»   » ಈ ವಾರ ಕನ್ನಡದಲ್ಲಿ ಬರೋಬ್ಬರಿ ಏಳು ಸಿನಿಮಾ ಬಿಡುಗಡೆ..!

ಈ ವಾರ ಕನ್ನಡದಲ್ಲಿ ಬರೋಬ್ಬರಿ ಏಳು ಸಿನಿಮಾ ಬಿಡುಗಡೆ..!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಈ ವಾರ ಬರೋಬ್ಬರಿ ಏಳು ಸಿನಿಮಾಗಳು ರಿಲೀಸ್ ಆಗಲಿದೆ. ಸಾಮಾನ್ಯವಾಗಿ ಪ್ರತಿ ಶುಕ್ರವಾರ ಕನ್ನಡದಲ್ಲಿ ಮೂರ್ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದರೆ ಈ ಶುಕ್ರವಾರ ಒಂದಲ್ಲ.. ಎರಡಲ್ಲ.. ಏಳು ಸಿನಿಮಾಗಳು ರಿಲೀಸ್ ಆಗಲಿದೆ.

ಯೋಗಿ ಯಾವ ನಟರಿಗೆ ಏನು ಅಡ್ವೈಸ್ ನೀಡಲು ಬಯಸುತ್ತಾರೆ?

ಈ ಏಳು ಸಿನಿಮಾಗಳ ಪೈಕಿ ಬಹುತೇಕ ಹೊಸಬರ ಸಿನಿಮಾಗಳೇ ಇವೆ. ಡಿಫರೆಂಟ್ ಕಥೆ ಹೊಂದಿರುವ ಈ ಸಿನಿಮಾಗಳು ಒಂದೇ ದಿನ ಅದೃಷ್ಟ ಪರೀಕ್ಷೆಗೆ ನಿಂತಿವೆ. ಮುಂದೆ ಓದಿ....

ಕೋಲಾರ

ಲೂಸ್ ಮಾದ ಯೋಗೀಶ್ ನಟನೆಯ 'ಕೋಲಾರ' ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲಿದೆ. ರಿಯಲ್ ಸ್ಟೋರಿಯಾಗಿರುವ 'ಕೋಲಾರ' ಚಿತ್ರ ರೌಡಿ ತಂಗಂ ಕಥೆಯನ್ನು ಹೊಂದಿದೆ.

ಒಂದು ಮೊಟ್ಟೆಯ ಕಥೆ

ವಿಭಿನ್ನ ಕಥೆಯ ಕಾರಣಕ್ಕೆ ಸಖತ್ ನಿರೀಕ್ಷೆ ಹುಟ್ಟಿಸಿರುವ 'ಒಂದು ಮೊಟ್ಟೆಯ ಕಥೆ' ಸಿನಿಮಾ ಕೂಡ ಜುಲೈ 7ಕ್ಕೆ ರಿಲೀಸ್ ಆಗುತ್ತಿದೆ. ಲೂಸಿಯಾ ನಿರ್ದೇಶಕ ಪವನ್ ಕುಮಾರ್ ನಿರ್ಮಾಣದ ಸಿನಿಮಾ ಇದಾಗಿದೆ.

ಡೀಲ್

'ಡೀಲ್' ಎಂಬ ಹೊಸಬರ ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ವಿಜಯ್ ತಮ್ಮಣ್ಣ ಎಂಬುವವರು ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಆದಿ ಲೋಕೇಶ್ ಪೊಲೀಸ್ ಅಧಿಕಾರ ಪಾತ್ರವನ್ನು ಮಾಡಿದ್ದಾರೆ.

ಹೊಂಬಣ್ಣ

ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ 'ಹೊಂಬಣ್ಣ' ಕೂಡ ಇದೇ ಲಿಸ್ಟ್ ನಲ್ಲಿ ಇದೆ. ಅರಣ್ಯ ಒತ್ತುವರಿಯ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲಲಿದೆ ಅಂತ ಹೇಳಲಾಗುತ್ತಿದೆ. ಈಗಾಗಲೇ ಸಿನಿಮಾದ ಹಾಡುಗಳು ಪ್ರೇಕ್ಷಕರ ಮನೆ ಗೆದ್ದಿದೆ.

ಕಥಾ ವಿಚಿತ್ರ

ಇದೇ ವಾರ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳಲ್ಲಿ 'ಕಥಾ ವಿಚಿತ್ರ' ಸಿನಿಮಾ ಕೂಡ ಒಂದು. 'ಕರ್ವ' ಖ್ಯಾತಿಯ ನಟಿ ಅನು ಚಿತ್ರದ ನಾಯಕಿಯಾಗಿದ್ದಾರೆ.

ಶ್ವೇತ

'ಶ್ವೇತ' ಎಂಬ ಹಾರರ್ ಸಿನಿಮಾ ಸಹ ಇದೇ ವಾರ ತೆರೆಗೆ ಬರಲಿದೆ. ರಾಜೇಶ್ ಆರ್ ಬಲಿಪ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಹಳ್ಳಿ ಪಂಚಾಯ್ತಿ

'ತಿಥಿ' ಚಿತ್ರದ ಸೆಂಚುರಿ ಗೌಡ ಮತ್ತು ಗಡಪ್ಪ ಅವರು ನಟಿಸಿರುವ ಹೊಸ ಸಿನಿಮಾ 'ಹಳ್ಳಿ ಪಂಚಾಯ್ತಿ' ಕೂಡ ಇದೇ ವಾರ ಬಿಡುಗಡೆ ಆಗಲು ದಿನಾಂಕ ನಿಗದಿ ಆಗಿದೆ. ಇದರೊಂದಿಗೆ 'ಅಮಾವಾಸ್ಯೆ' ಎಂಬ ಹೊಸಬರ ಸಿನಿಮಾ ಕೂಡ ಅದೇ ದಿನ ರಿಲೀಸ್ ಆಗುವ ಸಾಧ್ಯತೆ ಇದೆ.

English summary
7 kannada movies releasing on this Friday (July 7).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada