿತ್ರದ ಮುಂದುವರೆದ ಭಾಗ ಎಂದೇ ಹೇಳಿಕೊಳ್ಳುತ್ತಿರುವ 'ರಾಜಾಸಿಂಹ' ಈ ವಾರ ರಿಲೀಸ್ ಆಗುತ್ತಿದೆ. ಅನಿರುದ್ಧ್ ನಾಯಕರಾಗಿ ಅಭಿನಯಿಸಿರುವ 'ರಾಜಾಸಿಂಹ' ಚಿತ್ರಕ್ಕೆ ರವಿರಾಮ್ ಆಕ್ಷನ್ ಕಟ್ ಹೇಳಿದ್ದಾರೆ. ಜೆಸ್ಸಿಗಿಫ಼್ಟ್ ಸಂಗೀತ ಹಾಗೂ ಸಾಧುಕೋಕಿಲ ಹಿನ್ನಲೆ ಸಂಗೀತವಿದೆ. ಅಂಬರೀಶ್, ಡಾ. ಭಾರತಿ ವಿಷ್ಣುವರ್ಧನ್, ಅನಿರುದ್ಧ್, ನಿಖಿತಾ ತುಕ್ರಾಲ್, ಸಂಜನಾ ಗರ್ಲಾನಿ, ಶರತ್ ಲೋಹಿತಾಶ್ವ, ಅರುಣ್ ಸಾಗರ್, ಬುಲ್ಲೆಟ್ ಪ್ರಕಾಶ್, ಚಿತ್ರಾ ಶೆಣೈ, ವಿಜಯ್ ಚೆಂಡೂರ್, ಸಿ.ಡಿ.ಬಸಪ್ಪ, ಪವನ್ ಮುಂತಾದವರು ಅಭಿನಯಿಸಿದ್ದಾರೆ.

  ಈ ವಾರ ತೆರೆಗೆ 'ಜವ'

  ಈ ವಾರ ತೆರೆಗೆ 'ಜವ'

  ಅಭಯ್ ಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ 'ಜವ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ವಿನಯ್ ಚಂದ್ರ ಸಂಗೀತ ನೀಡಿದ್ದಾರೆ. ಸಾಯಿಕುಮಾರ್, ದಿಲೀಪ್ ರಾಜ್, ಭವಾನಿ ಪ್ರಕಾಶ್, ಕುಶಾಲ್ ಬಿ.ಕೆ, ನಾಗಿಣಿ ಭರಣ, ಶರತ್ ಭಗವಾನ್, ಮದನ್ ಕುಮಾರ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

  ಈ ವಾರ ತೆರೆಗೆ 'ಮಂಜರಿ

  ಈ ವಾರ ತೆರೆಗೆ 'ಮಂಜರಿ

  ವಿಶೃತ್ ನಾಯಕ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ 'ಮಂಜರಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಮ್ಯಾಥ್ಯುಸ್ ಮನು ಸಂಗೀತ ನೀಡಿದ್ದಾರೆ. ಪ್ರಭು ಮುಂಡ್ಕರ್, ರೂಪಿಕ, ವಿಜಯ್ ಚೆಂಡೂರ್, ಮೀಸೆ ಆಂಜನಪ್ಪ, ಅಮಿತ್, ಪವಿತ್ರ, ನಾಗೇಶ್, ಕಿಲ್ಲರ್ ವೆಂಕಟೇಶ್, ಉಗ್ರಂ ಮಂಜು ಸೇರಿದಂತೆ ಹಲವರು ತಾರಬಳಗದಲ್ಲಿದ್ದಾರೆ.

  ಈ ವಾರ ಬಿಡುಗಡೆ 'ಸಂಜೀವ '

  ಈ ವಾರ ಬಿಡುಗಡೆ 'ಸಂಜೀವ '

  ಹೊಸ ಪ್ರಯತ್ನದ ಚಿತ್ರವೆಂಬಂತೆ ಗುರುತಿಸಿಕೊಂಡಿರುವ ಸಂಜೀವ ಚಿತ್ರ ಬಿಡುಗಡೆ ಆಗುತ್ತಿದೆ. ಇದು Rap ಕಿಂಗ್ ಎಂದು ಖ್ಯಾತಿ ಪಡೆದಿರುವ ಚಂದನ್ ಶೆಟ್ಟಿ ಅವರ ಮೊದಲ ಸಂಗೀತ ನಿರ್ದೇಶನ ಮಾಡಿರುವ ಚಿತ್ರ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರುಗಳ ಜೊತೆ ಸಹಾಯಕರಾಗಿ ದುಡಿದ ಬಾಬು, ಅವಿನಾಷ್ ನಿರ್ದೇಶನದ ಪಟ್ಟುಗಳನ್ನು ಸಿನಿಮಾಕ್ಕೆ ನೀಡಿದ್ದಾರೆ. ಚೇತನ್ ಗಂಧರ್ವ, ಲೇಖ ಚಂದ್ರ, ದೇವರಾಜ್, ಸಾಧು ಕೋಕಿಲ, ಶುಭ ಪೂಂಜಾ, ಅಚ್ಯುತ್ ಕುಮಾರ್, ಚಿಕ್ಕಣ್ಣ, ದಡಿಯ ಗಿರಿ ಅಲ್ಲದೆ ಶ್ರೀನಗರ ಕಿಟ್ಟಿ ಹಾಗೂ ಯೋಗೀಶ್ ಅತಿಥಿ ಕಲಾವಿದರಾಗಿ ತಾರಾಗಣದಲ್ಲಿ ಇದ್ದಾರೆ.

  English summary
  7 Kannada movies releasing on this week. Bigg boss kannada 4 winner pratham starrer 'devrantha manushya', Kannada Movie 'manjari', 'Jantar mantar', 'rajasimha', 'sanjeeva', 'java', and 'a ondu dina' movies are hitting screen on february 2nd.
  Thursday, February 1, 2018, 14:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X