ಪಾಪ್ ಕಾರ್ನ್, ಶಿವಾಜಿ ಸೇರಿದಂತೆ ನಾಳೆ 7 ಸಿನಿಮಾಗಳ ಬಿಡುಗಡೆ
ಶಿವರಾತ್ರಿ ಹಬ್ಬದ ವಿಶೇಷವಾಗಿ ಫೆಬ್ರವರಿ 21 ರಂದು ಕನ್ನಡದಲ್ಲಿ 7 ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಇವುಗಳ ಪೈಕಿ 'ಪಾಪ್ ಕಾರ್ನ್ ಮಂಕಿ ಟೈಗರ್' ಹಾಗೂ 'ಶಿವಾಜಿ ಸುರತ್ಕಲ್' ಸಿನಿಮಾಗಳು ಪ್ರಮುಖವಾಗಿದೆ.
'ಪಾಪ್ ಕಾರ್ನ್ ಮಂಕಿ ಟೈಗರ್' ಸೂರಿ ನಿರ್ದೇಶನದ ಸಿನಿಮಾ. 'ಟಗರು' ನಂತರ ಧನಂಜಯ್ ಮತ್ತು ಸೂರಿ ಮತ್ತೆ ಒಂದಾಗಿದ್ದಾರೆ. ಸಿನಿಮಾದ ಟೀಸರ್, ಹಾಡು ಈಗಾಗಲೇ ದೊಡ್ಡ ಹಿಟ್ ಆಗಿದೆ. ಸಿನಿಮಾದ ಮೇಲೆ ಅಷ್ಟೇ ದೊಡ್ಡ ನಿರೀಕ್ಷೆ ಇದೆ. ಚಿತ್ರದಲ್ಲಿ ಮೂವರು ನಾಯಕಿಯರು ಡಾಲಿಗೆ ಜೋಡಿಯಾಗಿದ್ದಾರೆ.
ಶಿವಾಜಿ ಸುರತ್ಕಲ್ ರಮೇಶ್ ಅರವಿಂದ ನಟನೆಯ ಸಿನಿಮಾ. ರಾಧಿಕಾ ನಾರಾಯಣ್ ಸಿನಿಮಾದ ನಾಯಕಿಯಾಗಿದ್ದಾರೆ. ಇದೊಂದು ಪಕ್ಕಾ ಸಸ್ಪೆನ್ಸ್ ಥಿಲ್ಲರ್ ಸಿನಿಮಾವಾಗಿದೆ. ಆಕಾಶ್ ಶ್ರೀವತ್ಸ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಚಿತ್ರದ ಪ್ರೀಮಿಯರ್ ಶೋ ಈಗಾಗಲೇ ನಡೆದಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

ಮಯೂರಿ, ಬಾಲಾಜಿ ಶರ್ಮ ಅಭಿನಯದ ಚಿತ್ರ 'ಮೌನಂ'. ಅವಿನಾಶ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್ ಪಂಡಿತ್ ಚಿತ್ರದ ನಿರ್ದೇಶನ ಮಾಡಿದ್ದಾರೆ.
'ಆದ್ಯಾ' ಚಿರಂಜೀವಿ ಸರ್ಜಾ, ಸಂಗೀತ ಭಟ್, ಶ್ರುತಿ ಹರಿಹರನ್, ರವಿಶಂಕರ್ ಗೌಡ, ಪ್ರಮೊದ್ ಶೆಟ್ಟಿ ಅಭಿನಯಿಸಿರುವ ಸಿನಿಮಾ. ಕೆ ಎಂ ಚೈತನ್ಯ ನಿರ್ದೇಶನ ಮಾಡಿದ್ದಾರೆ. ವಿ ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ.
ಈ ಸಿನಿಮಾಗಳೊಂದಿಗೆ 'ಜ್ಞಾನ ಗಂಗೆ', 'ಓಂ ಶಾಂತಿ ಓಂ', 'ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು' ಎಂಬ ಸಿನಿಮಾಗಳು ಸಹ ನಾಳೆ (ಫೆಬ್ರವರಿ 21) ರಿಲೀಸ್ ಆಗುತ್ತಿವೆ.


Click it and Unblock the Notifications











