For Quick Alerts
  ALLOW NOTIFICATIONS  
  For Daily Alerts

  ಈ ಶುಕ್ರವಾರ 7 ಕನ್ನಡ ಸಿನಿಮಾಗಳ ಬಿಡುಗಡೆ

  |

  ನವೆಂಬರ್ ತಿಂಗಳ ನಾಲ್ಕನೇ ಶುಕ್ರವಾರ ಕನ್ನಡದ 7 ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಕೆಲವು ಸಿನಿಮಾಗಳ ಬಿಡುಗಡೆ ದಿನಾಂಕ ಬದಲಾಗಿರುವ ಕಾರಣ ಈ ವಾರ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ.

  ಹರಿಪ್ರಿಯಾ ನಟನೆಯ 'ಕನ್ನಡ್ ಗೊತ್ತಿಲ್ಲ', ನವರಸ ನಾಯಕ ಜಗ್ಗೇಶ್ ಅಭಿನಯದ 'ಕಾಳಿದಾಸ ಕನ್ನಡ ಮೇಷ್ಟ್ರು', 'ಮನರೂಪ', 'ಮರನಮ್', 'ರಾಜಲಕ್ಷ್ಮಿ', 'ನ್ಯೂರಾನ್' ಹಾಗೂ 'ಅಲೆಕ್ಸ್' ಎಂಬ ಸಿನಿಮಾಗಳು ಈ ವಾರ ತೆರೆಗೆ ಬರುತ್ತಿವೆ.

  ಗಾಂಧಿನಗರದ ತಂತ್ರಗಾರಿಕೆಯಿಂದ ನನ್ನ ಆಸೆ ಈಡೇರಲಿಲ್ಲ- ಜಗ್ಗೇಶ್ಗಾಂಧಿನಗರದ ತಂತ್ರಗಾರಿಕೆಯಿಂದ ನನ್ನ ಆಸೆ ಈಡೇರಲಿಲ್ಲ- ಜಗ್ಗೇಶ್

  'ಕಾಳಿದಾಸ ಕನ್ನಡ ಮೇಷ್ಟ್ರು' ಕವಿರಾಜ್ ನಿರ್ದೇಶನದ ಸಿನಿಮಾ. ಕನ್ನಡ ಭಾಷೆಯ ಬಗ್ಗೆ ಸಿನಿಮಾ ಕಥೆ ಇದೆ. ಚಿತ್ರದಲ್ಲಿ ನಾಯಕ ಜಗ್ಗೇಶ್ ಕನ್ನಡ ಮೇಷ್ಟ್ರು ಪಾತ್ರ ಮಾಡಿದ್ದಾರೆ. ನಾಯಕಿ ಮೇಘನಾ ಇಂಗ್ಲೀಷ್ ಟೀಚರ್ ಆಗಿದ್ದಾರೆ. ಈ ಗಂಡ ಹೆಂಡತಿಯ ನಡುವಿನ ಕಥೆ ಚಿತ್ರದಲ್ಲಿದೆ. ಕಾಮಿಡಿಯ ಜೊತೆಗೆ ಒಂದು ಗಂಭೀರ ವಿಷಯವನ್ನು ಇಲ್ಲಿ ಹೇಳಿದ್ದಾರಂತೆ.

  'ಕನ್ನಡ್ ಗೊತ್ತಿಲ್ಲ' ಈಗಾಗಲೇ ಟ್ರೇಲರ್ ಮೂಲಕ ಗಮನ ಸೆಳೆದ ಸಿನಿಮಾ. ಆರ್ ಜೆ ಮಯೂರ್ ರಾಘವೇಂದ್ರ ಈ ಸಿನಿಮಾದ ನಿರ್ದೇಶಕ. ಹರಿಪ್ರಿಯಾ ಚಿತ್ರದ ನಾಯಕಿ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ನಟ ಧರ್ಮಣ್ಣ ಚಿತ್ರದಲ್ಲಿ ಕ್ಯಾಬ್ ಡ್ರೈವರ್ ಪಾತ್ರ ಮಾಡಿದ್ದು, ಟೀಸರ್ ಗಳಲ್ಲಿ ನಕ್ಕು ನಗಿಸಿದ್ದಾರೆ.

  'ಮನರೂಪ' ಚಿತ್ರದ ವಿಭಿನ್ನ ಪೋಸ್ಟರ್ ಗಳ ಮೂಲಕ ಪ್ರಚಾರ ಪಡೆದಿದೆ. ಹೊಸಬರೆ ಸೇರಿ ಈ ಸಿನಿಮಾ ಮಾಡಿದ್ದಾರೆ. ಇಂದಿನ ಸಮಸ್ಯೆಗಳಿಗೆ ಸಿನಿಮಾ ಕನ್ನಡಿ ಹಿಡಿಯುತ್ತದೆಯಂತೆ. ದಿಲೀಪ್ ಕುಮಾರ್ ಹಾಗೂ ಅನುಷಾ ರಾವ್ ಸಿನಿಮಾದಲ್ಲಿ ನಟಿಸಿದ್ದಾರೆ. ಕಿರಣ್ ಹೆಗ್ಡೆ ಚಿತ್ರದ ನಿರ್ದೇಶನ ಮಾಡಿದ್ದಾರೆ.

  ಕುತೂಹಲ ಕೆರಳಿಸುವ 'ಮನರೂಪ' ಸಿನಿಮಾ ಪೋಸ್ಟರ್ಕುತೂಹಲ ಕೆರಳಿಸುವ 'ಮನರೂಪ' ಸಿನಿಮಾ ಪೋಸ್ಟರ್

  ಈ ಸಿನಿಮಾಗಳ ಜೊತೆಗೆ 'ಮರನಮ್', 'ರಾಜಲಕ್ಷ್ಮಿ', 'ನ್ಯೂರಾನ್' ಹಾಗೂ 'ಅಲೆಕ್ಸ್' ಎನ್ನುವ ಚಿತ್ರಗಳು ನಾಳೆಯೇ ಚಿತ್ರಮಂದಿರಕ್ಕೆ ಬರುತ್ತಿವೆ. ಒಟಟ್ಟು ಈ ವಾರ ಏಳು ಸಿನಿಮಾಗಳು ಪ್ರೇಕ್ಷಕ ಮುಂದೆ ನಿಲ್ಲುತ್ತಿವೆ.

  English summary
  7 Kannada movies will be releasing on November 22nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X